ಕನ್ನಡ ಪತ್ರಿಕೆಗಳಲ್ಲಿ ಕರ್ನಾಟಕ ಬಜೆಟ್ ಮತ್ತು ಕಾವೇರಿ ತೀರ್ಪು
Recommended Video

ಬೆಂಗಳೂರು, ಫೆಬ್ರವರಿ 17: ಕನ್ನಡದ ಸುದ್ದಿಮನೆಗೆ ನಿನ್ನೆ(ಫೆ.17) ಬ್ಯುಸಿ ದಿನ. ಒಂದೆಡೆ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ತೀರ್ಪು, ಇನ್ನೊಂದೆಡೆ ರಾಜ್ಯ ಬಜೆಟ್.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2007 ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ್ದ ತೀರ್ಪನ್ನು ವಿರೋಧಿಸಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಈ ತೀರ್ಪಿನನ್ವಯ ಕರ್ನಾಟಕ ತಮಿಳುನಾಡಿಗೆ ನೀಡುತ್ತಿದ್ದ 192 ಟಿಎಂಸಿ ಅಡಿ ನೀರಿಗೆ ಬದಲಾಗಿ 177.25 ಟಿಎಂಸಿ ಅಡಿ ನೀರನ್ನಷ್ಟೇ ನೀಡಲು ಆದೇಶಿಸಿತು. ಇದರಿಂದಾಗಿ ಕರ್ನಾಟಕದ ಬಳಿ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಉಳಿದಂತಾಗುತ್ತದೆ.
ಇದರೊಂದಿಗೆ ನಿನ್ನೆ ಕಾಂಗ್ರೆಸ್ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ದಾಖಲೆಯ 13 ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಹಲವು ಜನಪರ ಯೋಜನೆಗಳನ್ನು ಘೋಷಿಸಿಸದರು. ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯೂ ಇರುವುದರಿಂದ ಈ ಬಜೆಟ್ ಬಹಳ ಮಹತ್ವದ್ದೆನ್ನಿಸಿತು.
ಈ ಎರಡೂ ಮಹತ್ವದ ಸುದ್ದಿಯನ್ನು ಕನ್ನಡದ ಸುದ್ದಿ ಪತ್ರಿಕೆಗಳು ಹೇಗೆ ಪ್ರಕಟಿಸಿವೆ? ಯಾವುದಕ್ಕೆಷ್ಟು ಮಹತ್ವ ನೀಡಿವೆ? ಯಾವ ಪತ್ರಿಕೆ ನೀಡಿd ಶೀರ್ಷಿಕೆ ಚೆನ್ನಾಗಿದೆ? ಎಂಬೆಲ್ಲ ಮಾಹಿತಿ ನಿಮಗಾಗಿ ಇಲ್ಲಿದೆ.

ಕಾವೇರಿದ ಕರುನಾಡ ಸಂಭ್ರಮ
ಸಮಬಾಳು-ಸಮಪಾಲು, ಚುನಾವಣೆಗೆ ಫೈವ್ ಸ್ಟಾರ್ ಬಜೆಟ್ ಕೊಟ್ಟ ಸಿದ್ದರಾಮಯ್ಯ, ಕನ್ನಡಿಗರಿಗೊಲಿದ ಕಾವೇರಿ, ಶತಮಾನದ ಗೆಲುವು, ರಾಜ್ಯದ ಪಾಲು 14.75 ಟಿಎಂಸಿ ಹೆಚ್ಚಳ ಎಂದು ನಿನ್ನೆಯ ಸುದ್ದಿ ಹೂರಣವನ್ನು ಎರಡೇ ಸಾಲಿನಲ್ಲಿ ವಿವರಿಸಿರುವ ವಿಜಯವಾಣಿ ಪತ್ರಿಕೆ ಕಾವೇರಿದ ಕರುನಾಡ ಸಂಭ್ರಮ ಎಂಬ ಶೀರ್ಷಿಕೆ ನೀಡಿದೆ.

ಜನಪರ ನಿಲುವು ಕಾವೇರಿ ಗೆಲುವು
ಭರವಸೆಗಳ ವರ್ಷ: ಸರ್ವರಿಗೂ ಹರ್ಷ. ಕರ್ನಾಟಕಕ್ಕೆ ಐತಿಹಾಸಿಕ ನ್ಯಾಯದ ಹರ್ಷ ಎಂಬ ಕಿನ್ನರ್ ನೊಂದಿಗೆ 'ಜನಪರ ನಿಲುವು ಕಾವೇರಿ ಗೆಲುವು' ಎಂಬ ಶೀರ್ಷಿಕೆ ನೀಡಿದೆ ವಿಜಯ ಕರ್ನಾಟಕ.

ಎಷ್ಟು ತಿಂಗಳ ಬಜೆಟ್ ಭಾಗ್ಯ? 15 ವರ್ಷಗಳ ಕಾವೇರಿ ಸೌಭಾಗ್ಯ
ಮುಖಪುಟದ ಮುಕ್ಕಾಲು ಪುಟವನ್ನು ಬಜೆಟ್ ಮತ್ತು ಕಾವೇರಿಗಾಗಿ ಈಸಲಿಟ್ಟಿರುವ ಕನ್ನಡ ಪ್ರಭದ ಮುಖಪುಟದ ಕಾರ್ಟೂನ್ ಸುಂದರವಾಗಿದೆ. ಎಷ್ಟು ತಿಂಗಳ ಬಜೆಟ್ ಭಾಗ್ಯ? 15 ವರ್ಷಗಳ ಕಾವೇರಿ ಸೌಭಾಗ್ಯ ಎಂಬ ಅರ್ಥಪೂರ್ಣ ಹೆಡ್ ಲೈನ್ ಗಮನ ಸೆಳೆಯುತ್ತದೆ.

