Mekedatu Project: ರಾಜ್ಯ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ಆದ್ಯತೆ: ಘೋಷಣೆ ಆಗಿದ್ದೇನು?
ಬೆಂಗಳೂರು, ಫೆಬ್ರವರಿ 16: ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗ ಜಿಲ್ಲೆಗಳಿಗೆ ಕುಡಿಯಲು ನೀರು ಒದಗಿಸಬಹುದಾದ ಮತ್ತು ಭವಿಷ್ಯದಲ್ಲಿ ನೀರಿನ ಹಾಹಾಕಾರವಾದಂತೆ ತಡೆಯುವ ಮೇಕೆದಾಟು ಯೋಜನೆ (Mekedatu Dam Project)ಗೆ ಕುರಿತು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.
ಮೇಕೆದಾಟು ಯೋಜನೆಗಾಗಿ ಈ ಹಿಂದೆ ಬೃಹತ್ ಪಾದಾಯಾತ್ರೆ ಕೈಗೊಂಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್ ನಲ್ಲಿ 'ಮೇಕೆದಾಟು ಯೋಜನೆಗೆ ಪ್ರತ್ಯೇಕ ಯೋಜನಾ ವಿಭಾಗ ಸ್ಥಾಪನೆ' ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಈ ಮೂಲಕ 'ಮೇಕೆದಾಟು ಯೋಜನೆ ಜಾರಿ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅದರ ಜಾರಿಗೆ ಆದ್ಯತೆ ನೀಡಿದೆ. ಕಾವೇರಿ ನೀರಿಗೆ ಕರ್ನಾಟಕ ತಮಿಳುನಾಡು ಗಡಿಯಲ್ಲಿ ಅರಣ್ಯ ಪ್ರದೇಶದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡುವುದರಿಂದ ಎರಡು ರಾಜ್ಯಗಳ ಕಾವೇರಿ ತೀರದ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಈ ಹಿಂದೆ ಸರ್ಕಾರ ವಾದಿಸಿತ್ತು.
ಪ್ರತಿ ಬಾರಿ ಕಾವೇರಿ ನೀರು ಬಿಡಲು ಎರಡು ರಾಜ್ಯಗಳ ಮಧ್ಯೆ ವಿವಾದ ಸೃಷ್ಟಿಯಾಗುತ್ತಿದೆ. ಈ ರೀತಿ ಆಗದಂತೆ ಈ ಮೇಕೆದಾಟು ಯೋಜನೆ ಸಹಾಯಕ್ಕೆ ಬರಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಪಿಸಿಸಿ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಅವರು ಪಾದಯಾತ್ರೆ ಹಮ್ಮಿಕೊಂಡು ಗಮನ ಸೆಳೆದಿದ್ದರು.












Click it and Unblock the Notifications