ಅಲ್ಪಸಂಖ್ಯಾತ, ಹಿಂದುಳಿದ ವರ್ಗಕ್ಕೆ ಸಿದ್ದು ಭರ್ಜರಿ ಬಳುವಳಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18 : ಸಿದ್ದರಾಮಯ್ಯ ಮಂಡಿಸಿರುವುದು ಬಡವರ ಪರ ಬಜೆಟ್ಟಾ, ಕೃಷಿಕರ ಪರ ಬಜೆಟ್ಟಾ ಅಥವಾ ಹಿಂದುಳಿದವರು ಅಲ್ಪಸಂಖ್ಯಾತರನ್ನು ಸಂಪ್ರೀತಗೊಳಿಸಲು ಮಂಡಿಸಲಾಗಿರುವ ಬಜೆಟ್ಟಾ? ಇಡೀ ಬಜೆಟ್ಟಿನ ಮೇಲೆ ಕೂಲಂಕಷವಾಗಿ ಕಣ್ಣಾಡಿಸಿದರೆ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ.

ಅಹಿಂದ ಪರವೇ ಯಾವಾಗಲೂ ಬ್ಯಾಟಿಂಗ್ ಮಾಡುವ ಸಿದ್ದರಾಮಯ್ಯ ಅವರ ಮುಂದಾಲೋಚನೆ, ಹುನ್ನಾರ ಬಲ್ಲವರಿಗೆ ಈ ಬಜೆಟ್ ಬಗ್ಗೆ ಯಾವುದೇ ಅನುಮಾನ ಉಳಿದಿರುವುದಿಲ್ಲ. ನಮ್ಮದು ಬಡವರಪರ ಬಜೆಟ್, ಕೃಷಿಕರ ಪರ ಬಜೆಟ್ ಎನ್ನುವ ಸಿದ್ದರಾಮಯ್ಯ ಅವರಿಗೆ 'ಬಹು ಸಂಖ್ಯಾತ'ರಲ್ಲಿ ಇವರು ಕಾಣಿಸುವುದಿಲ್ಲವೆ?

ವಿಧಾನಸಭೆ ಚುನಾವಣೆ ಬರಲು ಇನ್ನೂ ಸಾಕಷ್ಟು ಕಾಲವಿದೆ. ಆದರೂ ಅಲ್ಪಸಂಖ್ಯಾತರು, ಹಿಂದುಳಿದವರ ಮತಗಳಿಸಲು ಈಗಲೇ ಅಡಿಪಾಯ ಹಾಕಿಬಿಟ್ಟಿದ್ದಾರೆ. ಶುಕ್ರವಾರ ಮಂಡಿಸಿರುವ ಬಜೆಟ್ಟಿನಲ್ಲಿ ಭಾರೀ ಕೊಡುಗೆಗಳನ್ನು, ಅನುದಾನಗಳನ್ನು ಬಳುವಳಿಯಾಗಿ ನೀಡಿದ್ದಾರೆ.

ಇದು ಹಿಂದೂಗಳ ಕಣ್ಣು ಕೆಂಪಾಗುವಂತೆ ಮಾಡಿದರೂ ಅಚ್ಚರಿಯಿಲ್ಲ. ಹಿಂದೂ ದೇವಸ್ಥಾನಗಳಿಗೆ, ಮಠಗಳಿಗೆ ಕವಡೆ ಕಾಸನ್ನೂ ಸಿದ್ದರಾಮಯ್ಯ ನೀಡಿಲ್ಲ. [ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

