BJP Manifesto 2023: ಎರಡು ಕಡೆ ಬಂದರು ನಿರ್ಮಾಣ, ಕರಾವಳಿ ಕರ್ನಾಟಕಕ್ಕೆ ಏನೇನು?
ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಮತದಾರರನ್ನು ಸೆಳೆಯಲು ಇಂದು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಸಮೃದ್ಧ ಕರ್ನಾಟಕಕ್ಕಾಗಿ ರಾಜ್ಯದ ಜನತೆಯಿಂದಲೇ, ರಾಜ್ಯದ ಜನತೆಗಾಗಿ, ರಾಜ್ಯದ ಜನತೆಗೋಸ್ಕರ ಅವರ ಸಲಹೆಗಳ ಆಧಾರದಲ್ಲಿ ರೂಪಿಸಲಾದ ಬಿಜೆಪಿ ಪ್ರಜಾ ಪ್ರಣಾಳಿಕೆ 2023 ಇಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಡುಗಡೆಗೊಳಿಸಿದರು. ಕರಾವಳಿ ಕರ್ನಾಟಕ ಭಾಗಕ್ಕೆ ಬಿಜೆಪಿ ಪ್ರಣಾಳಿಕೆಯಲ್ಲಿ ಯಾವ ಭರವಸೆಗಳನ್ನು ನೀಡಲಾಗಿದೆ ಎಂದು ನೋಡೋಣ.

ಕರಾವಳಿ ಕರ್ನಾಟಕಕ್ಕೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳು ಹೀಗಿವೆ:-
1. ಕರಾವಳಿ ನವೋತ್ಥಾನ ಯೋಜನೆ' ಅಡಿಯಲ್ಲಿ 12,000 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಪ್ರಾರಮಭಿಸುತ್ತೇವೆ. ಈ ಮೂಲಕ ಕರ್ನಾಟಕವು ದೇಶದ ಕರಾವಳಿ ಪ್ರದೇಶಗಳ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸುತ್ತದೆ.
* ರಾಜ್ಯದಲ್ಲಿ ಬಂದರುಗಳ ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಸಲು 2028ರ ವೇಳೆಗೆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಸಣ್ಣ ಬಂದರುಗಳನ್ನು ನವೀಕರಿಸುತ್ತೇವೆ.

