ಕಾಂಗ್ರೆಸ್ ಬಂದಿದೆ, ಕತ್ತಲು ಆವರಿಸಿದೆ! ಸಿದ್ದರಾಮಯ್ಯ ಅವರ 2.0 ಕೊಡುಗೆಗಳು ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು, ಜೂನ್ 17: ಕಾಂಗ್ರೆಸ್ ಬಂದಿದೆ, ಕತ್ತಲು ಆವರಿಸಿದೆ! ಹಿಟ್ಲರ್ ಸರ್ಕಾರದ ತುಘಲಕ್ ನೀತಿ, ನಿಯಮಗಳು ಜಾರಿಗೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ 1.0 ಅವಧಿಯಲ್ಲಿನ ಮಹತ್ವದ ಕೊಡುಗೆಗಳ ಪಟ್ಟಿಯನ್ನ ಬಿಜೆಪಿ ಬಿಡುಗಡೆ ಮಾಡಿದೆ. ಅನ್ನ ಭಾಗ್ಯ- ಸಾವಿರಾರು ಕೋಟಿ ಲೂಟಿ, ಅನುರಾಗ್ ತಿವಾರಿ ಸಾವು! ಎಂದು ಬಿಜೆಪಿ ಹೇಳಿದೆ. ಇನ್ನು ಕೃಷಿ ಭಾಗ್ಯ - ನೂರಾರು ಕೋಟಿ ಲೂಟಿ, 3,500ಕ್ಕೂ ಹೆಚ್ಚು ರೈತರ ಸಾವಿಗೀಡಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.

ಅಕ್ರಮ ಮರಳು ಮಾಫಿಯಾ- ಪೊಲೀಸರ ಕೊಲೆ! ಸರಕಾರಿ ಸಂಸ್ಥೆಗಳ ಕಾಂಗ್ರೆಸೀಕರಣ - ಉನ್ನತ ಅಧಿಕಾರಗಳ ಸರಣಿ ಸಾವು! ಅಲ್ಲದೇ ಪಿಎಫ್ಐ ಗೂಂಡಾಗಳ ಬಿಡುಗಡೆ- ಹಿಂದೂಪರ ಹೋರಾಟಗಾರರ ಸಾಲು ಸಾಲು ಹತ್ಯೆ! ಎಂದು ಬಿಜೆಪಿ ಟ್ವೀಟ್ ಮೂಲಕ ತಿಳಿಸಿದ್ದು, ಇನ್ನೂ ಸಾಕಷ್ಟಿವೆ ಎಂದು ಹೇಳಿದೆ.
2023ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ 2.0ರ ಕೊಡುಗೆಗಳು ಪ್ರಾರಂಭವಾಗಿದ್ದು, ಮತಾಂತರ ನಿಷೇಧ ವಾಪಸ್ - ಲವ್ ಜಿಹಾದ್, ಆಮಿಷ, ಬಲವಂತದ ಮತಾಂತರಕ್ಕೆ ನಾಂದಿ! ಎಂದು ಕಿಡಿಕಾರಿದ್ದು, ಮತ್ತೆ ತಲೆ ಎತ್ತಿದ ಮರಳು ಮಾಫಿಯಾ- ಕಲಬುರಗಿಯಲ್ಲಿ ಪೊಲೀಸ್ ಕೊಲೆ, ಅಬಕಾರಿ ಇಲಾಖೆ- ಕೋಟಿ ಕೋಟಿ ರೂ.ಗೆ ಹುದ್ದೆಗಳ ಮಾರಾಟ. ಬೆಲೆ ಏರಿಕೆ - ವಿದ್ಯುತ್, ನೀರು, ಹಾಲು, ಮದ್ಯ, ಮೊಟ್ಟೆ, ಮಾಂಸ, ದಿನಸಿ, ತರಕಾರಿ... ಎಲ್ಲವೂ ಹೆಚ್ಚಳ ಎಂದು ಬಿಜೆಪಿ ಕೊಡುಗೆಗಳ ಪಟ್ಟಿ ಬಿಡುಗಡೆ ಎಂದು ಟೀಕಿಸಿದೆ.
