ಕಾಂಗ್ರೆಸ್‌ಗೆ SDPI ಬೆಂಬಲ: ಸಿದ್ದರಾಮಯ್ಯ PFIಗೆ ಬಿಡುಗಡೆ ಭಾಗ್ಯ ನೀಡಿದ್ದಕ್ಕೆ ಅಂದು ಹಿಂದುಗಳ ಕಗ್ಗೊಲೆ, ಇಂದಿನ ಹುನ್ನಾರವೇನು?:
ಬೆಂಗಳೂರು, ಮೇ 04: ಕಾಂಗ್ರೆಸ್‌ನ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಈಗಿನ ನಿಷೇಧಿತ ಪಿಎಫ್‌ಐ ಸಂಘಟನೆಗೆ ಬಿಡುಗಡೆಯ ಭಾಗ್ಯ ನೀಡಿದ್ದರಿಂದ "ಶಾಂತಿಯ ತೋಟ"ದಲ್ಲಿ ಏನೆಲ್ಲಾ ಆಯಿತು, ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು ನಡೆದವು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾದರೆ ಈ ಬಾರಿ ಯಾವ ಕಾಂಗ್ರೆಸ್ ಯಾವ ಹುನ್ನಾರ ಹೆಣೆಯುತ್ತಿದೆ? ಎಂದು ಪ್ರಶ್ನಿಸಿ ಕರ್ನಾಟಕ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದೆ.
2023ರ ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐನಿಂದ ಕಾಂಗ್ರೆಸ್‌ಗೆ ಬೆಂಬಲ ವಿಚಾರ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ. ಟ್ವೀಟ್‌ನಲ್ಲಿ ಕಮ್ಯುನಲ್ ಕಾಂಗ್ರೆಸ್ ಹ್ಯಾಷ್ ಟ್ಯಾಗ್ (#CommunalCongress), ಲಿಂಗಾಯತ ವಿರೋಧಿ ಹ್ಯಾಷ್‌ಟ್ಯಾಗ್ (#LingayatVirodhiCongress), ಹಿಂದೂ ವಿರೋಧಿ ಹ್ಯಾಷ್ ಟ್ಯಾಗ್ (#HinduVirodhiCongress) ಎಂದು ಬಿಜೆಪಿ ಪೋಸ್ಟ್ ಮಾಡಿದೆ.

ಸೋಲಿನ ಸುಳಿವು ಸಿಕ್ಕಿದ್ದೇ ತಡ, ಕಾಂಗ್ರೆಸ್ ಪಕ್ಷ ತನ್ನ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ನಿಷೇಧಿತ ಸಂಘಟನೆಯಾದ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮುಖವಾಣಿಯಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಾಲು ಹಿಡಿದು ಕಾಪಾಡುವಂತೆ ಅಲವತ್ತುಕೊಂಡಿತ್ತು. ಅದು ಈಗ ಫಲ ನೀಡಿದೆ ಎಂದು ಬಿಜೆಪಿ ವ್ಯಂಗ್ಯವಾಗಿದೆ.
2018 ರಲ್ಲೂ ಇಂತಹುದೇ ಬೆಳವಣಿಗೆ ನಡೆದಿತ್ತು & ಅದಕ್ಕೆ ಮುನ್ನಾ ದೇಣಿಗೆಯಾಗಿ @siddaramaiah PFI ಉಗ್ರರಿಗೆ ಬಿಡುಗಡೆ ಭಾಗ್ಯ ಕೊಟ್ಟರು. ನಂತರ "ಶಾಂತಿಯ ತೋಟ"ದಲ್ಲಿ ಏನೆಲ್ಲಾ ಆಯಿತು ಎಂಬುದು ನಮ್ಮೆಲ್ಲರಿಗೂ ಗೊತ್ತು - 23 ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು.
— BJP Karnataka (@BJP4Karnataka) May 4, 2023
ಹಾಗಾದರೆ #CommunalCongress ಈಗ ಯಾವ ಹುನ್ನಾರ ಹೆಣೆಯುತ್ತಿರಬಹುದು?
2/4 pic.twitter.com/gCsCyniXia
ಎಸ್‌ಡಿಪಿಐ ಬೆಂಬಲ ಪಡೆದ ಕಾಂಗ್ರೆಸ್ ಹುನ್ನಾರ?
ಸ್ವಂತ ಬಲದ ಮೇಲೆ ಗೆಲ್ಲೋದು ಬಿಡಿ, ಸಹಾಯವಿಲ್ಲದೆ ಚುನಾವಣೆಗೆ ಸ್ಪರ್ಧಿಸಲು ಸಹ ಕಮ್ಯೂನಲ್ ಕಾಂಗ್ರೆಸ್ ಕೈಯಲ್ಲಿ ಆಗುತ್ತಿಲ್ಲ ಎಂದು ಗೇಲಿ ಮಾಡಿದೆ. 2018 ರಲ್ಲೂ ಇಂತಹದ್ದೇ ಬೆಳವಣಿಗೆ ನಡೆದಿತ್ತು ಎಂದ ಬಿಜೆಪಿ, ಆಗ ಚುನಾವಣೆಗೂ ಮುನ್ನಾ ಇದ್ದ ಕಾಂಗ್ರೆಸ್ ಸಿದ್ದರಾಮಯ್ಯನವರು ಪಿಎಫ್‌ಐ ಉಗ್ರರಿಗೆ ಬಿಡುಗಡೆ ಭಾಗ್ಯ ಕೊಟ್ಟಿದ್ದರು. ನಂತರ 'ಶಾಂತಿಯ ತೋಟ' ಎಂದು ಹೇಳುತ್ತಿರುವ ಈ ನಾಡಿನಲ್ಲಿ 23 ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು ನಡೆದಿವೆ.

