ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಚ್ ಸ್ಕ್ರೀನ್ ಶಾಸಕರಿಗೆ ಬಿಜೆಪಿ ಶೋಕಾಸ್ ನೋಟಿಸ್

|
Google Oneindia Kannada News

ಬೆಂಗಳೂರು, ಡಿ.12 : ಬೆಳಗಾವಿ ಅಧಿವೇಶನದಲ್ಲಿ ಸಂದರ್ಭದಲ್ಲಿ ಆಟವಾಡಿ, ಫೋಟೋ ನೀಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದ ಬಿಜೆಪಿ ಶಾಸಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಮೂರು ದಿನದಲ್ಲಿ ನೋಟಿಸ್‌ಗೆ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸಂಚಾಲಕರಾದ ರಘುನಾಥರಾವ್ ಮಲ್ಕಾಪುರೆ ಔರಾದ್ ಶಾಸಕ ಪ್ರಭು ಚೌವಾಣ್ ಮತ್ತು ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಅವರಿಗೆ ಶುಕ್ರವಾರ ನೋಟಿಸ್ ಜಾರಿಗೊಳಿಸಿದ್ದಾರೆ. ಮೂರು ದಿನಗಳವೊಳಗೆ ಶಾಸಕರು ಉತ್ತರ ನೀಡಬೇಕೆಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. [ಪ್ರಭು ಚೌವಾಣ್ ಮಾಡಿದ್ದೇನು?]

mla

ನೋಟಿಸ್‌ನಲ್ಲೇನಿದೆ : ರಾಜ್ಯದ ಹಲವಾರು ದಿನಪತ್ರಿಕೆ ಮತ್ತು ಖಾಸಗಿ ಸುದ್ದಿವಾಹಿನಿಗಳಲ್ಲಿ ಡಿ.10ರಂದು ಬೆಳಗಾವಿ ನಡೆಯುತ್ತಿರುವ ವಿಧಾನಸಭೆ ಕಲಾಪದ ಅವಧಿಯಲ್ಲಿ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿರುವ ವಿಷಯ ಪ್ರಸಾರಗೊಂಡಿದೆ.

ಇದು ಗಂಭೀರ ವರ್ತನೆಯಾಗಿದ್ದು, ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಪಕ್ಷ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪತ್ರ ತಲುಪಿದ ಮೂರು ದಿನಗಳಲ್ಲಿ ಘಟನೆಯ ಬಗ್ಗೆ ವಿರಣೆ ನೀಡಬೇಕೆಂದು ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.

ಸದನಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಪ್ರಭು ಚೌವಾಣ್ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರ ಚಿತ್ರವನ್ನು ನೋಡುತ್ತಿದ್ದರು. ಯು.ಬಿ.ಬಣಕಾರ ಅವರು ಕ್ಯಾಂಡಿಕ್ರಶ್ ಗೇಮ್ ಆಡುತ್ತಿದ್ದರು. ಈ ಬಗ್ಗೆ ಸದನಲ್ಲಿ ಗುರುವಾರ ಗದ್ದಲ ಏರ್ಪಟ್ಟು ಒಂದು ದಿನದ ಕಲಾಪ ಸಂಪೂರ್ಣವಾಗಿ ವ್ಯರ್ಥವಾಗಿತ್ತು.

ಶುಕ್ರವಾರ ಒಂದು ದಿನದ ಮಟ್ಟಿಗೆ ಪ್ರಭು ಚೌವಾಣ್ ಅವರನ್ನು ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೂಚಿಸಿದ್ದರು ಮತ್ತು ಸದನಕ್ಕೆ ಇನ್ನು ಮುಂದೆ ಮೊಬೈಲ್ ತರಬಾರದು ಎಂದು ಆದೇಶ ನೀಡಿದ್ದರು.

English summary
Karnataka BJP on Friday issued show cause notice to two of its MLAs. Hirekerur MLA U.B.Banakar and Aurad MLA Prabhu Chuvan. MLAs were caught on TV camera watching photo and playing candy crush game on Smart Phones during proceedings of the Legislative Assembly session in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X