ನಾಳೆ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರ ಜೊತೆ ಯಡಿಯೂರಪ್ಪ ಸಭೆ
ಬೆಂಗಳೂರು, ಜನವರಿ 19: ದೆಹಲಿ ಗುರುಗ್ರಾಮದಲ್ಲಿ ಕೆಲವು ಬಿಜೆಪಿ ಶಾಸಕರನ್ನು ವಾಪಸ್ ಬರುವಂತೆ ಬುಲಾವ್ ಕಳುಹಿಸಿರುವ ಯಡಿಯೂರಪ್ಪ ಅವರು ನಾಳೆ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಬಿಜೆಪಿಯ ಎಲ್ಲ ಶಾಸಕರನ್ನು ಸ್ಥಳೀಯ ರೆಸಾರ್ಟ್‌ಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದ್ದು, ಅಲ್ಲಿಯೇ ಯಡಿಯೂರಪ್ಪ ಅವರು ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.
ಬೆಂಗಳೂರು ಹೊರವಲಯದ ಗೋಲ್ಡನ್ ಪಾಮ್ಸ್ ರೆಸಾರ್ಟ್‌ಗೆ ಬಿಜೆಪಿ ಶಾಸಕರು ತೆರಳುವ ಸಾಧ್ಯತೆ ಇದ್ದು, ಎಲ್ಲ ಬಿಜೆಪಿ ಶಾಸಕರು ಕಡ್ಡಾಯವಾಗಿ ಬೆಂಗಳೂರಿಗೆ ಬರುವಂತೆ ಈಗಾಗಲೇ ಫರ್ಮಾನು ಹೊರಡಿಸಲಾಗಿದೆ.

ಆಪರೇಷನ್ ಕಮಲದ ಮುಂದಿನ ಹಂತದ ಬಗ್ಗೆ ಯಡಿಯೂರಪ್ಪ ಅವರು ತಮ್ಮ ಶಾಸಕರಿಗೆ ವಿವರಿಸುತ್ತಾರೆ. ಹಾಗೆ ಮುಂದಿನ ದಿನಗಳಲ್ಲಿ ಪಕ್ಷದ ತಂತ್ರಗಾರಿಕೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನೆಲ್ಲಾ ಶಾಸಕರನ್ನು ರೆಸಾರ್ಟ್‌ನಲ್ಲಿ ಬಚ್ಚಿಟ್ಟಿರುವ ಕಾರಣ ಬಿಜೆಪಿಯು ಹೊಸ ರಣತಂತ್ರಕ್ಕೆ ಮೊರೆ ಹೋಗಲಿದೆ ಎನ್ನಲಾಗುತ್ತಿದೆ.
ಇಂದು ಬೆಳಿಗ್ಗೆಯಷ್ಟೆ, ಯಡಿಯೂರಪ್ಪ ಅವರು, ನಾವು ಸರ್ಕಾರ ಬೀಳೀಸುವುದಿಲ್ಲ, ಜೆಡಿಎಸ್-ಕಾಂಗ್ರೆಸ್ ಅವರು ಹೆರಬಾರದು ಎಂದು ಹೇಳಿದ್ದಾರೆ ಆದರೆ ರಾಜಕೀಯ ಪಕ್ಷಗಳ ಅಳುಕು ತಿರಿಲ್ಲ.












Click it and Unblock the Notifications