CT Ravi: ‘ಸಿ.ಟಿ. ರವಿ ಅವರನ್ನ ಟೆರರಿಸ್ಟ್ ರೀತಿ ಎತ್ತಾಕ್ಕೊಂಡು ಹೋಗಿದ್ದಾರೆ’
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಸಿ.ಟಿ. ರವಿ ಅವರಿಗೆ ಇದೀಗ ಸಾಲು ಸಾಲು ಕಂಟಕ ಎದುರಾಗುತ್ತಿದೆ. ಸಿ.ಟಿ. ರವಿ ವಿರುದ್ಧ ಒಂದು ಕಡೆ ಕಾಂಗ್ರೆಸ್ ನಾಯಕರು ಬೃಹತ್ ಹೋರಾಟಕ್ಕೆ ತಯಾರಿ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಬಿಜೆಪಿ ನಾಯಕರು ಸಿ.ಟಿ. ರವಿ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲುತ್ತಿದ್ದಾರೆ. ಅದರಲ್ಲೂ ಈ ಬಗ್ಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಖಡಕ್ ಆಗಿ ಮಾತನಾಡಿದ್ದು, ಸಿ.ಟಿ. ರವಿ ಬೆನ್ನಿಗೆ ನಿಂತಿದ್ದಾರೆ.
ಹೌದು, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ ಕೇಳಿಬಂದ ನಂತರ ಇಡೀ ಬೆಳಗಾವಿ ಕಾದ ಕಬ್ಬಿಣವಾಗಿದೆ. ಹೀಗಿದ್ದಾಗ ದೊಡ್ಡ ಪ್ರತಿಭಟನೆ & ಹೋರಾಟಗಳೂ ಆರಂಭವಾಗಿವೆ. ಇಂತಹ ಸಮಯದಲ್ಲೇ ಸಿಟಿ ರವಿ ಪ್ರಕರಣದ ಕುರಿತಾಗಿ ಖಡಕ್ ರಿಯಾಕ್ಷನ್ ಕೊಟ್ಟಿರುವ ಬಿ.ವೈ. ವಿಜಯೇಂದ್ರ 'ಸಿ.ಟಿ. ರವಿ ಅವರನ್ನ ಟೆರರಿಸ್ಟ್ ರೀತಿ ಎತ್ತಾಕ್ಕೊಂಡು ಹೋಗಿದ್ದಾರೆ' ಅಂತಾ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಿ.ಟಿ. ರವಿ ಸಾಮಾನ್ಯ ವ್ಯಕ್ತಿ ಅಲ್ಲ!
ಅಂದಹಾಗೆ ಮಾಜಿ ಸಚಿವ ಸಿ.ಟಿ. ರವಿ ಅವರ ಪ್ರಕರಣದ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈಗ, ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಸುವರ್ಣ ಸೌಧಕ್ಕೆ ನುಗ್ಗಿ ಗೂಂಡಾ ವರ್ತನೆ ತೋರಲಾಗಿದೆ, ನಂತರ ಸಿಟಿ ರವಿ ಅವರನ್ನ ಎತ್ತಾಕ್ಕೊಂಡು ಹೋಗಿದ್ದಾರೆ.
ಸಿ.ಟಿ. ರವಿ ಅವರು ಸಾಮಾನ್ಯ ವ್ಯಕ್ತಿ ಅಲ್ಲ ಅವರು ವಿಧಾನ ಪರಿಷತ್ ಸದಸ್ಯ & ಮಾಜಿ ಸಚಿವ. ಹೀಗಿದ್ದರು ಕೂಡ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಲ್ಲದೆ ರಾತ್ರಿ ಪೂರ್ತಿ ಖಾನಾಪುರ & ರಾಮದುರ್ಗ ಪೂರ್ತಿ ಸುತ್ತಾಡಿಸಲಾಗಿದೆ ಎಂದು ಆಕ್ರೋಶವನ್ನು ಹೊರ ಹಾಕಿದ್ದಾರೆ ಬಿ.ವೈ. ವಿಜಯೇಂದ್ರ ಅವರು. ಇದರ ಜೊತೆಗೆ ಸರ್ಕಾರದ ಕುಮ್ಮಕ್ಕಿನಿಂದಲೇ ಈ ರೀತಿ ವರ್ತನೆ ನಡೆದಿದೆ ಹೀಗಾಗಿ ಇದು ಖಂಡನಾರ್ಹವಾಗಿದೆ, ಸಿ.ಟಿ. ರವಿ ಅವರನ್ನ ಟೆರರಿಸ್ಟ್ ರೀತಿ ಎತ್ತಾಕ್ಕೊಂಡು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
500 ಕಿಲೋ ಮೀಟರ್ ಸುತ್ತು ಹೊಡಿಸಿದ್ದಾರಾ?
ಮತ್ತೊಂದು ಕಡೆ ಸಿಟಿ ರವಿ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕೂರಿಸಿಕೊಂಡು, ಸುಮಾರು 500 ಕಿಲೋ ಮೀಟರ್ ಸುತ್ತು ಹೊಡಿಸಿದ್ದಾರೆ ಎಂಬ ಆರೋಪ ಕೂಡ ಮಾಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು. ಒಬ್ಬ ಪ್ರತಿನಿಧಿಯನ್ನ ನಡೆಸುಕೊಳ್ಳುವ ರೀತಿನಾ ಇದು? ಪೊಲೀಸರ ಮೇಲೆ ದಬ್ಬಾಳಿಕೆ & ಒತ್ತಾಯ ಮಾಡಿ ಈ ದೌರ್ಜನ್ಯ ನಡೆಸುತ್ತಿದ್ದಾರೆ ಅಂತಾ ಕೂಡ ಇದೀಗ ವಿಜಯೇಂದ್ರ ಅವರು ಆರೋಪಿಸಿದ್ದು, ಸಿಟಿ ರವಿ ಅವರ ತಲೆಗೆ ಪೆಟ್ಟು ಬಿದ್ದಿದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ. ಬಿಜೆಪಿ ಇದನ್ನ ತೀವ್ರವಾಗಿ ಖಂಡಿಸುತ್ತೆ, ಅಂತಾ ಹೇಳಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷರು.












Click it and Unblock the Notifications