Karnataka Budget 2023 : ಕರ್ನಾಟಕ ಸರ್ಕಾರ: ಆಡಳಿತ ನಿರ್ವಹಣೆಗೆಂದು ಅನುದಾನದ ಬಹುತೇಕ ಹಣ ಖರ್ಚು
ರಾಜ್ಯ ಸರ್ಕಾರವು 2022-23ನೇ ಆರ್ಥಿಕ ವರ್ಷದಲ್ಲಿ 2.4ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿತ್ತು. ಅದರಲ್ಲಿ ಯಾವುದಕ್ಕೆಲ್ಲ ಎಷ್ಟೇಷ್ಟು ಖರ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ 10: ರಾಜ್ಯ ಸರ್ಕಾರ ಇದೇ ಫೆಬ್ರವರಿ 17ರಂದು ಮುಂದಿನ 2023-24ನೇ ಹಣಕಾಸು ವರ್ಷದ ಬಜೆಟ್ ಮಂಡನೆ ಮಾಡಲಿದೆ. ಇದರ ಅಂದಾಜು ವೆಚ್ಚ ಎಷ್ಟು, ಯಾವ ಯೋಜನೆಗಳು, ಏನು ಘೋಷಣೆಗಳಾಗುತ್ತವೆ ಎಂಬದನ್ನು ತಿಳಿಯಲು ಜನರು ಕಾತರರಾಗಿದ್ದಾರೆ. ಇದಕ್ಕು ಮುನ್ನ ರಾಜ್ಯ ಸರ್ಕಾರ ಈ ಹಿಂದಿನ 2022-23ನೇ ಆರ್ಥಿಕ ವರ್ಷದಲ್ಲಿ ಮಂಡನೆಯಾಗಿದ್ದ ಬಜೆಟ್ ಮೊತ್ತವೆಷ್ಟು, ಅದರಲ್ಲಿ ಎಷ್ಟು ಹಣ ಯಾವುದಕ್ಕೆಲ್ಲ ಬಳಸಲಾಗಿದೆ ಎಂಬುದರ ಸಮಗ್ರ ಮಾಹಿತಿ ತಿಳಿಯೋಣ.
ರಾಜ್ಯ ಸರ್ಕಾರವು 2022-23ನೇ ಆರ್ಥಿಕ ವರ್ಷದ ಒಟ್ಟು ಬಜೆಟ್ ಅನುದಾನದಲ್ಲಿ ಕಳೆದ ಮೂರು ತ್ರೈಮಾಸಿಕದಲ್ಲಿ ಶೇ.43 ಹಣವನ್ನು ವ್ಯಯಿಸಿದೆ. ಆ ಪೈಕಿ ಒಂದಷ್ಟು ಮಹತ್ವವಾದ ಇಲಾಖೆಗಳ ಅಡಿಯಲ್ಲಿ ಅಧಿಕ ಹಣ ಖರ್ಚು ಮಾಡಿದೆ.
ಬಿಜೆಪಿ ಸರ್ಕಾರ ಕಳೆದ ವರ್ಷ 2.4ಲಕ್ಷ ಕೋಟಿ ರೂಪಾಯಿಗಳ ಒಟ್ಟು ಬಜೆಟ್ ಅನ್ನು ಮಂಡನೆ ಮಾಡಿತ್ತು. ಅದರಲ್ಲಿ ಹಂಚಿಕೆಯ 1.4 ಲಕ್ಷ ಕೋಟಿ ರೂಪಾಯಿಗಳಲ್ಲಿ ಸುಮಾರು 43% (ಸುಮಾರು 62,000ಕೋಟಿ ರೂ.) ಖರ್ಚು ಮಾಡಲಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ರಾಜ್ಯ ಸರ್ಕಾರಿ 43 ಇಲಾಖೆಗಳಲ್ಲಿ ಒಟ್ಟು 7.7 ಲಕ್ಷ ಖಾಲಿ ಹುದ್ದೆಗಗಳಲ್ಲಿ ಸುಮಾರು 2.6 ಲಕ್ಷ ಹುದ್ದೆಗಳು ಇವೆ. ಈ ಹಿನ್ನೆಲೆಯಲ್ಲಿ ಸರ್ಕಾರ 81,500 ಕೋಟಿ ರೂಪಾಯಿನ್ನು ಉತ್ಪಾದನಾ ವೆಚ್ಚವೆಂದು ವರ್ಗೀಕರಿಸಿ ಖರ್ಚು ಮಾಡಿದೆ.
ಇದರಲ್ಲಿ ಬಂಡವಾಳ ಸ್ವತ್ತು, ಹಲವು ಸಹಾಯಧನ, ಯೋಜನೆಗಳು ಒಳಗೊಂಡಿವೆ.
ಹಣಕಾಸು ಸೊರಿಕೆ ತಡೆಗೆ ಡಿಬಿಟಿ ಅಳವಡಿಕೆ
ಹಣಕಾಸು/ಆದಾಯ ಕೊರತೆಯಾಗದಂತೆ ಸಹಾಯಧನ (Subsidy) ಗಳನ್ನು ಕಟಿಬದ್ಧಗೊಳಿಸಲು ಸೂಚಿಸಿದೆ. ಸಬ್ಸಿಡಿ ಗುರಿ ತಲುಪಿ ಸೋರಿಕೆ ತಡೆಯಲು ಸರ್ಕಾರ ಹೊಸ ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ (ಡಿಬಿಟಿ) ಆಧಾರಿತ ಪಾವತಿ ಕಾರ್ಯವಿಧಾನ ಅಳವಡಿಸಿಕೊಂಡಿದೆ. ಮುಖ್ಯವಾಗಿ ಅನುದಾನದ ಹಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ (16,214 ಕೋಟಿ ರೂ.) ಮತ್ತು ಹಣಕಾಸು ಇಲಾಖೆಗೆ (ರೂ. 15,807.5 ಕೋಟಿ ರೂ.) ವೇತನ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಖರ್ಚು ಮಾಡಲಾಗಿದೆ ಎಂದು ರಾಜ್ಯ ಅಭಿವೃದ್ಧಿ ಕಾರ್ಯಕ್ರಮಗಳ (KDP) ಪರಾಮರ್ಶೆಯಲ್ಲಿ ಈ ಮೇಲಿನ ದತ್ತಾಂಶಗಳನ್ನು ಉಲ್ಲೇಖಿಸಲಾಗಿದೆ.

