ಕರ್ನಾಟಕದಲ್ಲಿ ಬಸ್ ಬಂದ್.. 5,000 ಖಾಸಗಿ ಬಸ್ ವ್ಯವಸ್ಥೆ ಮಾಡಿದ ಸರ್ಕಾರ... Karnataka Bus

ಕರ್ನಾಟಕದಲ್ಲಿ ಬಸ್ ಬಂದ್... ಕರ್ನಾಟಕದಲ್ಲಿ ಬಸ್ ಇಲ್ಲದೆ ಪರದಾಡುತ್ತಿರುವ ಜನರು... ಸರ್ಕಾರಿ ಬಸ್ ಇಲ್ಲದೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಒದ್ದಾಟ... ಅಂದಹಾಗೆ ಇದು ಜುಲೈ 5 ಮಂಗಳವಾರ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿ & ಪ್ರತಿಯೊಂದು ಜಿಲ್ಲೆಯಲ್ಲೂ ಕಂಡುಬಂದ ದೃಶ್ಯ. ಈಗಾಗಲೇ ಈ ಬಗ್ಗೆ ಘೋಷಣೆ ಹೊರಡಿಸಿರುವ ಸರ್ಕಾರಿ ಬಸ್ ಸಿಬ್ಬಂದಿ, ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಸ್ ಓಡಾಟ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ, ಕರ್ನಾಟಕದಲ್ಲಿ ಬಸ್ ಬಂದ್.. 5,000 ಖಾಸಗಿ ಬಸ್ ವ್ಯವಸ್ಥೆ ಮಾಡಿದ ಸರ್ಕಾರ...

ಸಂಬಳ ಹೆಚ್ಚು ಮಾಡಬೇಕು ಅನ್ನೋದು ಕೂಡ ಸೇರಿದಂತೆ ವಿವಿಧ ಡಿಮ್ಯಾಂಡ್ ಈಡೇರಿಕೆಗೆ ಆಗ್ರಹಿಸಿ ಇಂದು ಕೆಎಸ್‌ಆರ್‌ಟಿಸಿ & ಬಿಎಂಟಿಸಿ ಸೇರಿ ಇಡೀ ಕರ್ನಾಟಕದ ಸರ್ಕಾರಿ ಬಸ್ ನೌಕರರು ಬೃಹತ್ ಹೋರಾಟ ಶುರು ಮಾಡಿದ್ದಾರೆ. ಇನ್ನು ಸರ್ಕಾರಿ ಬಸ್ ನೌಕರರ ಜೊತೆಗೆ ಸಿಎಂ ಸೇರಿದಂತೆ ದೊಡ್ಡ ದೊಡ್ಡವರು ಮೀಟಿಂಗ್ ನಡೆಸಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ ಇಡೀ ಕರ್ನಾಟಕದಲ್ಲಿ ಇದೀಗ ಬಸ್ ಓಡಾಟ ಇಲ್ಲದೇ ತೀವ್ರ ಪರದಾಟವೂ ಶುರುವಾಗಿದೆ. ಹೀಗಿದ್ದಾಗಲೇ, ಕರ್ನಾಟಕದಲ್ಲಿ ಬಸ್ ಬಂದ್.. 5,000 ಖಾಸಗಿ ಬಸ್ ವ್ಯವಸ್ಥೆ ಮಾಡಿದ ಸರ್ಕಾರ...

Karnataka Bus Passengers Are Facing This On August 5 Of 2025

10 ಕಿಲೋ ಮೀಟರ್ ಪ್ರಯಾಣಕ್ಕೆ...

ಇಂದು ಸರ್ಕಾರಿ ಬಸ್ ಸೇವೆ ಇಲ್ಲದಿರುವ ಕಾರಣಕ್ಕೆ ಖಾಸಗಿ ಬಸ್‌ಗಳ ಜೊತೆಗೆ ಕರ್ನಾಟಕ ಸರ್ಕಾರ ಇದೀಗ ಒಪ್ಪಂದ ಮಾಡಿಕೊಂಡಿದೆ. ಹೀಗಿದ್ದರೂ ಬಸ್‌ಗಳ ಸಂಖ್ಯೆ ಸಾಲುತ್ತಿಲ್ಲ, ಲಕ್ಷ ಲಕ್ಷ ಪ್ರಯಾಣಿಕರು ಇದೀಗ ಬಸ್ ನಿಲ್ದಾಣಗಳಲ್ಲಿ ಪರದಾಡುತ್ತಿದ್ದಾರೆ. ಇದೇ ಸಮಯವನ್ನು ಕೆಲವರು ತಮ್ಮ ಲಾಭಕ್ಕೆ ಪರಿಸ್ಥಿತಿ ಬಳಕೆ ಮಾಡಿಕೊಳ್ತಾ ಇದ್ದಾರೆ ಅನ್ನೋ ಆರೋಪದ ನಡುವೆ ಇದೀಗ ಬಹುತೇಕ ಕಡೆಗಳಲ್ಲಿ ಆಟೋ ಹಾಗೂ ಕ್ಯಾಬ್ ಮಾತನಾಡಿಸುವುದು ಕೂಡ ಕನಸಿನ ಮಾತು ಆಗಿದೆ ಅಂತಿದ್ದಾರೆ ಜನರು. ಯಾಕೆ ಅಂದ್ರೆ ಆಟೋ & ಕ್ಯಾಬ್ ಬಾಡಿಗೆ ಡಬಲ್ ಅಲ್ಲ ತ್ರಿಬಲ್ ಆಗಿ, ಸಾಮಾನ್ಯ ಜನ & ಬಡವರು ಪ್ರಯಾಣ ಮಾಡಲು ಪರದಾಡುತ್ತಿದ್ದಾರೆ ಎಂಬ ಆರೋಪವು ಕೂಡ ಕೇಳಿ ಬಂದಿದೆ.

ಈ ಬಗ್ಗೆ ಜನ ಆರೋಪ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾ & ಟಿವಿ ಚಾನಲ್‌ಗಳಲ್ಲೂ ಪ್ರಸಾರ ಆಗುತ್ತಿದೆ. ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಎಂದರೆ, 10 ಕಿಲೋ ಮೀಟರ್ ಪ್ರಯಾಣಕ್ಕೆ ಕೆಲವು ಕಡೆ ಆಟೋ ಚಾಲಕರು 1,000 ರೂಪಾಯಿ ತನಕ ಡಿಮ್ಯಾಂಡ್ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಇನ್ನು ಕ್ಯಾಬ್ ಚಾಲಕರಂತೂ ಕೈಗೆ ಸಿಗುತ್ತಿಲ್ಲ ಅಂತಾ ಪ್ರಯಾಣಿಕರು ಆರೋಪಿಸುತ್ತಾ ಇದ್ದು, ಇಷ್ಟೆಲ್ಲದರ ನಡುವೆ ಕೂಡ ಪ್ರಾಮಾಣಿಕ ಚಾಲಕರು ಪ್ರಯಾಣಿಕರ ಸೇವೆಗೆ ಸಿದ್ಧವಾಗಿದ್ದಾರೆ ಎಂಬುದೇ ಈಗ ಇರುವ ನೆಮ್ಮದಿಯ ಸುದ್ದಿ. ಈ ಎಲ್ಲಾ ಬೆಳವಣಿಗೆ ನೋಡುತ್ತಿರುವ ಜನ, ಆದಷ್ಟು ಬೇಗ ಬಸ್ ಮುಷ್ಕರ ಮುಗಿದು ಹೋಗಲಿ ಅಂತಾ ಆಗ್ರಹ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+