ಈಗ ಎಸ್‌ಡಿಪಿಐ ಬೆಂಬಲಕ್ಕೆ ದುಂಬಾಲು ಬಿದ್ದು ಗೋಗರೆದಿದೆ. ಅದಕ್ಕೆ ಪ್ರತಿಫಲವು ಸಿಕ್ಕಿದೆ. ಹಾಗಾದರೆ ಈ ಬಾರಿ ಹಿಂದೂ ವಿರೋಧಿ ಕಾಂಗ್ರೆಸ್ ಯಾವ ಹುನ್ನಾರ ಹೆಣೆಯುತ್ತಿರಬಹುದು? ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
ಈಗಾಗಲೇ ಲಿಂಗಾಯತ ವಿರೋಧಿಯಾದ ಕಾಂಗ್ರೆಸ್ ಪಕ್ಷವು ಬೀದರ್ ಕ್ಷೇತ್ರ ಅಭ್ಯರ್ಥಿ ವೀರಶೈವ ಲಿಂಗಾಯತರನ್ನು ಸೋಲಿಸಲು ಮುಸ್ಲಿಂ ಒಗ್ಗಟ್ಟಿಗೆ ಕರೆ ಕೊಟ್ಟರೂ, ಜಾತ್ಯಾತೀತ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ನಾಯಕರು ಯಾರೂ ಅದನ್ನು ವಿರೋಧಿಸಲೇ ಇಲ್ಲ.
ಹೀಗದ್ದರು ಸಹ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಬಜರಂಗದಳವನ್ನು ನಿಷೇಧಿಸುವ ಸಂಚು ಮಾಡುತ್ತಿದೆ. ಇದು ಹಿಂದು ವಿರೋಧಿ ಕಾಂಗ್ರೆಸ್ ಎಂದು ಬಿಜೆಪಿ ಜರಿದಿದೆ.
ಹಿಂದು ವಿರೋಧಿ ಅಜೆಂಡಾಗೆ ಮತದಾರ ತಕ್ಕ ಶಾಸ್ತಿ
ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಶೇಕಡಾ 13ರಷ್ಟು ಮೀಸಲಾತಿ ನೀಡುತ್ತೇವೆ ಎಂಬ ಕಾಂಗ್ರೆಸ್ ಪಕ್ಷ ಹಾಗೂ 2047ರ ಹೊತ್ತಿಗೆ ಭಾರತವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಕಲ್ಪ ತೊಟ್ಟಿದ್ದ ನಿಷೇಧಿತ ಉಗ್ರ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಇವೆರಡರ ಗುರಿ ಒಂದೇ ಆಗಿದೆ. ಕನ್ನಡದ ಜಾಣ ಮತದಾರ ಹಿಂದುತ್ವ ವಿರೋಧಿ ಕಾಂಗ್ರೆಸ್‌ನ ಈ ಅಜೆಂಡಾವನ್ನು ಇದೇ ಮೇ 10 ರಂದು ಮಕಾಡೆ ಮಲಗಿಸುತ್ತಾರೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.












Click it and Unblock the Notifications