ಲೋಕಸಭೆ ಚುನಾವಣೆ ಬೆನ್ನಲ್ಲೇ 39 ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕ ಮಾಡಿದ ಬಿಜೆಪಿ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ 39 ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಭಾನುವಾರ ನೇಮಕ ಮಾಡಿದ್ದಾರೆ.

ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು ಅವರನ್ನು ನೇಮಕ ಮಾಡಿದ್ದು, ಸಹ ಕಾರ್ಯದರ್ಶಿಯಾಗಿದೆ ಬಿ.ಹೆಚ್. ವಿಶ್ವನಾಥ್ ನೇಮಕವಾಗಿದ್ದಾರೆ.

Karnataka BJP President Appoints District Unit Heads Ahead of Lok Sabha Elections

ಜಯನಗರ ಶಾಸಕರಾಗಿರುವ ಸಿ.ಕೆ. ರಾಮಮೂರ್ತಿ, ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅವರಿಗೆ ಜಿಲ್ಲಾಧ್ಯಕ್ಷರ ಜವಬ್ದಾರಿ ವಹಿಸಲಾಗಿದೆ. ಮಾಜಿ ಶಾಸಕರಾದ ಸಿಎಸ್. ನಿರಂಜನ್ ಕುಮಾರ್, ಅರುಣ್ ಕುಮಾರ್ ಪೂಜಾರ ಮತ್ತು ಎಲ್‌ ನಾಗೇಂದ್ರ ಅವರಿಗೂ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿದೆ.

ಎಕ್ಸ್‌ನಲ್ಲಿ ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಹಂಚಿಕೊಂಡಿರುವ ಬಿವೈ ವಿಜಯೇಂದ್ರ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಕರೆ ನೀಡಿದ್ದಾರೆ.

" ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಹಾಗೂ ವಿವಿಧ ಘಟಕಗಳಿಗೆ ನಿಯುಕ್ತಿಗೊಂಡಿರುವ ನೂತನ ಪದಾಧಿಕಾರಿಗಳಿಗೆ ಆತ್ಮೀಯ ಅಭಿನಂದನೆಗಳು. ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ನಿರೀಕ್ಷೆ ಮೀರಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮುಂಬರುವ ಲೋಕಸಮರದಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಿ, ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ಶ್ರಮಿಸುತ್ತೀರೆಂದು ನಂಬಿದ್ದೇನೆ. ನಿಮ್ಮ ಸಂಘಟನೆಯ ಹಾದಿ ಸುಗಮವಾಗಿ ಸಾಗಲೆಂದು ಹಾರೈಸುತ್ತೇನೆ." ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರು

ಬೆಂಗಳೂರು ಕೇಂದ್ರ - ಸಪ್ತಗಿರಿಗೌಡ

ಬೆಂಗಳೂರು ಉತ್ತರ - ಎಸ್. ಹರೀಶ್

ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ

ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ

ಮೈಸೂರು ನಗರ - ಬಿ.ಎಲ್. ನಾಗೇಂದ್ರ

ಮೈಸೂರು ಗ್ರಾಮಾಂತರ - ಎಲ್‌. ಆರ್. ಮಹದೇವಸ್ವಾಮಿ

ಚಾಮರಾಜನಗರ- ಸಿ.ಎಸ್. ನಿರಂಜನ್ ಕುಮಾರ್

ಮಂಡ್ಯ- ಇಂದ್ರೇಶ್ ಕುಮಾರ್

ಹಾಸನ- ಸಿದ್ದೇಶ್ ನಾಗೇಂದ್ರ

ಕೊಡಗು- ರವಿ ಕಾಳಪ್ಪ

ದಕ್ಷಿಣ ಕನ್ನಡ- ಸತೀಶ್ ಕುಂಪಲ

ಉಡುಪಿ- ಕಿಶೋರ್ ಕುಂದಾಪುರ

ಚಿಕ್ಕಮಗಳೂರು- ದೇವರಾಜ ಶೆಟ್ಟಿ

ಶಿವಮೊಗ್ಗ- ಟಿ.ಡಿ. ಮೇಘರಾಜ್

ಉತ್ತರ ಕನ್ನಡ- ಎನ್.ಎಸ್. ಹೆಗಡೆ

ಹಾವೇರಿ- ಅರುಣ್ ಕುಮಾರ್ ಪೂಜಾರ

ಹುಬ್ಬಳ್ಳಿ- ಧಾರವಾಡ- ತಿಪ್ಪಣ್ಣ ಮಜ್ಜಗಿ

ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ

ಗದಗ- ರಾಜು ಕುರಡಗಿ

ಬೆಳಗಾವಿ ನಗರ- ಗೀತಾ ಸುತಾರ್

ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ್

ಚಿಕ್ಕೋಡಿ- ಸತೀಶ್ ಅಪ್ಪಾಜಿಗೋಳ್

ಬಾಗಲಕೋಟೆ- ಶಾಂತಗೌಡ ಪಾಟೀಲ್

ವಿಜಯಪುರ- ಆರ್.ಎಸ್. ಪಾಟೀಲ್

ಬೀದರ್- ಸೋಮನಾಥ‌ ಪಾಟೀಲ್

ಕಲಬುರರ್ಗಿ ನಗರ- ಚಂದ್ರಕಾಂತ ಪಾಟೀಲ

ಕಲಬುರಗಿ ಗ್ರಾಮಾಂತರ- ಶಿವರಾಜ ಪಾಟೀಲ್ ರದ್ದೇವಾಡಿ

ಯಾದಗಿರಿ- ಅಮೀನ್ ರೆಡ್ಡಿ

ರಾಯಚೂರು- ಡಾ. ಶಿವರಾಜ ಪಾಟೀಲ್

ಕೊಪ್ಪಳ- ನವೀನ್ ಗುಳಗಣ್ಣನವರ್

ಬಳ್ಳಾರಿ- ಅನಿಲ್ ಕುಮಾರ್ ಮೋಕಾ

ವಿಜಯನಗರ- ಚನ್ನಬಸವನಗೌಡ ಪಾಟೀಲ್

ದಾವಣಗೆರೆ- ರಾಜಶೇಖರ್

ಚಿತ್ರದುರ್ಗ- ಎ. ಮುರಳಿ

ತುಮಕೂರು - ಹೆಚ್.ಎಸ್. ರವಿಶಂಕರ (ಹೆಬ್ಬಾಕ)

ಮಧುಗಿರಿ- ಬಿ.ಸಿ. ಹನುಮಂತೇಗೌಡ

ರಾಮನಗರ- ಆನಂದಸ್ವಾಮಿ

ಚಿಕ್ಕಬಳ್ಳಾಪುರ-ರಾಮಲಿಂಗಪ್ಪ

ಕೋಲಾರ- ಡಾ. ಕೆ.ಎನ್. ವೇಣುಗೋಪಾಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+