• search

ನಾಳೆಯಿಂದ (ನ 2) ಆರಂಭವಾಗಲಿರುವ 'ಯಾತ್ರೆ' ಬಿಜೆಪಿಗೆ ನಿರ್ಣಾಯಕ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಇತ್ತೀಚಿಗಿನ ರಾಜ್ಯ ಭೇಟಿ ಮತ್ತು ಪ್ರಧಾನಿ ಮೋದಿಯವರ ಧರ್ಮಸ್ಥಳ, ಬೆಂಗಳೂರು, ಬೀದರ್ ಭೇಟಿ, ಕರ್ನಾಟಕ ಬಿಜೆಪಿಯ ಗೇರ್ ಅನ್ನು ಬದಲಾಯಿಸಿಹೋಗಿದೆ. ಗುರುವಾರ (ನ 2) ಆರಂಭವಾಗಲಿರುವ ಪರಿವರ್ತನಾ ರ‍್ಯಾಲಿ, ಪಕ್ಷದ ಪಾಲಿಗೆ ನಿರ್ಣಾಯಕವಾಗಲಿದೆ.

  ಪರಿವರ್ತನಾ ಯಾತ್ರೆಯ ಐಷಾರಾಮಿ ಬಸ್ಸು ಹೇಗಿದೆ ನೋಡಿ..!

  73ದಿನಗಳ ಪರಿವರ್ತನಾ ರ‍್ಯಾಲಿಗೆ ಈಗಾಗಲೇ ಐಷಾರಾಮಿ ಬಸ್ ಸಿದ್ದವಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ.

  ಮೋದಿ ಫೋಟೋ ಹಾಕಿ ಟ್ವಿಟ್ಟಿಗರಿಂದ ಸರಿಯಾಗಿ ಕಾಲೆಳೆಸಿಕೊಂಡ ಕಾಂಗ್ರೆಸ್

  ಯಾತ್ರೆಯ ಪ್ರತೀದಿನ ಮೂರು ಅಸೆಂಬ್ಲಿ ಕ್ಷೇತ್ರದಲ್ಲಿ ಸಂಚರಿಸುವ ಯೋಜನೆ ಹಾಕಿಕೊಂಡಿರುವ ಬಿಜೆಪಿ, 73ದಿನಗಳ ರ‍್ಯಾಲಿಯ ವೇಳೆ ದೇಶದ ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳನ್ನು, ಕೇಂದ್ರ ಸಚಿವರನ್ನು ಕರೆಸಿಕೊಳ್ಳುವ ಉದ್ದೇಶ ಇಟ್ಟುಕೊಂಡಿದ್ದು, ಬಿಜೆಪಿ ವರಿಷ್ಠರಿಂದ ಗ್ರೀನ್ ಸಿಗ್ನಲ್ ಇನ್ನೂ ಸಿಗಬೇಕಾಗಿದೆ.

  ಮುಂದಿನ ಚುನಾವಣೆಯಲ್ಲಿ ಒಟ್ಟಾರೆ ಶೇ. 51 ಮತ ಪಡೆಯಲೇಬೇಕು ಎಂದು ಅಮಿತ್ ಶಾ, ರಾಜ್ಯ ಬಿಜೆಪಿ ಮುಖಂಡರಿಗೆ ಸೂಚಿಸಿದ್ದು, ಎಲ್ಲಾ ಭಿನ್ನಾಭಿಪ್ರಾಯಗಳನ್ನು 'ಸೈಡಲ್ಲಿಟ್ಟು ಪಕ್ಷಕ್ಕಾಗಿ ದುಡಿಯಿರಿ' ಎನ್ನುವ ಖಡಕ್ ಸೂಚನೆಯನ್ನು ಪಿಯೂಶ್ ಗೋಯಲ್ ಮತ್ತು ಪ್ರಕಾಶ್ ಜಾವ್ಡೇಕರ್ ಮೂಲಕ ರವಾನಿಸಿದ್ದಾರೆ ಎನ್ನುವ ಮಾಹಿತಿಯಿದೆ.

  ಜ್ಞಾನೋದಯವಾಗಬೇಕಂದ್ರೆ ಕೇಸರಿ ಬಣ್ಣವನ್ನು ಅಪ್ಪಿಕೊಳ್ಳಿ: ಮೊಹ್ಸಿನ್ ರಾಜಾ

  ಜನವರಿ 28ಕ್ಕೆ ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿರುವ ಕಾರ್ಯಕ್ರಮಕ್ಕೆ 55,000 ಬೂತ್ ಗಳಿಂದ ತಲಾ ಮೂರು ದ್ವಿಚಕ್ರ ವಾಹನದಲ್ಲಿ ಆರು ಮಂದಿ ಕಾರ್ಯಕರ್ತರು ಬರಬೇಕೆಂದು ರಾಜ್ಯ ಬಿಜೆಪಿ ಘಟಕ ಸೂಚಿಸಿದ್ದು, ಸುಮಾರು ಮೂರುವರೆ ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಮುಂದೆ ಓದಿ..

  ಅಭಿವೃದ್ದಿ ಕೆಲಸಕ್ಕಿಂತ ಹೆಚ್ಚಾಗಿ ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟ ಚರ್ಚೆ

  ಅಭಿವೃದ್ದಿ ಕೆಲಸಕ್ಕಿಂತ ಹೆಚ್ಚಾಗಿ ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟ ಚರ್ಚೆ

  ಅಭಿವೃದ್ದಿ ಕೆಲಸಕ್ಕಿಂತ ಹೆಚ್ಚಾಗಿ ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಂತಹ ಚರ್ಚೆಗಳೇ ಮುನ್ನಲೆಯಲ್ಲಿರುವ ಈ ಹೊತ್ತಿನಲ್ಲಿ ಟಿಪ್ಪು ಜಯಂತಿ, ಧರ್ಮಸ್ಥಳ ಘಟನೆಗಳನ್ನು ಬಿಜೆಪಿ ಊರೆಲ್ಲಾ ಪಸರಿಸುವ ಸಾಧ್ಯತೆಯಿದ್ದು, ಪ್ರವಾಸದುದ್ದಕ್ಕೂ ಮೋದಿ ಮತ್ತು ಸಿದ್ದರಾಮಯ್ಯನವರ ಸಂಸ್ಕಾರದ ಬಗ್ಗೆ ಭಾಷಣ ಮಾಡುವ ಸಾಧ್ಯತೆಯಿಲ್ಲದಿಲ್ಲ.

  ಭಾರಿ ಉತ್ಸಾಹದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

  ಭಾರಿ ಉತ್ಸಾಹದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

  ಭಾರಿ ಉತ್ಸಾಹದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದುಕೊಂಡು ಪಕ್ಷಕ್ಕೆ ನವಚೈತನ್ಯ ನೀಡಬಹುದಾದ ಯಾತ್ರೆಗೆ ಸಜ್ಜಾಗಿದ್ದಾರೆ. ಜೊತೆಗೆ, ಈ ರ‍್ಯಾಲಿ ಮುಗಿಯುವ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಸೇರಿಸುವ ಪಯತ್ನದಲ್ಲೂ ಇದ್ದಾರೆ. ಗುರುವಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಗೀಶ್ವರ್ ಮತ್ತು ಪಿ ರಾಜೀವ್ ಬಿಜೆಪಿ ಸೇರಲಿದ್ದಾರೆ.

  ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಐಷಾರಾಮಿ ಬಸ್

  ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಐಷಾರಾಮಿ ಬಸ್

  ಯಾತ್ರೆಗಾಗಿ ಕಣ್ಣಪ್ಪ ಆಟೋಮೊಬೈಲ್ ಹೊಸ ಬಸ್ಸನ್ನು ಸಿದ್ದಪಡಿಸಿ ಬಿಜೆಪಿ ಮುಖಂಡರಿಗೆ ಹಸ್ತಾಂತರಿಸಿದೆ. ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಈ ಐಷಾರಾಮಿ ಬಸ್ಸಿನಲ್ಲಿ ಮಿನಿ ಕಿಚನ್, ಎಸಿ, ಮೈಕ್ ವ್ಯವಸ್ಥೆ, ಹತ್ತು ಜನ ಕೂತು ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ.