ನಕ್ಕಾಳಾ ಕಾವೇರಿ, ಸಕಲ ಇಷ್ಟಾರ್ಥ ಸಿದ್ದು ರಸ್ತು
ನಕ್ಕಳಾ ಕಾವೇರಿ ಎಂದು ಕಾವೇರಿ ತಾಯಿಗೆ ಮುಖಪುಟದ ಹೆಡರ್ ನಲ್ಲಿ ಜಾಗ ನೀಡಿರುವ ಉದಯವಾಣಿ ಇಂದು ನಡೆಯಲಿರುವ ಅದ್ಧೂರಿ ಮಹಾಮಜ್ಜನಕ್ಕೂ ಅಷ್ಟೇ ಮಹತ್ವ ನೀಡಿದೆ. ಸಿದ್ದರಾಮಯ್ಯ ಬಜೆಟ್ ಗೆ ಸಕಲ ಇಷ್ಟಾರ್ಥ ಸಿದ್ದು ರಸ್ತು ಎಂಬ ಶೀರ್ಷಿಕೆ ನೀಡಿ ಗಮನ ಸೆಳೆದಿದೆ.

ರಾಜ್ಯಕ್ಕೆ ಶುಕ್ರದೆಸೆ
ತಂಪೆರೆದ ಕಾವೇರಿ, ಭಾಗ್ಯಗಳಿಲ್ಲದ ಬಜೆಟ್ ಎಂದು ಎರಡು ಪ್ರಮುಖ ಸುದ್ದಿಗಳನ್ನು ವಿವರಿಸಿರುವ ಹೊಸ ದಿಗಂತ, ರಾಜ್ಯಕ್ಕೆ ಶುಕ್ರದೆಸೆ ಎಂಬ ಶೀರ್ಷಿಕೆ ನೀಡಿದೆ. ಮುಖಪುಟ ವಿನ್ಯಾಸ ಸುಂದರವಾಗಿ ಮೂಡಿಬಂದಿದೆ.

ಶರಣು ಕಾವೇರಿ ತಾಯಿಯೇ, ಮತಾಧೀಶರಿಗೆ ಸಾಷ್ಟಾಂಗ
ಜೈ ಹಿಂದ, ಜೈ ಕಿಸಾನ್, ಜೈ ಕಲ್ಯಾಣ ಎಂದು ಕರ್ನಾಟಕ ಬಜೆಟ್ ಅನ್ನು ವಿವರಿಸಿರುವ ಸಂಯುಕ್ತ ಕರ್ನಾಟಕ, ಶರಣು ಕಾವೇರಿ ತಾಯಿಯೇ ಎಂದು ಶತಮಾನದ ಹಿಗ್ಗನ್ನು ವಿವರಿಸಿದೆ! ಮತಾಧೀಶರಿಗೆ ಸಾಷ್ಟಾಂಗ ಎಂದು ಬಜೆಟ್ ಅನ್ನು ವಿಶ್ಲೇಷಿಸಿದ್ದು ಗಮನ ಸೆಳೆಯುತ್ತದೆ.

ಮತಯಾತ್ರೆಗೆ ಸಿದ್ಧ!
"ಕಾವೇರಿ ಸಮಾಧಾನ ತಂದ ಸುಪ್ರೀಂ ತೀರ್ಪು, ಮತಯಾತ್ರೆಗೆ ಸಿದ್ಧ" ಎಂದು ಎಂದಿನಂತೆಯೇ ಸರಳ ಶೀರ್ಷಿಕೆ, ವಿನ್ಯಾಸದಿಂದ ಗಮನಸೆಳೆಯುತ್ತದೆ ಪ್ರಜಾವಾಣಿ.

ಸರ್ವಜನಪರ ಬಜೆಟ್
ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ಮಧ್ಯಮ ವರ್ಗದವರಿಗೆ ಆದ್ಯತೆ ಎಂಬ ಕಿಕ್ಕರ್ ನೀಡಿ 'ಸರ್ವಜನಪರ ಬಜೆಟ್ ' ಎಂಬ ಶೀರ್ಷಿಕೆ ಎನೀಡಿದೆ ವಾರ್ತಾಭಾರತಿ. ಕಾವೇರಿ ತೀರ್ಪಿಗಿಂತ ಹೆಚ್ಚು ಮಹತ್ವವನ್ನು ವಾರ್ತಾಭಾರತಿ ರಾಜ್ಯ ಬಜೆಟ್ ಗೇ ನೀಡಿದೆ.

ಬೆಳಗೊಳದಲ್ಲಿ ಮಜ್ಜನ, ಕರುನಾಡಿಗೆ ಸುದಿನ
ಬೆಳಗೊಳದಲ್ಲಿ ಮಜ್ಜನ, ಕರುನಾಡಿಗೆ ಸುದಿನ ಎಂದು ಮುಖಪುಟದಲ್ಲಿ ಕಾವೇರಿ ಮತ್ತು ಮಹಾಮಸ್ತಕಾಭಿಷೇಕದ ಸುದ್ದಿಯನ್ನು ನೀಡಿದೆ ವಿಶ್ವವಾಣಿ. 'ಸರ್ವಸ್ಪರ್ಶಿ ಸಿದ್ದು ಬಜೆಟ್' ಎಂದು ಒಂಬತ್ತನೆಯ ಪುಟದಿಂದ ನಾಲ್ಕು ಪುಟವನ್ನು ಬಜೆಟ್ ಗಾಗಿ ಮೀಸಲಿರಿಸಿದೆ ವಿಶ್ವವಾಣಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications