ಕಾಂಗ್ರೆಸ್‌ ನ ಸಿಎಂ ಹಾಗೂ ಡಿಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು, ಸೆಪ್ಟೆಂಬರ್‌19: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ವಿರುದ್ದ ರಾಜ್ಯ ಬಿಜೆಪಿ ಕಿಡಿಕಾರಿದ್ದು, ರಾಜ್ಯ ಕಾಂಗ್ರೆಸ್‌ ನಲ್ಲಿ ಬಣಗಳ ಜಗಳ ತಾರಕ್ಕಕ್ಕೇರಿದೆ ಎಂದು ಬಿಜೆಪಿ ಕುಟುಕಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಆಕಾಂಕ್ಷಿಗಳು ಹಾಗೂ ಚುನಾವಣೆ ನಂತರ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳನ್ನ ಬಿಜೆಪಿ ಟ್ವೀಟ್‌ ಮೂಲಕ ಪಟ್ಟಿ ಬಿಡುಗಟೆ ಮಾಡಿದೆ.

Karnataka BJP Slams Agianst CM And DCM

ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!

ಜಿ.ಪರಮೇಶ್ವರ್
ಡಿ.ಕೆ.ಶಿವಕುಮಾರ್‌
ಮಲ್ಲಿಕಾರ್ಜುನ್‌ ಖರ್ಗೆ
ಎಂ.ಬಿ.ಪಾಟೀಲ್

ಚುನಾವಣೆ ನಂತರ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!

ಹೆಚ್.ಸಿ.ಮಹದೇವಪ್ಪ
ಬಿ.ಕೆ.ಹರಿಪ್ರಸಾದ್‌
ಕೆ.ಎನ್.ರಾಜಣ್ಣ
ಸತೀಶ್‌ ಜಾರಕಿಹೊಳಿ
ಜಮೀರ್ ಅಹ್ಮದ್‌ ಖಾನ್

ರಾಜ್ಯದಲ್ಲಿ ಬರಗಾಲ ಬಂದಿದೆ ಕುಡಿಯಲು ನೀರಿಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದ್ಯಾವುದರ ಚಿಂತೆ ಇಲ್ಲದ ಎಟಿಎಂ ಸರ್ಕಾರ ಸಂತೆಯಲ್ಲಿ ಬೀದಿ ಜಗಳ ಮಾಡುತ್ತಾ ಕರ್ನಾಟಕವನ್ನು ಬಲಿಕೊಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವೈಯಕ್ತಿಕ ಹಿತಾಸಕ್ತಿಯ ಮೇಲಾಟದಲ್ಲಿ ರಾಜ್ಯದ ರೈತರ ಬದುಕು ದುರ್ಬರವಾಗುತ್ತಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ತಿಲಕ‌, ಕೇಸರಿ ಬಣ್ಣ, ಶಾಲು, ವಸ್ತ್ರವನ್ನು ಕಂಡರೆ ಮೂಗು ಮುರಿದು ಮುಖ ತಿರುಗಿಸುತ್ತೀರಿ. ಅದೇ ಅನ್ಯ ಮತೀಯ ಸಂಭ್ರಮಗಳಲ್ಲಿ ಗಮಗಮಿಸುವ ಸೆಂಟು ಹೊಡೆದುಕೊಂಡು ಟೋಪಿ ಹಾಕಿಕೊಂಡು ನವ ಮದುಮಗನಂತೆ ಸಿಂಗಾರಗೊಳ್ಳುತ್ತೀರಿ.

ನಿಮ್ಮೊಳಗಿನ ಚುನಾವಣಾ ಹಿಂದೂವಿಗೆ ಚುನಾವಣೇತರ ಸಂದರ್ಭಗಳಲ್ಲಿ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಕಂಡರೆ ಇರಿಸುಮುರಿಸು. ನಿಮ್ಮೊಳಗಿನ ಈ 'Split personality' ಅಥವಾ 'ನಾಗವಲ್ಲಿ' ಮನಸ್ಥಿತಿಗೆ ಮೊದಲು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಕುಟುಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+