ಕೆಡಿಪಿ ಪರಾಮರ್ಶೆ ಪ್ರಕಾರ, ಹಣಕಾಸು ಇಲಾಖೆಯಿಂದ ಏಪ್ರಿಲ್ 2022 ರಿಂದ ಮಾರ್ಚ್ 2023ರ ವರೆಗೆ 65,304 ಕೋಟಿ ರೂ. ವೇತನವನ್ನು (ರೂ. 41,288 ಕೋಟಿ) ಪಾವತಿಸಬೇಕಾಗುತ್ತದೆ. ಇನ್ನೂ ಪಿಂಚಣಿ ಗಾಗಿಯು 24,016 ಕೋಟಿ ರೂ. ತೆಗೆದಿರಿಸಬೇಕಾಗುತ್ತದೆ. ಈ ಪ್ರತಿ ಮಾಸಿಕದಲ್ಲಿ ವ್ಯಯಿಸಬೇಕಾದ ವೆಚ್ಚಗಳಾಗಿವೆ. 2022ರ ಡಿಸೆಂಬರ್ 31ರ ವೇಳೆಗೆ ರಾಜ್ಯವು ಈಗಾಗಲೇ 48,977 ಕೋಟಿ ರೂ. ವೇತನ (30,965.4 ಕೋಟಿ ರೂ.) ಮತ್ತು ಪಿಂಚಣಿಗೆ (18,011.7 ಕೋಟಿ ರೂ.) ಖರ್ಚು ಮಾಡುತ್ತಿದೆ.
ಅನುದಾನದ ಇನ್ನಿತರ ಖರ್ಚು ವೆಚ್ಚಗಳು
ಹಣಕಾಸು ಇಲಾಖೆಯು ಸಂಬಳ, ಪಿಂಚಣಿ ಮತ್ತು ಆಡಳಿತಾತ್ಮಕ ವೆಚ್ಚಗಳಷ್ಟೇ ಅಲ್ಲದೇ ಪೂರ್ತಿ ಆರ್ಥಿಕ ವರ್ಷಕ್ಕೆ ಸಾಲದ ಮೇಲಿನ ಬಡ್ಡಿ ಸಹ ಪಾವತಿಸಬೇಕು. ಅದಕ್ಕಾಗಿ ಈವರೆಗೆ ಸರ್ಕಾರ 29,395 ಕೋಟಿ ರೂಪಾಯಿ ಪಾವತಿಸಿದೆ.
ಸರ್ಕಾರ ತಾನು ಮಾಡುವ ಒಟ್ಟು ವೆಚ್ಚವನ್ನು ಬರುವ ಆದಾಯದ 1.2-ಲಕ್ಷ-ಕೋಟಿ ರೂಪಾಯಿಯಷ್ಟಾಗಿದೆ. ಬಂಡವಾಳ ವೆಚ್ಚದಲ್ಲಿ ರಾಜ್ಯ ಸರ್ಕಾರವು ಸಾಧನೆ ಮಾಡಿದೆ ಎಂದು ಹಣಕಾಸು (ವೆಚ್ಚ) ಕಾರ್ಯದರ್ಶಿ ಪಿ.ಸಿ.ಜಾಫರ್ ಮತ್ತು ಹಣಕಾಸು (ಬಜೆಟ್ ಮತ್ತು ಸಂಪನ್ಮೂಲ) ಕಾರ್ಯದರ್ಶಿ ಎಕ್ರೂಪ್ ಕೌರ್ ಗಮನ ಸೆಳೆದಿದ್ದಾರೆ. ಇದುವರೆಗೆ ಸರ್ಕಾರ ಶೇಕಡಾ 65-75 ರಷ್ಟು ಬಂಡವಾಳ ವೆಚ್ಚಕ್ಕೆಂದು ಹಣ ಮೀಸಲಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯು (NIPFP) ಮಾಜಿ ನಿರ್ದೇಶಕ ಗೋವಿಂದ್ ರಾವ್ ಅವರು, ನೀಡಲಾಗುವು ವೇತನ ಹಾಗೂ ಪಿಂಚಣಿಗಳನ್ನು ನಿಯಂತ್ರಿಸುವ ಮೂಲಕ ಆದಾಯ ವೆಚ್ಚ ಸರಿಯಾಗಿ ಹೊಂದಿಕೆ ಮಾಡಬಹುದು. ಈ ಮೂಲಕ ಹುದ್ದೆಗಳ ತರ್ಕಬದ್ಧಗೊಳಿಸಬಹುದು. ಈ ಸಂಬಂಧ ಮಾಜಿ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಪರಿಶೀಲಿಸುತ್ತದೆ ಎಂದು ತಿಳಿಸಿದರು.












Click it and Unblock the Notifications