* ಕೇಣಿ ಮತ್ತು ಪಾವಿನಕುರ್ವೆಯಲ್ಲಿ ಬಂದರುಗಳ ನಿರ್ಮಾಣವನ್ನು ಪೂರ್ಣಗೊಳಿಸುತ್ತೇವೆ. ಇದರಿಂದ ಕರ್ನಾಟಕ ಅಂತಾರಾಷ್ಟ್ರೀಯ ಕರಾವಳಿ ವ್ಯಾಪಾರದ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ.
2. 2026ರ ವೇಳೆಗೆ ಡೀಸೆಲ್ ಚಾಲಿತ ಮೀನುಗಾರಿಕೆ ದೋಣಿಗಳನ್ನು ಎಲ್‌ಪಿಜಿ ಚಾಲಿತ ದೋಣಿಗೆಗಳಾಗಿ ಪರಿವರ್ತಿಸಲು 'ಪರಿಸರ ಸ್ನೇಹಿ ದೋಣಿ ಯೋಜನೆ' ಪ್ರಾರಂಭಿಸುವುದಾಗಿ ಬಿಜೆಪಿ ಹೇಳಿದೆ.
3. ಉತ್ತರ ಕನ್ನಡದಲ್ಲಿ ಏಮ್ಸ್ ಮಾದರಿಯಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸ್ಥಾಪಿಸುತ್ತೇವೆ.
4. ಪ್ರತಿ ಬಂದರಿಗೆ 100 ಕೋಟಿ ರೂ. ನೀಡುವ ಮೂಲಕ ರಾಜ್ಯದ 9 ಮೀನುಗಾರಿಕಾ ಬಂದರುಗಳನ್ನು ಮೇಲ್ದರ್ಜೆಗೆ ಏರಿಸಿ, ಆಧುನೀಕರಗೊಳಿಸುತ್ಥೆವೆ, ಡ್ರೆಡ್ಜಿಂಗ್ ಬಯೋವಾಲ್‌ಗಳನ್ನು ಸ್ಥಾಪಿಸಿ, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
5.'ಮಿಷನ್ ಕನೆಕ್ಷ್ ಕರ್ನಾಟಕ'ದ ಅಡಿಯಲ್ಲಿ ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಅನ್ನು ಅತ್ಯಾಧುನಿಕ ಎಕ್ಸಪ್ರೆಸ್‌ವೇ ಆಗಿ ಪರಿವರ್ತಿಸುವುದಾಗಿ ಬಿಜೆಪಿ ಹೇಳಿದೆ.
ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ಕರಾವಳಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳೇನು? ಇದರ ಬಗ್ಗೆ ತಿಳಿಯೋಣ..
ಸಾಗರಮಾಲಾ ಯೋಜನೆಯಡಿ ಕರಾವಳಿ ಪ್ರದೇಶದಲ್ಲಿ 18 ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಿರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಜೊತೆಗೆ 950 ಕೋಟಿ ರೂ ಮೊತ್ತದ 14 ಯೋಜನೆಗಳಿಗೆ ಅನುಮೋದನೆ ನೀಡಿ, ಮಂಗಳೂರು ಬಂದರಿನಲ್ಲಿ 3ನೇ ಹಂತದ ನವೀಕರಣ ಕಾಮಗಾರಿ, ಮಲ್ಪೆ ಬಂದರಿನ ವಿಸ್ತರಣೆ ಕಾರ್ಯ ಮಾಡಲಾಗಿದೆ ಎಂದು ಅದು ಹೇಳಿದೆ.
ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಮೀನುಗಾರರಿಗೆ ವಿವಿಧ ಸಾಲಭ್ಯಗಳನ್ನು ಒದಗಿಸಿದೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
* 2022-23ರಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಮತ್ಸ್ಯ ಸಿರಿ ಯೋಜನೆಯಡಿ 100 ಆಳ ಸಮುದ್ರ ಮೀನುಗಾರಿಕೆ ದೋಣಿಗಳು.
* 7,668 ಮೀನುಗಾರರಿಗೆ ಮೀನುಗಾರಿಕೆ ದೋಣಿಗಳನ್ನು ಒದಗಿಸುವುದು. 3,532 ಯಾಂತ್ರೀಕೃತ ದೋಣಿಗಳಿಗೆ ಒಂದು ಲಕ್ಷ ಕಿಲೋ ಲೀಟರ್‌ಗೂ ಹೆಚ್ಚು ತೆರಿಗೆ ಮುಕ್ತ ಸಬ್ಸಿಡಿ ಡೀಸೆಲ್.
* ಕೇಬಲ್ ನೆಟ್ ಮೂಲಕ ಮೀನುಗಾರಿಕೆ ನಡೆಸಲು 1000 ಮೀನುಗಾರರಿಗೆ 3 ಲಕ್ಷ ಸಹಾಯಧನ.
* ಆಶ್ರಯ ರಹಿತ ಮೀನುಗಾರರಿಗೆ ಆದ್ಯತೆಯ ಮೇರೆಗೆ 5000 ಮನೆಗಳು.
* ಸಾಮಖ್ರಾಮಿಕ ಸಮಯದಲ್ಲಿ ನೋಂದಾಯಿತ 18,746 ಮೀನುಗಾರರಿಗೆ 3000 ಪರಿಹಾರ
ನಾರಾಯಣ ಗುರು ಅಭಿವೃದ್ಧ ನಿಗಮವನ್ನು ಸ್ಥಾಪಿಸಿ, ನಿಗಮಕ್ಕೆ ನೀಡಿದ ಹಣವನ್ನು ಬಿಲ್ಲವ, ಈಡಿಗ ಮತ್ತು ಸಾಮಧಾರಿ ಸಮುದಾಯಗಳ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕಾಗಿ ಬಳಸಲಾಗಿದೆ ಎಮದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.












Click it and Unblock the Notifications