Karnataka Budget 2016 : For Minorities and backward class

ಸಮಾಜ ಕಲ್ಯಾಣ

* ದೊಡ್ಡಮಟ್ಟದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 125ನೇ ಜನ್ಮ ವರ್ಷಾಚರಣೆ.
* ಎಸ್.ಸಿ/ಎಸ್.ಟಿ. ವಸತಿ ನಿಲಯಗಳಲ್ಲಿ ಪ್ರತಿ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚದಲ್ಲಿ ರು. 200 ಹೆಚ್ಚಳ - 60 ಕೋಟಿ ರು.
* ಎಲ್ಲಾ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಪ್ರವೇಶ ಖಾತ್ರಿಗೆ 100 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸ್ಥಾಪನೆ.
* ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಎಸ್.ಸಿ./ಎಸ್.ಟಿ. ಪಂಗಡಗಳ ಬಾಲಕ ಮತ್ತು ಬಾಲಕಿಯರಿಗಾಗಿ ಹೊಸದಾಗಿ 125 ವಸತಿ ಶಾಲೆಗಳ ನಿರ್ಮಾಣ.
* ಕಲೆ / ವಿಜ್ಞಾನ / ವೈದ್ಯಕೀಯ / ತಾಂತ್ರಿಕ / ವಾಣಿಜ್ಯ / ಕಾನೂನು ಸ್ನಾತಕೋತ್ತರ ಪದವಿಯಲ್ಲಿ 1 ರಿಂದ 5ನೇ ರ‍್ಯಾಂಕ್ ಪಡೆಯುವ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ 50,000 ರು.ಗಳ ಪ್ರಶಸ್ತಿ.
* ಮೆಟ್ರಿಕ್ ನಂತರದ ವಸತಿನಿಲಯಗಳಲ್ಲಿರುವ 75,000 ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಶುಚಿ ಕಿಟ್‌ಗಳ (ಸೋಪ್ಸ್, ಟೂತ್‌ಪೇಸ್ಟ್, ಆಯಿಲ್ ಇತ್ಯಾದಿ) ವಿತರಣೆ.
* ಸಿ.ಎ. / ಐ.ಸಿ.ಡಬ್ಲ್ಯೂ.ಎ. / ಕಂಪನಿ ಸೆಕ್ರೆಟರಿ ವೃತ್ತಿಪರ ಕೋರ್ಸ್‌ಗಳ ಇಂಟರ್ ಮತ್ತು ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ರು.50,000 ಮತ್ತು ರು.1 ಲಕ್ಷ ಪ್ರೋತ್ಸಾಹಧನ.
* 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ ಕೋರ್ಸ್‌ಗಳ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ
ವಿದ್ಯಾರ್ಥಿಗಳಿಗೆ 20,000 ರು. ಪ್ರೋತ್ಸಾಹಧನ.

Karnataka Budget 2016 : For Minorities and backward class

* ಕರ್ನಾಟಕದ ಪರಿಶಿಷ್ಟ ಪಂಗಡಗಳ ಸಮಗ್ರ ಅಧ್ಯಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆ.
* ರು. 2.5 ಲಕ್ಷಕ್ಕಿಂತ ಹೆಚ್ಚು ಮತ್ತು ರು. 10 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಸಿ.ಇ.ಟಿ. ಮೂಲಕ ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಸರ್ಕಾರ ನಿಗದಿ ಪಡಿಸಿದ ಶುಲ್ಕ ಮರುಪಾವತಿಗೆ ಕ್ರಮ.
* ಕೆ.ಎಸ್.ಎಫ್.ಸಿ. ಸಂಸ್ಥೆ ವತಿಯಿಂದ ಎಸ್.ಸಿ./ಎಸ್.ಟಿ. ಉದ್ಯಮಿಗಳಿಗೆ ನೀಡಲಾಗುತ್ತಿರುವ ಶೇ.4ರಷ್ಟು ಬಡ್ಡಿ ಸಹಾಯಧನ ಯೋಜನೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು/ಅಪೆಕ್ಸ್ ಬ್ಯಾಂಕ್/ಡಿಸಿಸಿ ಬ್ಯಾಂಕ್‌ಗಳಿಗೆ ವಿಸ್ತರಣೆ ಹಾಗೂ ಸಾಲ ಮಿತಿ ರು.10 ಕೋಟಿಯಿಂದ ರು.40 ಕೋಟಿಗೆ ಹೆಚ್ಚಳ.
* ಪರಿಶಿಷ್ಟ ಜಾತಿ ಉಪ ಯೋಜನೆ / ಗಿರಿಜನ ಉಪ ಯೋಜನೆಗಳ ಪ್ರಯೋಜನ ಉದ್ದೇಶಿತ ಜನರಿಗೆ ತಲುಪುತ್ತಿರುವ ಬಗ್ಗೆ ಪರಿಶೀಲಿಸಲು ಸೋಷಿಯಲ್ ಆಡಿಟ್ ಕೋಶದ ಸ್ಥಾಪನೆ.
* ಬೆಂಗಳೂರಿನ ಮಾಗಡಿ ರಸ್ತೆಯ ನಿರ್ಗತಿಕ ಪುನರ್ವಸತಿ ಕೇಂದ್ರದಲ್ಲಿ ಡಾ. ಬಾಬು ಜಗಜೀವನರಾಂ ಸಂಶೋಧನಾ ಸಂಸೆ ಸ್ಥಾಪನೆ.
* ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದಿವಂಗತ ಎಲ್.ಜಿ. ಹಾವನೂರ ರವರ ಸ್ಮಾರಕ ನಿರ್ಮಾಣ.
* ಬುಡಕಟ್ಟು ಜನಾಂಗಕ್ಕೆ ಸೇರಿದ ಕೊರಗ, ಮಲಾಯಿಕುಡಿಯ, ಸೊಲಿಗ, ಜೇನು ಕುರುಬ, ಕಾಡುಕುರುಬ, ಇರುಳಿಗ ಇತ್ಯಾದಿ ಜನರ ಸಮಗ್ರ ಅಭಿವೃದ್ಧಿಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ಪ್ರತ್ಯೇಕ ಮಂಡಳಿ ರಚನೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]
Karnataka Budget 2016 : For Minorities and backward class

ಹಿಂದುಳಿದ ವರ್ಗಗಳ ಕಲ್ಯಾಣ

* 87 ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳನ್ನು ಮೆಟ್ರಿಕ್ - ನಂತರ ವಿದ್ಯಾರ್ಥಿನಿಲಯಗಳನ್ನಾಗಿ ಉನ್ನತೀಕರಿಸಲು ಕ್ರಮ - 5.67 ಕೋಟಿ ರು.
* ಬುಡಬುಡಿಕೆ, ಬಯಲು ಪತ್ತಾರ್, ಬುಂಡೆಬೆಸ್ತ, ದೊಂಬಿದಾಸ, ಹೆಳವ, ಗೊಂದಳಿ, ಪಿಚಗುಂಟಾಳ, ಗೊಲ್ಲ ಇತರೆ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಸಮಗ್ರ ಅಭಿವೃದ್ಧಿ - 100 ಕೋಟಿ ರು.
* 37 ಆಶ್ರಮ ಶಾಲೆಗಳನ್ನು ಮೆಟ್ರಿಕ್-ಪೂರ್ವ ಹಾಸ್ಟೆಲ್‌ಗಳನ್ನಾಗಿ ಉನ್ನತೀಕರಣಕ್ಕೆ ಕ್ರಮ.
* ಹಿಂದುಳಿದ ವರ್ಗದ ಆಶ್ರಮ ಶಾಲೆ, ಮೆಟ್ರಿಕ್-ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಊಟದ ವೆಚ್ಚ ರು.200ಕ್ಕೆ ಹೆಚ್ಚಳ ಮತ್ತು 200 ರು.ಗಳನ್ನು ಖಾಸಗಿ ಅನುದಾನಿತ ಹಾಸ್ಟೆಲ್ ಮತ್ತು
ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ನೀಡಲು ಕ್ರಮ.
* ನರ್ಸಿಂಗ್ ವಿದ್ಯಾರ್ಥಿಗಳ ಮಾಸಿಕ ಶಿಷ್ಯವೇತನ - ರು.1,000 ಗಳಿಂದ ರು.1,500ಕ್ಕೆ ಹೆಚ್ಚಳ.
* ಕಾನೂನು ಪದವೀಧರರ ಮಾಸಿಕ ಶಿಷ್ಯವೇತನ - ರು.1,000ಗಳಿಂದ ರು.2,000ಕ್ಕೆ ಹೆಚ್ಚಳ.
* ಐ.ಎ.ಎಸ್./ಕೆ.ಎ.ಎಸ್./ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿ ಅಭ್ಯರ್ಥಿಗಳಿಗೆ ಮಾಸಿಕ ತರಬೇತಿ ಭತ್ಯೆ - ರು.2,000ಕ್ಕೆ ಹೆಚ್ಚಳ.
* ವಸತಿಶಾಲೆ ಇಲ್ಲದ ಹೋಬಳಿಗಳಲ್ಲಿ 155 ವಸತಿ ಶಾಲೆಗಳ ಪ್ರಾರಂಭ - 7.75 ಕೋಟಿ ರು.
* ವಸತಿಶಾಲೆ ಹಾಗು ಹಾಸ್ಟೆಲ್‌ಗಳ ನಿರ್ಮಾಣ - 276.96 ಕೋಟಿ ರು.
* ಡಿ. ದೇವರಾಜ್ ಅರಸ್ ಅವರ ಜನ್ಮಸ್ಥಳವಾದ ಬೆಟ್ಟದತುಂಗ ಮತ್ತು ಕಲ್ಲಹಳ್ಳಿ ಗ್ರಾಮಗಳ ಅಭಿವೃದ್ಧಿ - 20 ಕೋಟಿ ರು.
* ಹಿಂದುಳಿದ ವರ್ಗದ ಸ್ವಸೇವಾ ಸಂಸ್ಥೆಗಳು ನಡೆಸುವ ಪ್ರತಿ ಹಾಸ್ಟೆಲ್‌ಗೆ ಮೂಲಭೂತ ಸೌಕರ್ಯ ಒದಗಿಸಲು ರು.5 ಲಕ್ಷಗಳ ಒಂದಾವರ್ತಿ ಪ್ರೋತ್ಸಾಹಧನ - 12.50 ಕೋಟಿ ರು.
* ಮಡಿವಾಳ, ಸವಿತಾ ಸಮಾಜ, ತಿಗಳ, ಕುರುಬ ಮತ್ತು ಉಪ್ಪಾರ ಜನಾಂಗದ ಅಭಿವೃದ್ಧಿ - ಪ್ರತಿ ಜನಾಂಗಕ್ಕೆ 10 ಕೋಟಿ ರು. - 50 ಕೋಟಿ ರು.
* ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸ್ವಶಕ್ತೀಕರಣ - 10 ಕೋಟಿ ರು.
* 30,000 ಫಲಾನುಭವಿಗಳಿಗೆ ಉದ್ಯಮಾಶೀಲತೆ ತರಬೇತಿ- 5 ಕೋಟಿ ರು. [ರೈತರ ನೆರವಿಗೆ ನಾವಿದ್ದೇವೆ ಎಂದ ಸಿದ್ದರಾಮಯ್ಯ]

