ಕರ್ನಾಟಕದಲ್ಲಿ ಬಸ್ ಬಂದ್.. 1000 ರೂಪಾಯಿ ಕೊಟ್ಟರೂ ಸಿಗದ ಆಟೋಗಳು & ಕ್ಯಾಬ್ ಸಿಗದೆ ಸಂಕಷ್ಟ... Karnataka Bus

ಬಂದ್.. ಬಂದ್.. ಬಂದ್.. ಹೀಗೆ ಕರ್ನಾಟಕದಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳ ಓಡಾಟ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಒಂದು ಕಡೆ ಕಂಪನಿಗೆ ಹೋಗಿ ಕೆಲಸ ಮಾಡಬೇಕು, ಇನ್ನೊಂದು ಕಡೆ ಬಸ್ ಇಲ್ಲ ಏನು ಮಾಡೋದು? ಅನ್ನೋ ಚಿಂತೆ ಕೂಡ ಕಾಡುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಸರ್ಕಾರಿ ಸಾರಿಗೆ ಬಸ್ ಇಲ್ಲದೆ ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ತಮ್ಮ ಜಾಗಕ್ಕೆ ಹೋಗಲು ಜನರು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ಕರ್ನಾಟಕದಲ್ಲಿ ಬಸ್ ಬಂದ್.. 1000 ರೂಪಾಯಿ ಕೊಟ್ಟರೂ ಸಿಗದ ಆಟೋಗಳು & ಕ್ಯಾಬ್ ಸಿಗದೆ ಸಂಕಷ್ಟ...

ಅಂದಹಾಗೆ ಕರ್ನಾಟಕ ಸರ್ಕಾರ & ಸಾರಿಗೆ ನೌಕರರ ನಡುವೆ ದೊಡ್ಡ ಯುದ್ಧವೇ ಇದೀಗ ಶುರುವಾಗಿದ್ದು, ಭರ್ಜರಿ ತಿಕ್ಕಾಟ ಎದುರಾಗಿದೆ. ಅದರಲ್ಲೂ ತಮ್ಮ ಹಲವು ಬೇಡಿಕೆಗಳನ್ನ ಈಡೇರಿಕೆ ಮಾಡಬೇಕು ಅಂತಾ ಪಟ್ಟು ಹಿಡಿದು ಕೂತಿರುವ ಸಾರಿಗೆ ನೌಕರರು ತಮ್ಮ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಾರಿಗೆ ಅಧಿಕಾರಿಗಳು ಕೂಡ ಸಿಕ್ಕಾಪಟ್ಟೆ ಟೆನ್ಷನ್ ಅಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿರುವ ಸಮಯದಲ್ಲೇ ಖಾಸಗಿ ಬಸ್ & ಆಟೋ, ಕ್ಯಾಬ್ ವ್ಯವಸ್ಥೆ ಇದೆ ಬಿಡು ಅಂತಾ ನಂಬಿಕೊಂಡು ಬಸ್ ನಿಲ್ದಾಣಕ್ಕೆ ಬಂದವರಿಗೂ ಇದೀಗ ಶಾಕ್ ಎದುರಾಗಿದೆ...

Karnataka Bus Passengers Are Paying More To Auto And Cab On August 5 Of 2025

1000 ರೂಪಾಯಿ ಕೊಟ್ಟರೂ ಸಿಗದ...

ಸಂಬಳ ಹೆಚ್ಚು ಮಾಡಬೇಕು ಅನ್ನೋದು ಕೂಡ ಸೇರಿದಂತೆ ವಿವಿಧ ಡಿಮ್ಯಾಂಡ್ ಈಡೇರಿಕೆಗೆ ಆಗ್ರಹಿಸಿ ಇಂದು ಕೆಎಸ್‌ಆರ್‌ಟಿಸಿ & ಬಿಎಂಟಿಸಿ ಸೇರಿ ಇಡೀ ಕರ್ನಾಟಕದ ಸರ್ಕಾರಿ ಬಸ್ ನೌಕರರು ಬೃಹತ್ ಹೋರಾಟ ಶುರು ಮಾಡಿದ್ದಾರೆ. ಇನ್ನು ಸರ್ಕಾರಿ ಬಸ್ ನೌಕರರ ಜೊತೆಗೆ ಸಿಎಂ ಸೇರಿದಂತೆ ದೊಡ್ಡ ದೊಡ್ಡವರು ಮೀಟಿಂಗ್ ನಡೆಸಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ ಇಡೀ ಕರ್ನಾಟಕದಲ್ಲಿ ಇದೀಗ ಬಸ್ ಓಡಾಟ ಇಲ್ಲದೇ ತೀವ್ರ ಪರದಾಟವೂ ಶುರುವಾಗಿದೆ. ಹೀಗಿದ್ದಾಗಲೇ, ಕರ್ನಾಟಕದಲ್ಲಿ ಬಸ್ ಬಂದ್.. 1000 ರೂಪಾಯಿ ಕೊಟ್ಟರೂ ಸಿಗದ ಆಟೋಗಳು & ಕ್ಯಾಬ್ ಸಿಗದೆ ಸಂಕಷ್ಟ...

10 ಕಿಲೋ ಮೀಟರ್ ಪ್ರಯಾಣಕ್ಕೆ...

ಇಂದು ಸರ್ಕಾರಿ ಬಸ್ ಸೇವೆ ಇಲ್ಲದಿರುವ ಕಾರಣಕ್ಕೆ ಖಾಸಗಿ ಬಸ್‌ಗಳ ಜೊತೆಗೆ ಕರ್ನಾಟಕ ಸರ್ಕಾರ ಇದೀಗ ಒಪ್ಪಂದ ಮಾಡಿಕೊಂಡಿದೆ. ಹೀಗಿದ್ದರೂ ಬಸ್‌ಗಳ ಸಂಖ್ಯೆ ಸಾಲುತ್ತಿಲ್ಲ, ಲಕ್ಷ ಲಕ್ಷ ಪ್ರಯಾಣಿಕರು ಇದೀಗ ಬಸ್ ನಿಲ್ದಾಣಗಳಲ್ಲಿ ಪರದಾಡುತ್ತಿದ್ದಾರೆ. ಇದೇ ಸಮಯವನ್ನು ಕೆಲವರು ತಮ್ಮ ಲಾಭಕ್ಕೆ ಪರಿಸ್ಥಿತಿ ಬಳಕೆ ಮಾಡಿಕೊಳ್ತಾ ಇದ್ದಾರೆ ಅನ್ನೋ ಆರೋಪದ ನಡುವೆ ಇದೀಗ ಬಹುತೇಕ ಕಡೆಗಳಲ್ಲಿ ಆಟೋ ಹಾಗೂ ಕ್ಯಾಬ್ ಮಾತನಾಡಿಸುವುದು ಕೂಡ ಕನಸಿನ ಮಾತು ಆಗಿದೆ ಅಂತಿದ್ದಾರೆ ಜನರು. ಯಾಕೆ ಅಂದ್ರೆ ಆಟೋ & ಕ್ಯಾಬ್ ಬಾಡಿಗೆ ಡಬಲ್ ಅಲ್ಲ ತ್ರಿಬಲ್ ಆಗಿ, ಸಾಮಾನ್ಯ ಜನ & ಬಡವರು ಪ್ರಯಾಣ ಮಾಡಲು ಪರದಾಡುತ್ತಿದ್ದಾರೆ ಎಂಬ ಆರೋಪವು ಕೂಡ ಕೇಳಿ ಬಂದಿದೆ.

ಈ ಬಗ್ಗೆ ಜನ ಆರೋಪ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾ & ಟಿವಿ ಚಾನಲ್‌ಗಳಲ್ಲೂ ಪ್ರಸಾರ ಆಗುತ್ತಿದೆ. ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಎಂದರೆ, 10 ಕಿಲೋ ಮೀಟರ್ ಪ್ರಯಾಣಕ್ಕೆ ಕೆಲವು ಕಡೆ ಆಟೋ ಚಾಲಕರು 1,000 ರೂಪಾಯಿ ತನಕ ಡಿಮ್ಯಾಂಡ್ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಇನ್ನು ಕ್ಯಾಬ್ ಚಾಲಕರಂತೂ ಕೈಗೆ ಸಿಗುತ್ತಿಲ್ಲ ಅಂತಾ ಪ್ರಯಾಣಿಕರು ಆರೋಪಿಸುತ್ತಾ ಇದ್ದು, ಇಷ್ಟೆಲ್ಲದರ ನಡುವೆ ಕೂಡ ಪ್ರಾಮಾಣಿಕ ಚಾಲಕರು ಪ್ರಯಾಣಿಕರ ಸೇವೆಗೆ ಸಿದ್ಧವಾಗಿದ್ದಾರೆ ಎಂಬುದೇ ಈಗ ಇರುವ ನೆಮ್ಮದಿಯ ಸುದ್ದಿ. ಈ ಎಲ್ಲಾ ಬೆಳವಣಿಗೆ ನೋಡುತ್ತಿರುವ ಜನ, ಆದಷ್ಟು ಬೇಗ ಬಸ್ ಮುಷ್ಕರ ಮುಗಿದು ಹೋಗಲಿ ಅಂತಾ ಆಗ್ರಹ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+