  ಭ್ರಷ್ಟಾಚಾರದ ವಿಷಯವನ್ನು ಮತದಾರರಿಗೆ ತಲುಪಿಸುವ ಕೆಲಸ ಮಾಡಿ

  ಭ್ರಷ್ಟಾಚಾರದ ವಿಷಯವನ್ನು ಮತದಾರರಿಗೆ ತಲುಪಿಸುವ ಕೆಲಸ ಮಾಡಿ

  ಮೋದಿ ಜಪ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯ ಸರಕಾರದ ವೈಫಲ್ಯ, ಭ್ರಷ್ಟಾಚಾರದ ವಿಷಯವನ್ನು ಮತದಾರರಿಗೆ ತಲುಪಿಸುವ ಕೆಲಸವನ್ನು ಮಾಡಿ ಎಂದು ಬಿಜೆಪಿ ವರಿಷ್ಠರು ಸ್ಪಷ್ಟವಾಗಿ ಸೂಚಿಸಿರುವ ಹಿನ್ನಲೆಯಲ್ಲಿ, ಸಿದ್ದರಾಮಯ್ಯ ಸರಕಾರದ ನಾಲ್ಕೂವರೆ ವರ್ಷದ ದುರಾಡಳಿತದ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದೆ ಎನ್ನುವ ಮಾಹಿತಿಯಿದೆ.

  ಸಿದ್ದರಾಮಯ್ಯ ಸರಕಾರ

  ಸಿದ್ದರಾಮಯ್ಯ ಸರಕಾರ

  ಕಾಂಗ್ರೆಸ್ ನಡೆಸಿದ ಮೊದಲ ಮತ್ತು ಎರಡನೇ ಆಂತರಿಕ ಸಮೀಕ್ಷೆಯಲ್ಲಿ ಪಕ್ಷಕ್ಕೆ ಸಿಗಬಹುದಾದ ಸೀಟಿನಲ್ಲಿ ಕಮ್ಮಿಯಾಗುವ ಸಾಧ್ಯತೆಯಿದೆ ಎನ್ನುವ ವರದಿ ಬಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಎಚ್ಚೆತ್ತುಕೊಂಡು, ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಲು ಸಿದ್ದತೆ ಮಾಡಿಕೊಂಡಿವೆ ಎನ್ನುವ ಮಾಹಿತಿಯಿದೆ.

  ರಾಜ್ಯ ಬಿಜೆಪಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಲಿ

  ರಾಜ್ಯ ಬಿಜೆಪಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಲಿ

  ಕಳೆದ ನಾಲ್ಕು ವರ್ಷಗಳಿಂದ ಸೊರಗಿ ಈಗ ಎಚ್ಚೆತ್ತುಕೊಂಡಿರುವ ಬಿಜೆಪಿಗೆ, ಪರಿವರ್ತನಾ ರ‍್ಯಾಲಿ ಅತ್ಯಂತ ನಿರ್ಣಾಯಕ. ರಾಜ್ಯ ಬಿಜೆಪಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಿ, ಕಾರ್ಯಕರ್ತರನ್ನು ಹುರಿದುಂಬಿಸಿ ಒಟ್ಟಾಗಿ ಜನರ ಬಳಿಗೆ ಹೋದರೆ, ಜೊತೆಗೆ ಅಮಿತ್ ಶಾ ತಂತ್ರಗಾರಿಕೆ, ಮೋದಿ ಹೆಸರು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಲಾಭ ತಂದುಕೊಟ್ಟರೂ ಕೊಡಬಹುದು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  73 days Parivartana Rally organized by Karnataka BJP unit starting from November 2nd in Bengaluru. BJP State President Amit Shah to inaugurate.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more