‘ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ...’
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಕಿಡಿ ಹೊತ್ತಿಕೊಂಡಿದ್ದು, ಒಂದಲ್ಲ ಒಂದು ವಿಚಾರ ಆಧರಿಸಿ ಎರಡೂ ಪಕ್ಷಗಳು ಕಿತ್ತಾಡುತ್ತಿವೆ. ಈಗ ಮುಂಬೈ ದಾಳಿ ವಿಚಾರ ಪ್ರಸ್ತಾಪ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಹಾಗೇ ಇದೀಗ ಎನ್‌ಡಿಎ ಹಾಗೂ ಯುಪಿಎ ನಡುವೆ ಹೋಲಿಕೆ ಮಾಡಿ ಟ್ವೀಟ್ ಮಾಡಿದೆ. ಇದು ರಾಜ್ಯದಲ್ಲಿ ಕಮಲ ಪಾಳಯ & ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಕಿತ್ತಾಟಕ್ಕೆ ವೇದಿಕೆ ಒದಗಿಸಿದೆ.
2008 ರ ನವೆಂಬರ್ 26 ರಂದು ಮುಂಬೈಯಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿ, ಜಗತ್ತಿನ ಗಮನ ಸೆಳೆದಿತ್ತು. ಭಾರತೀಯರ ಪಾಲಿಗೆ ಇದು ಕರಾಳ ದಿನವಾಗಿದ್ದು, ಎಂದೆಂದಿಗೂ ಮರೆಯಲಾಗಲ್ಲ ಬಿಡಿ. ಹೀಗಿರುವಾಗ ಈ ವಿಚಾರದಲ್ಲೂ ಪೊಲಿಟಿಕಲ್ ವಾರ್ ಶುರುವಾಗಿದೆ. ಇಷ್ಟುದಿನ ರಾಷ್ಟ್ರ ಮಟ್ಟದಲ್ಲಿ ಈ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿತ್ತು, ಈಗ ರಾಜ್ಯ ಮಟ್ಟಕ್ಕೂ ಇದೇ ವಿಚಾರದ ಅಡಿಯಲ್ಲಿ ಫೈಟಿಂಗ್ ಶುರುವಾಗಿದೆ. ಹಾಗಾದರೆ ಕಾಂಗ್ರೆಸ್ ವಿರುದ್ಧ ಇದೀಗ ಕರ್ನಾಟಕ ಬಿಜೆಪಿ ಮಾಡಿರುವ ಆರೋಪ ಏನು?

'ದುರ್ಬಲ ಸರ್ಕಾರ Vs ಬಲಿಷ್ಠ ಸರ್ಕಾರ'
ಅಂದಹಾಗೆ ಈ ಕುರಿತು ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮಾಡಿದ್ದು, '2008 ರ ನವೆಂಬರ್ 26 ರಂದು ಮುಂಬೈಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಅಂದಿನ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, 2016 ರಲ್ಲಿ ನಡೆದ ಉರಿ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ಮೋದಿ ಸರ್ಕಾರವು ಭಾರತೀಯ ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿತು. ಸೇನೆಯು ಪಾಕಿಸ್ಥಾನದ ನೆಲದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು ಮತ್ತು ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸ ಮಾಡಿತು.' ಎಂದಿದೆ.
ದುರ್ಬಲ ಸರ್ಕಾರ Vs ಬಲಿಷ್ಠ ಸರ್ಕಾರ
— BJP Karnataka (@BJP4Karnataka) October 14, 2023
2008 ರ ನವೆಂಬರ್ 26 ರಂದು ಮುಂಬೈಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಅಂದಿನ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಆದರೆ, 2016 ರಲ್ಲಿ ನಡೆದ ಉರಿ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ಮೋದಿ ಸರ್ಕಾರವು ಭಾರತೀಯ ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿತು.… pic.twitter.com/P3zxlZApAT
'ರಾಜ್ಯವನ್ನು ಹಾಡುಹಗಲೇ ಲೂಟಿ ಮಾಡುತ್ತಿರುವ...'
ಹಾಗೇ, ಕಾಂಗ್ರೆಸ್ ಗ್ಯಾರಂಟಿ ವಿಚಾರವನ್ನೂ ಪ್ರಸ್ತಾಪಿಸಿ ಮತ್ತೊಂದು ಟ್ವೀಟ್ ಮೂಲಕ ಬಿಜೆಪಿ ಇನ್ನೊಂದು ಆರೋಪ ಮಾಡಿದೆ. 'ಕರ್ನಾಟಕವನ್ನು ಸಂಪೂರ್ಣ ಅಂಧಕಾರದಲ್ಲಿರಿಸಿರುವ @INCKarnataka, ರಾಜ್ಯದ ಜನತೆಯ ಶ್ರಮದ ತೆರಿಗೆ ಹಣವನ್ನು, 80% ಕಮಿಷನ್ ರೂಪದಲ್ಲಿ ವಸೂಲಿ ಮಾಡಿ, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಅಸಲಿ ಕರ್ನಾಟಕ ಮಾಡೆಲ್. ಇದಕ್ಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ದೊರೆತ ₹42 ಕೋಟಿ ಹಣವೇ ಪ್ರಮುಖ ಸಾಕ್ಷಿ. ರಾಜ್ಯವನ್ನು ಹಾಡುಹಗಲೇ ಈ ಪರಿ ಲೂಟಿ ಮಾಡುತ್ತಿರುವ ಈ ನಾಡದ್ರೋಹಿಗಳು, ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯುವುದು ಗ್ಯಾರಂಟಿ..!!' ಎಂದಿದೆ ಬಿಜೆಪಿ.
ಕರ್ನಾಟಕವನ್ನು ಸಂಪೂರ್ಣ ಅಂಧಕಾರದಲ್ಲಿರಿಸಿರುವ @INCKarnataka, ರಾಜ್ಯದ ಜನತೆಯ ಶ್ರಮದ ತೆರಿಗೆ ಹಣವನ್ನು, 80% ಕಮಿಷನ್ ರೂಪದಲ್ಲಿ ವಸೂಲಿ ಮಾಡಿ, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ. ಇದು ಕಾಂಗ್ರೆಸ್‌ನ ಅಸಲಿ ಕರ್ನಾಟಕ ಮಾಡೆಲ್.
— BJP Karnataka (@BJP4Karnataka) October 14, 2023
ಇದಕ್ಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ದೊರೆತ ₹42 ಕೋಟಿ ಹಣವೇ ಪ್ರಮುಖ… pic.twitter.com/qJF78O20Ed
ಒಟ್ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಿತ್ತಾಟಕ್ಕೆ ಮುಂಬೈ ಉಗ್ರರ ದಾಳಿಯ ವಿಚಾರ ಕೂಡ ಈಗ ಎಂಟ್ರಿಯಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ವಿಚಾರಗಳೇ ಬಿಜೆಪಿ ಪಾಲಿಗೆ ಅಸ್ತ್ರವಾಗಿತ್ತು. ಈಗ ಹೊಸ ಹೊಸ ಅಸ್ತ್ರಗಳನ್ನು ಬಿಜೆಪಿ ಬಳಸುತ್ತಿದ್ದು, ಲೋಕಸಭೆಯಲ್ಲಿ ಈ ಅಸ್ತ್ರಗಳು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ? ರಾಜ್ಯದ ಮತದಾರ ಪ್ರಭುವಿನ ಗಮನ, ಯಾರ ಕಡೆಗೆ ವಾಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications