ಉಪಚುನಾವಣೆ; ಜೆಡಿಎಸ್ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ: ಹೆಚ್‌ ಡಿ ರೇವಣ್ಣಗೆ ಕೊಕ್

ಬೆಂಗಳೂರು , ಅಕ್ಟೋಬರ್‌ 31: ರಾಜ್ಯದಲ್ಲಿ ಮೂರು ಕ್ಷೇತ್ರ ವಿಧಾನಸಭಾ ಉಪಚುನಾವಣೆಗೆ ಜೆಡಿಎಸ್ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ ಮಾಡಿದೆ. ಮೂರು ಕ್ಷೇತ್ರಗಳ ಪೈಕಿ ಜೆಡಿಎಸ್‌ ಚನ್ನಪಟ್ಟಣದಿಂದ ನಿಖಿಲ್‌ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸ್ದು, ಈ ಒಂದು ಕ್ಷೇತ್ರದ ಚುನಾವಣೆಗಾಗಿ ನಲವತ್ತು ಜನರ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯ ಜೆಡಿಎಸ್ ನಾಯಕರ ಪೈಕಿ ಬಹುತೇಕ ಎಲ್ಲರ ಹೆಸರೂ ಈ ಪಟ್ಟಿಯಲ್ಲಿದೆ. ಆದರೆ, ಪ್ರಮುಖವಾಗಿ, ಹಳೇ ಮೈಸೂರು ಭಾಗದ ಇಬ್ಬರು ನಾಯಕರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. 40 ಜನರ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಹೆಚ್ ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿಗೆ ಸ್ಥಾನ ನೀಡಲಾಗಿದ್ದು,ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರಿಗೆ ಕೊಕ್ ನೀಡಲಾಗಿದೆ.

Karnataka By Elections Jds Released Star Campaigner List For Channapatna

ಹಾಸನದ ಹೊಳೇನರಸೀಪುರ ಕ್ಷೇತ್ರದ ಶಾಸಕ ಮತ್ತು ಸಹೋದರರೂ ಆಗಿರುವ ಎಚ್.ಡಿ.ರೇವಣ್ಣ ಹೆಸರು ಪಟ್ಟಿಯಲ್ಲಿ ಅಚ್ಚರಿಯಾಗಿ ಕೈಬಿಡಲಾಗಿದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ, ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ.

ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರಿಗೆ ಕೊಕ್ ನೀಡಲಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೇ, ಮುಡಾ ಹಗರಣದ ಕುರಿತು ಸಿದ್ದರಾಮಯ್ಯ ರಾಜೀನಾಮೆ ಕುರಿತು ಮಾತನಾಡಿದ ಜೆಡಿಎಸ್‌ ನಾಯಕ ಜಿ ಟಿ ದೇವೇಗೌಡ ಅವರು, ಕುಮಾರಸ್ವಾಮಿ ವಿರುದ್ಧವೇ ವಾಗ್ಧಾಳಿ ನಡೆಸಿ ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ್ದರು.

ಜಿಡಿಎಲ್ ಪಿ ನಾಯಕ ಸ್ಥಾನ ಸಿಗದಿದ್ದಕೆ ಬೇಸರಗೊಂಡಿದ್ದ ಜಿ.ಟಿ. ದೇವೇಗೌಡ ಸಿಎಂ ಸಿದ್ದರಾಮಯ್ಯ ಬ್ಯಾಟ್ ಬೀಸಿದ್ದರು. ದಸರಾ ಮಹೋತ್ಸವದಲ್ಲಿ ಮಾತನಾಡಿದ ಜಿ.ಟಿ. ದೇವೇಗೌಡ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಎಫ್ ಐಆರ್ ಆದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ? ಎಂದು ಸಿಎಂ ಪರ ಮಾತನಾಡಿದ್ದರು. ಹೀಗಾಗಿ ಜಿಟಿ ದೇವೇಗೌಡರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರ ಹೆಸರನ್ನು ಕೈಬಿಟ್ಟಿದ್ದರೂ, ಜೆಡಿಎಸ್‌ ಹಿರಿಯ ನಾಯಕ ಜಿ ಟಿ ದೇವೇಗೌಡ ಪುತ್ರ ಹಾಗೂ ಹುಣಸೂರು ಶಾಸಕ ಹರೀಶ್ ಅವರಿಗೆ ಪಟ್ಟಿಯಲ್ಲಿ ಸ್ಥಾನವನ್ನ ಕಲ್ಪಿಸಿಕೊಡಲಾಗಿದೆ.

ಜೆಡಿಎಸ್‌ ಪ್ರಮುಖ ಸ್ಟಾರ್ ಪಟ್ಟಿ ಇಲ್ಲಿದೆ ನೋಡಿ

1. ಎಚ್.ಡಿ.ದೇವೇಗೌಡ
2. ಎಚ್.ಡಿ.ಕುಮಾರಸ್ವಾಮಿ
3. ಎಂ. ಮಲ್ಲೇಶ್ ಬಾಬು
4. ಸುರೇಶ್ ಬಾಬು ಸಿ.ಬಿ
5. ಅನಿತಾ ಕುಮಾರಸ್ವಾಮಿ
6. ಹರೀಶ್ ಗೌಡ
7. ಬಂಡೆಪ್ಪ ಕಾಶಾಂಪೂರ
8. ಸಾ.ರಾ.ಮಹೇಶ್
9. ಎಚ್.ಕೆ.ಕುಮಾರಸ್ವಾಮಿ
10. ಸಿ.ಎಸ್.ಪುಟ್ಟರಾಜು
11. ಡಾ.ಕೆ.ಅನ್ನದಾನಿ
12. ಸಮೃದ್ದಿ ಮಂಜುನಾಥ್
13. ಡಾ. ಟಿ.ಎ.ಸರವಣ
14. ಎಸ್.ಎಲ್.ಭೋಜೇಗೌಡ
15. ಸುರೇಶ್ ಗೌಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+