ಮಾನ್ಯ @siddaramaiahರವರ 1.0 ಅವಧಿಯಲ್ಲಿನ ಮಹತ್ವದ ಕೊಡುಗೆಗಳು.
— BJP Karnataka (@BJP4Karnataka) June 17, 2023
😡 ಅನ್ನ ಭಾಗ್ಯ- ಸಾವಿರಾರು ಕೋಟಿ ಲೂಟಿ, ಅನುರಾಗ್ ತಿವಾರಿ ಸಾವು!
😡 ಕೃಷಿ ಭಾಗ್ಯ - ನೂರಾರು ಕೋಟಿ ಲೂಟಿ, 3,500ಕ್ಕೂ ಹೆಚ್ಚು ರೈತರ ಸಾವು!
😡 ಅಕ್ರಮ ಮರಳು ಮಾಫಿಯಾ- ಪೊಲೀಸರ ಕೊಲೆ!
😡 ಸರಕಾರಿ ಸಂಸ್ಥೆಗಳ ಕಾಂಗ್ರೆಸೀಕರಣ - ಉನ್ನತ ಅಧಿಕಾರಗಳ ಸರಣಿ ಸಾವು!
😡 ಪಿಎಫ್ಐ…
ಒಂದು ಕಡೆ ಅಬಕಾರಿ ಇಲಾಖೆಯ ಹುದ್ದೆಗಳನ್ನು ಕೋಟಿ ಕೋಟಿ ರೂಪಾಯಿಗೆ ಮಾರಾಟಕ್ಕೆ ಇಡಲಾಗಿದೆ. ಮತ್ತೊಂದೆಡೆ ಸದ್ದಿಲ್ಲದೆ ಮದ್ಯದ ದರ ಏರಿಕೆಯಾದ ಬಗ್ಗೆ ಸಚಿವ ಆರ್. ಬಿ. ತಿಮ್ಮಾಪುರ ಅವರಿಗೇ ಗೊತ್ತಿಲ್ಲವಂತೆ.! ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಗಮನಕ್ಕೂ ತಾರದೆ, ಹೈಕಮಾಂಡ್ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಬೆಲೆ ಏರಿಸಿ ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದ್ದು, ಎಟಿಎಂ ಸರ್ಕಾರದ ಬೆಲೆ ಏರಿಕೆ ಎಂಬ ಕೂಸಿಗೆ ತಂದೆಯೇ ಇಲ್ಲದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಅಕ್ರಮ ಮರಳು ಮಾಫಿಯಾಗೆ ಜೀವ ಬಂದಿದೆ. ಎಟಿಎಂ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಅಡ್ಡದಾರಿಗಳಿಗೆ ಕುಮ್ಮಕ್ಕು ನೀಡಿ, ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿದೆ.ಪ್ರತಿ ದಿನ ಸುದ್ದಿಗೋಷ್ಠಿ ಮಾಡಿ ಅಮಾಯಕರಿಗೆ ಬೆದರಿಕೆ ಹಾಕುತ್ತಿದ್ದ ಪೇಪರ್ ಟೈಗರ್ ಪ್ರಿಯಾಂಕ್ ಖರ್ಗೆ ತಮ್ಮದೇ ಉಸ್ತುವಾರಿಯಲ್ಲಿರುವ ತವರು ಜಿಲ್ಲೆಯ ಈ ಪ್ರಕರಣಕ್ಕೆ ನ್ಯಾಯ ಒದಗಿಸುವ ಮೂಲಕ ತಮ್ಮ ಶೂರತ್ವವನ್ನು ತೋರಿಸಬೇಕಿದೆ ಎಂದು ಬಿಜೆಪಿ ಕಿಡಿಕಾರಿದೆ.
