Get Updates
Get notified of breaking news, exclusive insights, and must-see stories!

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಮನೆ ನಿರ್ಮಾಣ ಗುರಿ

ಬೆಂಗಳೂರು, ಫೆಬ್ರವರಿ 16: ಕೇಂದ್ರ ಬಜೆಟ್‌ನಲ್ಲಿ ದೇಶದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸುವ ಬಗ್ಗೆ ಪ್ರಸ್ತಾಪವಾಗಿ ಬಡಜನರಲ್ಲಿ ಆಶಾಭಾವನೆ ಮೂಡಿಸಿರುವ ಬೆನ್ನಲ್ಲೆ ರಾಜ್ಯ ಬಜೆಟ್‌ನಲ್ಲೂ ಕಡ್ಡಾಯ ಸೂರಿನ ಉಲ್ಲೇಖ ಮಾಡಲಾಗಿದೆ.

ಕೇಂದ್ರವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2022ರ ಒಳಗಾಗಿ ದೇಶದ ಎಲ್ಲರಿಗೂ ಮನೆ ಕಟ್ಟಿಕೊಡುವ ಭರವಸೆ ನೀಡಿದೆ. ಇದೇ ಭರವಸೆ ಮುಂದುವರಿಕೆ ಎಂಬಂತೆ ರಾಜ್ಯ ಬಜೆಟ್‌ನಲ್ಲೂ ವಸತಿ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಗ್ರಾಮೀಣ ಮತ್ತು ನಗರ ಭಾಗದಲ್ಲಿ ಐದು ವರ್ಷದಲ್ಲಿ 20 ಲಕ್ಷ ಮನೆ ನಿರ್ಮಿಸುವ ಗುರಿ ನಿಗದಿಪಡಿಸಿಕೊಳ್ಳಲಾಗಿದೆ.

ಬೆಂಗಳೂರಲ್ಲಿ ಮಾತ್ರವೇ ಇರುವ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆಯನ್ನು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.

Array

Array

ಮುಂದಿನ ಐದು ವರ್ಷದಲ್ಲಿ ಗ್ರಾಮೀಣಮತ್ತು ನಗರ ಭಾಗದಲ್ಲಿ 20 ಲಕ್ಷ ಮನೆ ನಿರ್ಮಾಣ ಘೋಷಣೆ ಮಾಡಲಾಗಿದೆ. ಪ್ರಧಾನಿ ಆವಾಸ್ ಯೋಜನೆಯ ಅಡಿಯಲ್ಲಿಯೂ ಲಕ್ಷಾಂತರ ಮನೆಗಳ ನಿರ್ಮಾಣ ಮಾಡುವ ಭರವಸೆ ನೀಡಲಾಗಿದ್ದು, ವಸತಿ ರಹಿತರಿಗೆ ಕಡ್ಡಾಯ ಮನೆ ದೊರಕುವ ಸಾಧ್ಯತೆ ಇದೆ.

ಎಲ್ಲಾ ಜಿಲ್ಲೆಗಳಲ್ಲೂ ಜಾರಿ

ಎಲ್ಲಾ ಜಿಲ್ಲೆಗಳಲ್ಲೂ ಜಾರಿ

ಪ್ರಸ್ತುತ ನಗರ ಪ್ರದೇಶದಲ್ಲಿ ಮಾತ್ರವೇ ಇರುವ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು 'ಮುಖ್ಯಮಂತ್ರಿ ನಗರ ವಸತಿ ಯೋಜನೆ' ಹೆಸರಲ್ಲಿ ರಾಜ್ಯದ ಎಲ್ಲಾ ನಗರಗಳಿಗೂ ವಿಸ್ತರಿಸಲಾಗುವುದೆಂದು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದರು.

ಮಹಾನಗರ ಪಾಲಿಕೆಯಲ್ಲಿ 500 ಎಕರೆ

ಮಹಾನಗರ ಪಾಲಿಕೆಯಲ್ಲಿ 500 ಎಕರೆ

ನಗರ ಪ್ರದೇಶದ ವಸತಿ ಯೋಜನೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2000 ಎಕರೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 500 ಎಕರೆ, ಪುರಸಭೆ ವ್ಯಾಪ್ತಿಯಲ್ಲಿ 250 ಎಕರೆ, ಇತರೆ ಪಟ್ಟಣ ಪ್ರದೇಶದಲ್ಲಿ 100 ಜಮೀನು ಮೀಸಲಿಡಲಾಗುತ್ತದೆ.

ಖಾಸಗಿ ಸಹಭಾಗಿತ್ವ

ಖಾಸಗಿ ಸಹಭಾಗಿತ್ವ

ಟಿಡಿಆರ್ ಮತ್ತು ಹೆಚ್ಚುವರಿ ಎಫ್‌ಎಆರ್‌ ನೀಡುವ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ನಗರಪಾಲಿಕೆಗಳ ವ್ಯಾಪ್ತಿಯ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಮಾಡುವುದಾಗಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+