ರಾಜ್ಯ ಕಾಂಗ್ರೆಸ್‌ಗೆ ಮುಜುಗರ: ಶಿಕ್ಷೆ ಕಡಿಮೆ ಮಾಡಿ ಪ್ಲೀಸ್‌ ಎಂದ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್!

Karnataka by-election: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಉಪ ಚುನಾವಣೆ ಸಮಯದಲ್ಲೇ ಭಾರೀ ಮುಜುಗರವೊಂದು ಎದುರಾಗಿದೆ. ಕಾಂಗ್ರೆಸ್‌ನ ಪ್ರಭಾವಿ ಶಾಸಕ ಜೈಲು ಸೇರುತ್ತಿದ್ದು, ಕೋರ್ಟ್‌ನಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಮೂರು ವಿಧಾನಸಭೆಗಳ ಉಪ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ಗೆ ಈ ವಿಷಯ ಇರುಸುಮುರುಸು ತಂದಿರುವುದಂತೂ ಸುಳ್ಳಲ್ಲ.

ಕಾರವಾರದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಇದೀಗ ಕೊನೆಯ ಹಂತಕ್ಕೆ ತಲುಪಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ 400 ಪುಟಗಳ ತೀರ್ಪುನ್ನು ಜನಪ್ರತಿನಿಧಿಗಳ ಕೋರ್ಟ್ ನೀಡಿದೆ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಆದೇಶಿಸಲಾಗಿದ್ದು, ಅವರನ್ನು ಪೊಲೀಸರು ವಶಕ್ಕೂ ಪಡೆದಿದ್ದಾರೆ. ಗುರುವಾರ ಈ ಪ್ರಕರಣದ ಅಂತಿಮ ವಿಚಾರಣೆ ನಡೆದಿದ್ದು, ಶಿಕ್ಷೆ ಪ್ರಮಾಣ ಶನಿವಾರ ಪ್ರಕಟವಾಗುವ ಸಾಧ್ಯತೆ ಇದೆ.

Karnataka by-election Congress MLA Satish Sail said please reduce the punishment

ಕೋರ್ಟ್‌ನಲ್ಲಿ ಶಾಸಕ ಕಣ್ಣೀರು: ಇನ್ನು ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್ ಅವರು ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ಜಡ್ಜ್‌ ಮುಂದೆ ಕಣ್ಣೀರು ಹಾಕಿದ್ದಾರೆ ಎನ್ನುವುದು ವರದಿಯಾಗಿದೆ. ಸತೀಶ್ ಸೈಲ್ ಅವರು ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿಗೂ ಸಹ ಆರೋಗ್ಯದ ಸಮಸ್ಯೆ ಇದೆ. ಅಲ್ಲದೇ ನನ್ನ ಆರೋಗ್ಯದಲ್ಲೂ ಸಮಸ್ಯೆ ಇದೆ. ಸ್ವಲ್ಪ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಪ್ಲೀಸ್‌ ಎಂದು ರಿಕ್ವೆಸ್ಟ್‌ ಮಾಡಿದ್ದಾರೆ.

ಸತೀಶ್ ಸೈಲ್ ಅವರ ಪರವಾದ ಮಂಡಿಸಿರುವ ವಕೀಲರು ಇದರಲ್ಲಿ ಸತೀಶ್ ಸೈಲ್‌ರ ವೈಯಕ್ತಿಕ ಪಾತ್ರವಿಲ್ಲ. ಅವರ ಕಂಪನಿಯ ಮೂಲಕ ಅದಿರು ಸಾಗಿಸಲಾಗಿದೆ ಅಷ್ಟೇ. ಇನ್ನು ಈ ಅದಿರು ರಫ್ತಿನಿಂದ ಬಂದಿರುವ ದುಡ್ಡಿಗೆ ಆದಾಯ ತೆರಿಗೆಯನ್ನು ಸಹ ಕಟ್ಟಿದ್ದಾರೆ. ಸರ್ಕಾರದ ಖಜಾನೆಗೆ ಇದರಿಂದ ನಷ್ಟವಾಗಿಲ್ಲ. ಶಾಸಕ ಸತೀಶ್ ಸೈಲ್ ಅವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಅನ್ವಯ ಮೂರು ವರ್ಷ ಶಿಕ್ಷೆಗೆ ಅವಕಾಶವಿದೆ. 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ಕೊಡುವಂತೆ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ: ಅದಿರು ನಾಪತ್ತೆ ಪ್ರಕರಣ ಸುದೀರ್ಘ 14 ವರ್ಷ ಹಳೆಯ ಪ್ರಕರಣವಾಗಿದೆ. 2010ರಲ್ಲಿ ಅರಣ್ಯಪ್ರದೇಶದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ನಡೆದಿತ್ತು. ಇದರಲ್ಲಿ ಲೋಕಾಯುಕ್ತ ಅಧಿಕಾರಿಗಳು ನೂರಾರು ಕೋಟಿ ಮೌಲ್ಯದ ಅಕ್ರಮ ಅದಿರನ್ನು ಜಪ್ತಿ ಮಾಡಿದ್ದರು. ಈ ರೀತಿ ಜಪ್ತಿ ಮಾಡಲಾಗಿದ್ದ ಅದಿರನ್ನು ಬೇಲೆಕೇರಿ ಬಂದರಿನಲ್ಲಿ ಸಂಗ್ರಹ ಮಾಡಿ ಹಿಡಲಾಗಿತ್ತು. ಸೀಜ್‌ ಮಾಡಿ ಇರಿಸಿದ್ದ ಅದಿರಿನ ಪ್ರಮಾಣವು 8ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಆದರೆ, ಅದರಲ್ಲಿ ಬರೋಬ್ಬರಿ 6 ಲಕ್ಷ ಮೆಟ್ರಿಲ್ ಟನ್ ನಾಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸದಂತೆ ತೀರ್ಪು ಪ್ರಕಟವಾಗುತ್ತಿದೆ.

ಕಾಂಗ್ರೆಸ್‌ಗೆ ಮುಜುಗರ: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಈಗಾಗಲೇ ಹೇಳಿಕೊಳ್ಳುವಷ್ಟು ತಲೆನೋವುಗಳು ಇವೆ. ಇದೀಗ ಈ ಪ್ರಕರಣ ಹಳೆಯದಾದರೂ, ಚುನಾವಣೆ ಸಮಯದಲ್ಲಿ ಭಾರೀ ಮುಜುಗರವನ್ನೇ ಸೃಷ್ಟಿ ಮಾಡಿದೆ. ಉಪ ಚುನಾವಣೆಯ ಸಮಯದಲ್ಲಿ ಬಿಜೆಪಿ ಈ ವಿಷಯವನ್ನೂ ಪ್ರಸ್ತಾಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+