Karnataka Budget 2016 : For Minorities and backward class

ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್

* ಅಲ್ಪಸಂಖ್ಯಾತರ ಕಾಲೋನಿಗಳ ಮೂಲ ಸೌಕರ್ಯಾಭಿವೃದ್ಧಿ ಕಾಮಗಾರಿಗೆ - 100 ಕೋಟಿ ರು.
* ಅಲ್ಪಸಂಖ್ಯಾತ ಸಮುದಾಯದ ಯುವಜನತೆಗಾಗಿ ಅನುಭವಶಾಲಿ ನಾಯಕತ್ವ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ ಆಯೋಜನೆ - 13 ಕೋಟಿ ರು.
* ಮದರಸಗಳ ಆಧುನೀಕರಣ ಮತ್ತು ಔಪಚಾರಿಕ ಮತ್ತು ಕಂಪ್ಯೂಟರ್ ಶಿಕ್ಷಣ ಒದಗಿಸಲು ಕ್ರಮ - 50 ಕೋಟಿ ರು.
* ಎಂಎಸ್‌ಡಿಪಿ ಯೋಜನೆ ಅಡಿಯಲ್ಲಿ 10 ವಿದ್ಯಾರ್ಥಿನಿಲಯ/ವಸತಿಶಾಲೆ/ ವಸತಿ ಕಾಲೇಜುಗಳ ಪ್ರಾರಂಭ.
* 6 ಮೊರಾರ್ಜಿ ದೇಸಾಯಿ ವಸತಿಶಾಲೆಗಳು, 10 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಮತ್ತು 2 ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಪದವಿಪೂರ್ವ ವಸತಿ ಕಾಲೇಜುಗಳ ಪ್ರಾರಂಭ.
* 20 ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಮೆಟ್ರಿಕ್ ನಂತರ ವಸತಿ ನಿಲಯಗಳನ್ನಾಗಿ ಮೇಲ್ದರ್ಜೆಗೇರಿಸುವುದು.
* ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಸತಿ ಶಾಲೆಯ/ಕಾಲೇಜುಗಳ ಪ್ರತಿ ವಿದ್ಯಾರ್ಥಿಗೆ ಆಹಾರ ಭತ್ಯೆಯನ್ನು 200 ರು.ಗಳಿಗೆ ಹೆಚ್ಚಳ.
* ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿರುವ ಜಮೀಯ-ಉಲ್-ಉಲಮ್ ಶಿಕ್ಷಣ ಸಂಸ್ಥೆಗೆ ಶೈಕ್ಷಣಿಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 3 ಕೋಟಿ ರು.ಗಳ ಅನುದಾನ ಹಾಗೂ ಬೆಂಗಳೂರಿನ
ಬ್ಯಾರಿ ಸಂಘಕ್ಕೆ ಸೌಹಾರ್ಧ ಭವನ ನಿರ್ಮಾಣಕ್ಕಾಗಿ 3 ಕೋಟಿ ರು.ಗಳ ಅನುದಾನ.
* ಅಲ್ಪಸಂಖ್ಯಾತ ಸಂಬಂಧಿತ ವಿಷಯಗಳ ಬಗ್ಗೆ ಪಿಎಚ್.ಡಿ ಮತ್ತು ಎಂ.ಫಿಲ್. ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಫೆಲೋಶಿಫ್ ನೀಡುವುದು. ಬೀದರ್‌ನ ಮೊಹಮ್ಮದ್ ಗಾವನ್
ಗ್ರಂಥಾಲಯದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ.
* ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಪೀಠ ಸ್ಥಾಪನೆ.
* ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ 500 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ಪ್ರೋತ್ಸಾಹ ಬಹುಮಾನ - ಅನುಕ್ರಮವಾಗಿ 10,000 ರು. ಮತ್ತು 20,000 ರು.
* ಕ್ರೈಸ್ತ ಸಮುದಾಯದ ಅಭಿವೃದ್ಧಿ - 125 ಕೋಟಿ ರು. [ಬಜೆಟ್ 2016 : ಕುಡುಕರ ಜೇಬಿಗೆ ಕತ್ತರಿ ಗ್ಯಾರಂಟಿ]
* ಸರ್ಕಾರಿ/ಖಾಸಗಿ ಕಾಲೇಜುಗಳಲ್ಲಿ ನರ್ಸಿಂಗ್ ಅಧ್ಯಯನ ಮಾಡುತ್ತಿರುವ ಕ್ರಿಶ್ಚಿಯನ್, ಜೈನ್, ಸಿಖ್, ಮುಸ್ಲಿಂ ಮತ್ತು ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವ ಸೌಲಭ್ಯದ ವಿಸ್ತರಣೆ.
* ಬೌದ್ಧ ವಿಹಾರಗಳ ಪುನರ್ ನಿರ್ಮಾಣಕ್ಕೆ ಹಣಕಾಸಿನ ನೆರವು.
* ಬಿ.ಡಿ.ಎ. ವ್ಯಾಪ್ತಿಯ ಸಿ.ಎ. ಸೈಟ್‌ಗಳನ್ನು ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ಒದಗಿಸುವುದು. ಸಮುದಾಯದ ಅಭಿವೃದ್ಧಿಗೆ - 2 ಕೋಟಿ ರು.
* ನಿರ್ಮಾಣ ಹಂತದಲ್ಲಿರುವ ಶಾದಿ ಮಹಲ್‌ಗಳನ್ನು ಪೂರ್ಣಗೊಳಿಸಲು ಕ್ರಮ - 50 ಕೋಟಿ ರು.
* ಬಿದಾಯಿ ಯೋಜನೆ - 50 ಕೋಟಿ ರು.
* ಜೈನ ಬಸೀದಿಗಳ ಅಭಿವೃದ್ಧಿ - 5 ಕೋಟಿ ರು.
* ಹಜ್‌ಭವನ ಕಟ್ಟಡವನ್ನು ಪೂರ್ಣಗೊಳಿಸಲು - 25 ಕೋಟಿ ರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief minister Siddaramaiah has presented Karnataka Budget 2016 for minorities and backward class. He has not given anything for Hindus, maths, temples. No doubt, Siddaramaiah has done this keeping in mind forthcoming assembly election in 2018.
Please Wait while comments are loading...