ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು: ಬಿಜೆಪಿ
ಬೆಂಗಳೂರು, ಜನವರಿ 17: ಮಜವಾದಿ ಸಿದ್ದರಾಮಯ್ಯ ಅವರು ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಒಂದಿಷ್ಟು ವಿಚಾರಗಳನ್ನು ಪಟ್ಟಿ ಮಾಡಿದೆ. ರೈತರಿಗೆ ಕೊಡುವ ಪರಿಹಾರ, ಕರ್ನಾಟಕಕ್ಕೆ ಕಾವೇರಿ ನೀರು, ಮಹಿಳೆಯರಿಗೆ ಕೊಡಬೇಕಾದ ರಕ್ಷಣೆ, ಹಿಂದೂ ದೇವಾಲಯಗಳಿಗೆ ಅನುದಾನ, ಈಡೇರಿಸಲಾಗದ ಗ್ಯಾರಂಟಿಗಳು ಇವು ಸಿದ್ದರಾಮಯ್ಯ ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಟೀಕಿಸಿದೆ.
ಮಜವಾದಿ @siddaramaiah ಅವರು ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು :
— BJP Karnataka (@BJP4Karnataka) January 17, 2024
▪ ರೈತರಿಗೆ ಕೊಡುವ ಪರಿಹಾರ
▪ ಕರ್ನಾಟಕಕ್ಕೆ ಕಾವೇರಿ ನೀರು
▪ ಮಹಿಳೆಯರಿಗೆ ಕೊಡಬೇಕಾದ ರಕ್ಷಣೆ
▪ ಹಿಂದೂ ದೇವಾಲಯಗಳಿಗೆ ಅನುದಾನ
▪ ಈಡೇರಿಸಲಾಗದ ಗ್ಯಾರಂಟಿಗಳು
ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು :
▪…
ಸಿದ್ದರಾಮಯ್ಯ ಸಾಹೇಬ್ರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು
▪ ಮೌಲ್ವಿಗಳಿಗೆ ₹10 ಸಾವಿರ ಕೋಟಿ ಕೊಡಬೇಕು
▪ ಮತಾಂಧ ಜಿಹಾದಿಗಳನ್ನು ರಕ್ಷಣೆ ಮಾಡಬೇಕು
▪ ಪಿಎಫ್ಐ ಗೂಂಡಾಗಳನ್ನು ಅಮಾಯಕರೆಂದು ಬಿಡಬೇಕು
▪ ಶಾಲೆಗಳಲ್ಲಿ ಹಿಜಾಬ್ ಹಾಕಿಕೊಂಡು ಹೋಗಬಹುದು
▪ ಗ್ಯಾಂಗ್ ರೇಪ್ ಮಾಡಿದವರನ್ನು ಹೊರ ಬಿಡಬೇಕು

ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿಗಳನ್ನು ಸೃಷ್ಟಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ "ಸಿದ್ದಿ"ಸಿದೆ. ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಯೋಚಿಸಿದ್ದರೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ, ಮಹಿಳೆಯರ ಮೇಲೆ ಹಲ್ಲೆ , ಮಾನಭಂಗಗಳು ನಡೆಯುತ್ತಿರಲಿಲ್ಲ.
ಎಲ್ಲೆಂದರಲ್ಲಿ ಸದಾ ನಿದ್ದೆಗೆ ಜಾರುವುದು ನೀವು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಯವರನ್ನು ಅವಹೇಳನ ಮಾಡಿದರೆ ಜನ ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ. ಸರ್ಕಾರವನ್ನು ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆಯನ್ನು ಬಗೆಹರಿಸಿ.

ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ, ನೇಮಕಾತಿಗಳು ನಡೆಯುವಲ್ಲೆಲ್ಲವೂ ಕಾಂಗ್ರೆಸ್ ಬಂದಾಗಿನಿಂದ ಅಲ್ಲೋಲ ಕಲ್ಲೋಲಗಳೇ ನಡೆಯುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗದಲ್ಲೂ ಹಿತಾಸಕ್ತಿಗಳ ಸಂಘರ್ಷ ಶುರುವಾಗಿದ್ದು ಸಾವಿರಾರು ನೇಮಕಾತಿಗಳ ಸ್ಥಿತಿ ಡೋಲಾಯಮಾನವಾಗಿದೆ. ಕೆಪಿಎಸ್‌ಸಿ ಒಳಗೂ ನಡೆಯುತ್ತಿರುವ ಜಟಾಪಟಿ ನೋಡಿದರೆ ಹಲೋ ಅಪ್ಪ ಎಂದು ಅಲ್ಲಿಗೂ ಫೋನ್ ಹೋದಂತಿದೆ. ಕೆಪಿಎಸ್‌ಸಿಯಲ್ಲೂ #ATMSarkara ಹೊಸ ಎಟಿಎಂ ತೆರೆದಿರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.












Click it and Unblock the Notifications