ಹಲವು ಕಡೆ ಮಂಗಳೂರು ಚಲೋ ತಡೆದ ಪೊಲೀಸರು
ಬೆಂಗಳೂರು, ಸೆಪ್ಟೆಂಬರ್ 05 : ಬೈಕ್ ಜಾಥಾ ಹೊರಟಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಫ್ರೀಡಂಪಾರ್ಕ್‌ನಲ್ಲಿ ಪೊಲೀಸರು ಬಂಧಿಸಿದರು. ಜಾಥಾಕ್ಕಾಗಿ ತಂದಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಂಗಳೂರು ಚಲೋ ಕಾರ್ಯಕ್ರಮದ ಬೈಕ್ ರ್ಯಾಲಿಯನ್ನು ತಡೆಹಿಡಿದು ನಮ್ಮನ್ನು ಹಾಗೂ ಕಾರ್ಯಕರ್ತರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು#MangaluruChalo pic.twitter.com/LdypUVSLwM
— Pratap Simha (@mepratap) September 5, 2017
ಸಮಯ 11 ಗಂಟೆ : ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ತೆರಳುತ್ತಿದ್ದ ಜೋಗುಪಾಳ್ಯದ ಬಿಬಿಎಂಪಿ ಸದಸ್ಯ ಗೌತಮ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Its a shame that the CONgress Government takes away food prepared for @BJP4Karnataka Karyakartas participating in #MangaluruChalo Rally.
— C.T.Ravi (@CTRavi_BJP) September 5, 2017
ಸಮಯ 10 ಗಂಟೆ : ಬಿಬಿಎಂಪಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ನೇತೃತ್ವದ ಬೈಕ್ ಜಾಥಾ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿದೆ. ಫ್ರೀಡಂಪಾರ್ಕ್ ಗೆ ಹೆಬ್ಬಾಳ ಬಸವನಗುಡಿ ಕ್ಷೇತ್ರಗಳಿಂದ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.

ಸಮಯ 9.50 : ಬೆಳಗಾವಿಯಲ್ಲಿ ಮಂಗಳೂರು ಚಲೋ ಬೈಕ್ ಜಾಥಾ ಹೊರಡಲು ಸಿದ್ಧರಾಗಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ನಾಟಕ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ಜಾಥಾ ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಮಂಗಳೂರು ಚಲೋ ತಡೆಯಲು ಮುಂದಾಗಿದ್ದು, ಜಾಥಾ ನಡೆಸಿಯೇ ನಡೆಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಇಂದು ಹೊರಡಲಿದ್ದು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಲಿದೆ. ಅಂದು ಅಲ್ಲಿ ಬೃಹತ್ ಸಮಾವೇಶ ನಡೆಸಲು ಯುವಮೋರ್ಚಾ ಯೋಜನೆ ರೂಪಿಸಿದೆ. ಆದರೆ, ಹಲವು ಜಿಲ್ಲೆಗಳಲ್ಲಿ ಬೈಕ್ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡಿಲ್ಲ.

* ಬೆಂಗಳೂರಿನ ಫ್ರೀಡಂಪಾರ್ಕ್‌ನಿಂದ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ಬೈಕ್ ಜಾಥಾ ಮಂಗಳೂರಿಗೆ ಹೊರಡಲಿದೆ. ನೆಲಮಂಗಲ, ಕುಣಿಗಲ್, ಹಾಸನ ಮೂಲಕ ಜಾಥಾ ಮಂಗಳೂರು ತಲುಪಬೇಕಿದೆ. ಆದರೆ, ಜಾಥಾ ತಡೆಯಲು ಪೊಲೀಸರು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ.
* ಕೋಲಾರದಲ್ಲಿ ಮಂಗಳೂರು ಚಲೋ ಬೈಕ್ ಜಾಥಾಕ್ಕೆ ಹೊರಟಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ಬೈಕ್ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡಿಲ್ಲ.
We strongly condemn arrest of BJYM Karyakarthas in Kolar.@siddaramaiah is creating Emergency like situation in State. #EmergencyinKarnataka
— BJP Karnataka (@BJP4Karnataka) September 5, 2017
* ಹುಬ್ಬಳ್ಳಿಯ ನೆಹರು ಮೈದಾನದಿಂದ ನಿಗದಿಯಂತೆ ಬೈಕ್ ಜಾಥಾ ಹೊರಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಪೊಲೀಸರು ಜಾಥಾಕ್ಕೆ ಅನುಮತಿ ಕೊಟ್ಟಿಲ್ಲ
* ಚಿಕ್ಕಬಳ್ಳಾಪುರದಲ್ಲಿ ಇಂದಿನಿಂದ ಗುರುವಾರ ಬೆಳಗ್ಗೆ 6 ಗಂಟೆ ತನಕ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದಿತ್ಯ ಕಾನಡೆ ಆದೇಶ ಹೊರಡಿಸಿದ್ದಾರೆ. ಬೈಕ್ ಜಾಥಾದಿಂದ ಟ್ರಾಫಿಕ್ ಕಿರಿಕಿರಿ, ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗಲಿದೆ ಎಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಂಗಳೂರು ಚಲೋವನ್ನು ನಿರ್ಬಂಧಿಸಿದ ಮಾತ್ರಕ್ಕೆ ಜನರ ಭಾವನೆಗಳನ್ನು ನಿರ್ಬಂಧಿಸಲು ನಿಮ್ಮಿಂದ ಸಾಧ್ಯವೇ . #MangaluruChalo ಜನ ಶಕ್ತಿ ಸಂಘ ಶಕ್ತಿ
— Sadananda Gowda (@DVSBJP) September 4, 2017
* ಕಲಬುರಗಿಯಲ್ಲಿ ಬೈಕ್ ಜಾಥಾಕ್ಕೆ ಯಾವುದೇ ತಡೆ ನೀಡಿಲ್ಲ ಸುಮಾರು 130 ಬೈಕ್‌ಗಳಲ್ಲಿ ಕಾರ್ಯಕರ್ತರು ಜಾಥಾ ಆರಂಭಿಸಿದ್ದಾರೆ. ಆದರೆ, ಈ ಜಾಥಾ ಮಂಗಳೂರು ತಲುಪಲು ಪೊಲೀಸರು ಬಿಡುತ್ತಾರೆಯೇ? ಕಾದು ನೋಡಬೇಕು.
ಬೈಕ್ ಜಾಥಾ ಏಕೆ? : ಕರ್ನಾಟಕದಲ್ಲಿ ನಡೆದ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆ ಖಂಡಿಸಿ ಮಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಯುವ ಮೋರ್ಚಾ ಬೇಡಿಕೆಗಳು
* ದೇಶದ್ರೋಹಿ ಸಂಘಟನೆಗಳಾದ PFI, KFD, SDFI ಯನ್ನು ರಾಜ್ಯದಲ್ಲಿ ನಿಷೇಧಿಸಬೇಕು
* ಹಿಂದೂ ಸಂಘಟನೆ ಮುಖಂಡರ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಬೇಕು
* ರಮಾನಾಥ್ ರೈ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು
* ಚಾಮರಾಜನಗರದಲ್ಲಿ ಮಂಗಳೂರು ಚಲೋ ಬೈಕ್ ಜಾಥಾಕ್ಕೆ ನಿಷೇಧ ಹೇರಲಾಗಿದೆ.












Click it and Unblock the Notifications