'ಮೋದಿ ಜೊತೆ ಮಾತನಾಡಲು ಬಿಜೆಪಿಯವರಿಗೆ ಧಮ್ ಇಲ್ಲ'

ಬೆಂಗಳೂರು, ಅಕ್ಟೋಬರ್ 05 : 'ಕರ್ನಾಟಕದ ಬಿಜೆಪಿ ನಾಯಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಳಿ ಮಾತನಾಡಲು ಧಮ್ ಇಲ್ಲ. ದೆಹಲಿಯಲ್ಲಿ ಮೌನವಾಗಿದ್ದ ಬಿಜೆಪಿ ನಾಯಕರು ಬೆಂಗಳೂರಿಗೆ ಬಂದ ನಂತರ ಜನರ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಕಳಸಾ-ಬಂಡೂರಿ ನಾಲಾ ಯೋಜನೆ ಕುರಿತು ಚರ್ಚಿಸಲು ದೆಹಲಿಗೆ ಸರ್ವಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಹೋದಾಗ ಬಿಜೆಪಿ ನಾಯಕರು ಮೌನವಾಗಿದ್ದರು' ಎಂದು ದೂರಿದರು. [ಏನಿದು ಕಳಸಾ-ಬಂಡೂರಿ ಯೋಜನೆ?]

siddaramaiah

'ಪ್ರಧಾನಿ ಮುಂದೆ ಮಾತನಾಡದೇ ಮೌನವಾಗಿದ್ದ ಬಿಜೆಪಿ ನಾಯಕರು ಬೆಂಗಳೂರಿಗೆ ಬಂದ ನಂತರ ಜನರ ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಬಳಿ ಮಾತನಾಡಲು ನಾಯಕರಿಗೆ ಧಮ್ ಇಲ್ಲ' ಎಂದು ಕುಟುಕಿದರು. [ಕಳಸಾ-ಬಂಡೂರಿ ವಿವಾದ ತಿರುಗೇಟು ಕೊಟ್ಟ ಸಿಎಂ]

'ಕಳಸಾ-ಬಂಡೂರಿ ವಿಚಾರದಲ್ಲಿ ಈಗಾಗಲೇ ಕರ್ನಾಟಕ ಸರ್ಕಾರ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮಾತುಕತೆ ನಡೆಸಿದೆ. ಅದು ಮುರಿದು ಬಿದ್ದ ಮೇಲೆ ಈ ವಿಚಾರ ನ್ಯಾಯಾಧೀಕರಣದ ಮೆಟ್ಟಿಲೇರಿದೆ. ಸೋನಿಯಾ ಗಾಂಧಿ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಬಿಜೆಪಿ ನಾಯಕರ ಹೇಳಿಕೆಗೆ ಅರ್ಥವಿಲ್ಲ' ಎಂದು ಸಿದ್ದರಾಮಯ್ಯ ತಿಳಿಸಿದರು. [ಮಹಾದಾಯಿ ವಿವಾದ : ಚರ್ಚೆಗೆ ಆಹ್ವಾನ ಕೊಟ್ಟ ಎಚ್ಡಿಕೆ]

'ಯಾವುದೇ ನೀರಾವರಿ ಯೋಜನೆಯಾದರೂ ರಾಜಕೀಯ ಮಾಡಬಾರದು. ಬಿಜೆಪಿಯವರು ಇದನ್ನು ಮೊದಲು ಅರಿತುಕೊಳ್ಳಬೇಕು. ರಾಜ್ಯಾದ್ಯಂತ ರೈತ ಚೈತನ್ಯ ಯಾತ್ರೆ ಮಾಡಿದರೆ ಬಿಜೆಪಿಯವರು ಪುನಃ ಅಧಿಕಾರಕ್ಕೆ ಬರಬಹುದು ಎಂದು ಅಂದುಕೊಂಡಿದ್ದಾರೆ. ಆದರೆ, ಈ ಕನಸು ನನಸಾಗುವುದಿಲ್ಲ' ಎಂದು ಮುಖ್ಯಮಂತ್ರಿಗಳು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+