ಕುಮಾರಸ್ವಾಮಿ ಬಜೆಟ್ 2019: ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

Recommended Video

      karnataka budget 2019 : ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ..!

      ಬೆಂಗಳೂರು, ಫೆಬ್ರವರಿ 08: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರದಂದು ಮಂಡಿಸಿದ ಬಜೆಟ್ ನಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ನಿರೀಕ್ಷಿಸಿದಂತೆ ಹೆಚ್ಚಿನ ಅನುದಾನ ಸಿಕ್ಕಿದೆ.

      ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡಲಾಗಿದೆ, ಕುಮಾರಸ್ವಾಮಿ ಅವರು ತಮ್ಮ ಮೊದಲ ಬಜೆಟ್ ನಲ್ಲಿ ಘೋಷಿಸಿದ ಜನಪ್ರಿಯ ಯೋಜನೆಗಳು ಮುಂದುವರೆಸಿಕೊಂಡು ಹೋಗಲಾಗಿದೆ. ರೈತರ ಸಾಲಮನ್ನಾ ಹಾಗೂ ಯೋಜನೆಗಳಿಗೆ ಹಣ ಸಂಗ್ರಹ ಮಾಡುವ ಉದ್ದೇಶದಿಂದ ನಿರೀಕ್ಷೆಯಂತೆ ಮದ್ಯಪಾನ ಪ್ರಿಯರಿಗೆ ಆಘಾತ ನೀಡಿದ್ದಾರೆ.

      ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ

      ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ

      ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹಾಲಿ ಇರುವ ಶೇ.150 ರಿಂದ ಶೇ.175ಕ್ಕೆ ಹೆಚ್ಚಿಸಲು, ಡ್ರಾಟ್ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಹಾಲಿ ಇರುವ ಶೇ.115 ರಿಂದ ಶೇ.150ಕ್ಕೆ ಹೆಚ್ಚಿಸಲು, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹಾಲಿ ಇರುವ ಪ್ರತಿ ಬಲ್ಕ್ ಲೀಟರ್‍ಗೆ ರೂ.5 ರಿಂದ ರೂ. 10ಕ್ಕೆ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀಟರ್‍ಗೆ ರೂ.12.50 ರಿಂದ ರೂ.25ಕ್ಕೆ ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ.

      ಆಲ್ಕೋಹಾಲಿಕ್ ಬಿವೆರೇಜಸ್ (ಎಲ್.ಎ.ಬಿ) ಮೇಲಿನ ಅಬಕಾರಿ ಸುಂಕವನ್ನು ಹಾಲಿ ಇರುವ ಪ್ರತಿ ಬಲ್ಕ್ ಲೀಟರ್‍ಗೆ ರೂ.5 ರಿಂದ
      ರೂ.10ಕ್ಕೆ ಹಾಗೂ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.122 ರಿಂದ ಶೇ.150ಕ್ಕೆ ಹೆಚ್ಚಿಸಲು ಸಹಾ ನಾನು ಪ್ರಸ್ತಾಪಿಸುತ್ತೇನೆ.

      ಯಾವುದು ಏರಿಕೆ?:

      ಯಾವುದು ಏರಿಕೆ?:

      * ಬಿಯರ್, ಡ್ರಾಟ್ ಬಿಯರ್, ಮೈಕ್ರೋ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೋಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ.

      * ಮದ್ಯದ ಮೇಲಿನ ಅಬಕಾರಿ ಸುಂಕ ಶೇ4ರಷ್ಟು ಹೆಚ್ಚಳ.

      ಅಬಕಾರಿ ಸುಂಕ

      ಅಬಕಾರಿ ಸುಂಕ

      * ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇ 15 ರಿಂದ ಶೇ 34ಕ್ಕೆ ಏರಿಕೆ
      * ಮದ್ಯ, ತಂಬಾಕು ಉತ್ಪನ್ನಗಳು, ಸಿಗರೇಟು, ಬೀಡಿ ಬೆಲೆ ಈ ಹಿಂದಿನ ಬಜೆಟ್ ನಂತೆ ಜಾರಿಗೆ.

      ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು

      ಕಳೆದ ಬಜೆಟ್ ನಲ್ಲಿ ಪ್ರಸ್ತಾವಿತ ತೆರಿಗೆ ಈ ಬಾರಿಯೂ ಜಾರಿ:

      ಕಳೆದ ಬಜೆಟ್ ನಲ್ಲಿ ಪ್ರಸ್ತಾವಿತ ತೆರಿಗೆ ಈ ಬಾರಿಯೂ ಜಾರಿ:

      * ಡೀಸೆಲ್ ಮೇಲಿನ 19 ರಿಂದ 22 ರಷ್ಟು ಸೆಸ್ ಏರಿಕೆ, ಡೀಸೆಲ್ ಪ್ರತಿ ಲೀಟರ್ ಬೆಲೆ 1.12 ರು ಏರಿಕೆ

      * ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ 30ರಿಂದ 32ಕ್ಕೇರಿಕೆ, ಪೆಟ್ರೋಲ್ ಬೆಲೆ 1.14 ರು ಏರಿಕೆ

      ಖಾಸಗಿ ಸೇವಾ ವಾಹನ

      ಖಾಸಗಿ ಸೇವಾ ವಾಹನ

      * ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಮೀಟರ್​ಗೆ ಶೇ.50ರಷ್ಟು ಹೆಚ್ಚಳ

      * ವಿದ್ಯುತ್ ದರ ಹೆಚ್ಚಳ ಪ್ರತಿ ಯೂನಿಟ್ ಮೇಲೆ 10ರಿಂದ 20 ಪೈಸೆ ಏರಿಕೆ.

      * ವಿದ್ಯುತ್ ಮೇಲಿನ ತೆರಿಗೆ ಶೇ.6ರಿಂದ ಶೇ.9ಕ್ಕೆ ಏರಿಕೆ

      ಯಾವುದು ಇಳಿಕೆ?

      ಯಾವುದು ಇಳಿಕೆ?

      * ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗು ಮೇಲಿನ ಹಿಟ್ಟುಗಳಿಗೆ ತೆರಿಗೆ ವಿನಾಯಿತಿ.
      * ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+