ವೀರಶೈವ-ಲಿಂಗಾಯತ ನಾಯಕರಿಗಷ್ಟೇ ಅಲ್ಲ, ಪೂರ್ಣ ಸಮುದಾಯಕ್ಕೇ ವಂಚಿಸುವುದು ಈ ಲಿಂಗಾಯತ ವಿರೋಧಿ #ATMSarkara ದ ಸಿದ್ಧ ಸೂತ್ರ.
— BJP Karnataka (@BJP4Karnataka) June 17, 2023
ಈಗ ಲಿಂಗಾಯತ ಅಭಿವೃದ್ಧಿ ನಿಗಮಕ್ಕೇ ಅಡ್ಡಗಾಲು ಹಾಕುವ ಆಲೋಚನೆಯಲ್ಲಿ @siddaramaiahರವರ ಸರ್ಕಾರವಿದೆ.
ಬೇಸತ್ತು ಹೋಗುವಷ್ಟು ಕಂಡೀಷನ್‌ಗಳಿರುವ ಗ್ಯಾರಂಟಿಗಳನ್ನೇ ಬೇಕಿದ್ದರೆ ವೀರಶೈವ-ಲಿಂಗಾಯತರೂ ಪಡೆಯಲಿ… pic.twitter.com/LRavDiYkCR
ರಾಜ್ಯದ ಜನರಿಗೆ ಬರೆಯ ಮೇಲೆ ಬರೆ. ವಿದ್ಯುತ್ ದರ ಏರಿಕೆ ಮಾಡಿದ್ದ ಎಟಿಎಂ ಸರ್ಕಾರ ಇದೀಗ ಸಬ್ಸಿಡಿಗೂ ಕೊಕ್ ಕೊಟ್ಟಿದೆ. ಸೋಲಾರ್‌ಗೆ ಉತ್ತೇಜನ ನೀಡಲು ಕೊಡುತ್ತಿದ್ದ ಸಬ್ಸಿಡಿಯನ್ನೇ ಕಿತ್ತುಕೊಂಡು ಖಜಾನೆ ತುಂಬಿಸಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯ ಅವರೇ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಟಾರ್ಗೆಟ್ ಮಾಡಿರುವ ಪಟ್ಟಿಯನ್ನು ಒಂದೇ ಸಲ ಬಿಡುಗಡೆ ಮಾಡಿಬಿಡಿ. ಮೇಲಿಂದ ಮೇಲೆ ಬರೆ ಹಾಕಿ ಜನರನ್ನು ನರಳಾಡಿಸಬೇಡಿ ಎಂದು ಬಿಜೆಪಿ ಟ್ವೀಟ್ ಮೂಲಕ ಕೇಳಿದೆ.
ವೀರಶೈವ-ಲಿಂಗಾಯತ ನಾಯಕರಿಗಷ್ಟೇ ಅಲ್ಲ, ಪೂರ್ಣ ಸಮುದಾಯಕ್ಕೇ ವಂಚಿಸುವುದು ಈ ಲಿಂಗಾಯತ ವಿರೋಧಿ ಎಟಿಎಂ ಸರ್ಕಾರದ ಸಿದ್ಧ ಸೂತ್ರ. ಈಗ ಲಿಂಗಾಯತ ಅಭಿವೃದ್ಧಿ ನಿಗಮಕ್ಕೇ ಅಡ್ಡಗಾಲು ಹಾಕುವ ಆಲೋಚನೆಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವಿದೆ. ಬೇಸತ್ತು ಹೋಗುವಷ್ಟು ಕಂಡೀಷನ್‌ಗಳಿರುವ ಗ್ಯಾರಂಟಿಗಳನ್ನೇ ಬೇಕಿದ್ದರೆ ವೀರಶೈವ-ಲಿಂಗಾಯತರೂ ಪಡೆಯಲಿ ಎಂಬ ಧೋರಣೆಯ ಈ ಸರ್ಕಾರದ ನಡೆ ಅಕ್ಷಮ್ಯ ಎಂದು ಬಿಜೆಪಿ ಕುಟುಕಿದೆ.












Click it and Unblock the Notifications