Karnataka Budget 2023: ರಾಜ್ಯದ ನೀರಾವರಿ ಕ್ಷೇತ್ರಕ್ಕೆ 25ಸಾವಿರ ಕೋಟಿ ಅನುದಾನ!
2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25ಸಾವಿರ ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ.
ಬೆಂಗಳೂರು ಫೆಬ್ರವರಿ 17: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಶುಕ್ರವಾರ ಬೊಮ್ಮಾಯಿ ಸರಕಾರ ತನ್ನ ಅಧಿಕಾರಾವಧಿಯ ಕೊನೆಯ ಬಜೆಟ್ ಮಂಡಿಸಿದೆ. ಮುಂಬರುವ ಹಣಕಾಸು ವರ್ಷಕ್ಕೆ ಒಟ್ಟು 3.09 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಸರ್ಕಾರ ಮಂಡಿಸಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಘೋಷಣೆಗಳನ್ನು ಮಾಡಲಾಗಿದೆ.
2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25ಸಾವಿರ ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಹಂತ ಮೂರರ ಯೋಜನೆಗೆ 5000 ಕೋಟಿ ಅನುದಾನ ಮೀಸಲಿಡಲಾಗಿದೆ. ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 1000 ಕೋಟಿ ಅನುದಾನ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5300 ಕೋಟಿ ಅನುದಾನ, ಪಶ್ಚಿಮ ವಾಹಿನಿ ಎರಡನೇ ಹಂತದ ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ 378 ಕೋಟಿ ಅನುದಾನ, ಒಟ್ಟು 11,236 ಕೋಟಿ ಅಂದಾಜು ವೆಚ್ಚದ 38 ಯೋಜನೆಗಳ ಅನುಷ್ಠಾನದ ಜೊತೆಗೆ 1.5 ಲಕ್ಷ ಎಕರೆಗೆ ನೀರಾವರಿ ಸಾಮರ್ಥ್ಯದ ಸೃಜನೆಯ ಗುರಿಯಾಗಿದೆ.
ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಭರಪೂರ ಅನುದಾನ.@BSBommai #ಜನಸ್ನೇಹಿಬಜೆಟ್#BharavaseyaBudget2023 pic.twitter.com/ceFWWA3arS
— CM of Karnataka (@CMofKarnataka) February 17, 2023
ವಸತಿಗೆ ಸಂಬಂಧಿಸಿದ ಯೋಜನೆಗಳು-
*ಎಲ್ಲ ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಲು 500 ಕೋಟಿ ರೂ.

*ಸರ್ಕಾರದ ವಸತಿ ಯೋಜನೆಗಳಿಗಾಗಿ ಸುಮಾರು 2,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.
*'ನಮ್ಮ ನೆಲೆ' ಯೋಜನೆಯಡಿ ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ಮೂರನೇ ಒಂದು ಭಾಗದಷ್ಟು ನಿವೇಶನಗಳು ಅಂದರೆ 10,000 ನಿವೇಶನಗಳನ್ನು ಇಡಬ್ಲ್ಯುಎಸ್‌ಗೆ ವಿತರಿಸಲಾಗುವುದು.
*19 ನೌಕರರ ರಾಜ್ಯ ವಿಮಾ ಕ್ಲಿನಿಕ್‌ಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗುವುದು.
*ಶಿಕ್ಷಣ ಕ್ಷೇತ್ರಕ್ಕೆ ಕಳೆದ ವರ್ಷ 31,980 ಕೋಟಿ ರೂ.ನಿಂದ 37,960 ಕೋಟಿ ರೂ.ಗೆ ಅನುದಾನ ಹೆಚ್ಚಿಸಲಾಗಿದೆ.
*ಸಿಎಂ ಬೊಮ್ಮಾಯಿ ಪ್ರಕಾರ, 2023-24ರ ಬಂಡವಾಳ ಹೂಡಿಕೆಯ ಅಂದಾಜು ಹಿಂದಿನ ವರ್ಷಕ್ಕಿಂತ 30.4 ಪ್ರತಿಶತ ಹೆಚ್ಚಾಗಿದೆ.

*NREGA ಅಡಿಯಲ್ಲಿ, 2023-24 ರಲ್ಲಿ 88 ಲಕ್ಷ ಜನರಿಗೆ 1800 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯೋಗವನ್ನು ಒದಗಿಸಲಾಗುವುದು.
*ಜಲ ಜೀವನ್ ಮಿಷನ್‌ಗೆ 6,234 ಕೋಟಿ ರೂ.
*ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 25 ಕಿ.ಮೀ ರಸ್ತೆಗಳಿರುವ 5 ಸಾವಿರ ಕಿ.ಮೀ ರಸ್ತೆಗಳ ಅಭಿವೃದ್ಧಿಗೆ 300 ಕೋಟಿ ರೂ.












Click it and Unblock the Notifications