‘ಕಾಂಗ್ರೆಸ್‌ಗೆ ಕರ್ನಾಟಕ ಸಿಕ್ಕಿದ್ದು ಮುಳುಗುತ್ತಿದ್ದವರಿಗೆ ದೋಣಿ ಸಿಕ್ಕಂತಾ...’
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡು ಕಾಂಗ್ರೆಸ್ ಭಾರಿ ದೊಡ್ಡ ಅಂತರದ ಬಹುಮತ ಗಳಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಕಾಂಗ್ರೆಸ್ ವಿರುದ್ಧ ಇದೀಗ ಬಿಜೆಪಿ ಗಂಭೀರ ಆರೋಪ ಮಾಡಿದೆ. ಅಲ್ಲದೆ ಪರ್ಸಂಟೇಜ್‌ನ ಆರೋಪವನ್ನೂ ಮುಂದುವರಿಸಿದೆ. ಹಾಗಾದರೆ ಬಿಜೆಪಿ ಹೇಳಿದ್ದೇನು? ಬನ್ನಿ ತಿಳಿಯೋಣ.
ರಾಜ್ಯದಲ್ಲಿ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ರೂಪಾಯಿ ಸಿಕ್ಕ ವಿಚಾರ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಕಾಂಗ್ರೆಸ್ ವಿರುದ್ಧ ಕಮಲ ಪಾಳಯವು ಇದೇ ಅಸ್ತ್ರವನ್ನು ಬಳುಸುತ್ತಿದೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಈ ಅಸ್ತ್ರ ಬಳಸಿ ಬಿಜೆಪಿ ವಾಗ್ದಾಳಿ ನಡೆಸ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗಂಭೀರ ಆರೋಪ ಒಂದನ್ನ ಮಾಡಿದೆ ಕರ್ನಾಟಕ. ಹಾಗಾದರೆ ಬಿಜೆಪಿ ಆರೋಪ ಏನು?

'ಸಿದ್ದರಾಮಯ್ಯ ಶಿಷ್ಯ ಅಂಬಿಕಾಪತಿ ಮನೆಯಲ್ಲಿ...'
ಅಂದಹಾಗೆ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದಾಗ ಹೈಕಮಾಂಡ್‌ನ ಸಂತಸಕ್ಕೆ ಪಾರವೇ ಇಲ್ಲ. ಅಸ್ತಿತ್ವ ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಕಾಂಗ್ರೆಸ್‌ಗೆ ಕರ್ನಾಟಕ ಸಿಕ್ಕಿದ್ದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯಲ್ಲ, ದೋಣಿಯೇ ಸಿಕ್ಕಂತಾಗಿತ್ತು. ತನ್ನ ಟೂಲ್ ಕಿಟ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ 40% ಎಂಬ ಸುಳ್ಳು ಆರೋಪ ಮಾಡಿದ್ದರ ಹಿಂದೆ ಇದ್ದ ಸತ್ಯಾಂಶ ಈಗ ಸಂಪೂರ್ಣ ಬಯಲಾಗಿದೆ.' ಎಂದು ಗಂಭೀರ ಆರೋಪ ಮಾಡಿದೆ.
ಅಲ್ಲದೆ, 'ಪಂಚರಾಜ್ಯಗಳಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಗುತ್ತಿಗೆದಾರ ಹಾಗೂ ಸಿದ್ದರಾಮಯ್ಯ ಅವರ ಶಿಷ್ಯ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿರುವ ₹42 ಕೋಟಿಗಳು ಕರ್ನಾಟಕ ಕಾಂಗ್ರೆಸ್ ಪಾಲಿನ ಎಟಿಎಂ ಆಗಿದೆ ಹಾಗೂ 80% ಕಮಿಷನ್ ದಂಧೆ ನಡೆಸುತ್ತಿದೆ ಎಂಬುದಕ್ಕೆ ದೊರೆತ ಪುರಾವೆ.' ಎಂದು ಕಾಂಗ್ರೆಸ್ ವಿರುದ್ಧ ಇದೀಗ ಕರ್ನಾಟಕ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದಾಗ ಹೈಕಮಾಂಡ್‌ನ ಸಂತಸಕ್ಕೆ ಪಾರವೇ ಇಲ್ಲ. ಅಸ್ತಿತ್ವ ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಕಾಂಗ್ರೆಸ್‌ಗೆ ಕರ್ನಾಟಕ ಸಿಕ್ಕಿದ್ದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯಲ್ಲ, ದೋಣಿಯೇ ಸಿಕ್ಕಂತಾಗಿತ್ತು.
— BJP Karnataka (@BJP4Karnataka) October 15, 2023
ತನ್ನ ಟೂಲ್ ಕಿಟ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ 40% ಎಂಬ ಸುಳ್ಳು ಆರೋಪ ಮಾಡಿದ್ದರ…
ದೆಹಲಿಯಿಂದ ಬಂದ ಕಲೆಕ್ಷನ್ ಏಜೆಂಟ್...
ಹಾಗೇ, 'ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲೇ ಈ #ATMSarkara ಕ್ಕೆ ಇದ್ದದ್ದು ಹಣ ಕಲೆಕ್ಷನ್ ಮಾಡಿ ಹೈಕಮಾಂಡ್‌ಗೆ ಒಪ್ಪಿಸುವ ಬೃಹತ್ ಜವಾಬ್ದಾರಿ. ದೆಹಲಿಯಿಂದ ಬಂದ ಕಲೆಕ್ಷನ್ ಏಜೆಂಟ್ @rssurjewala ರಾಜ್ಯದ ಪ್ರಮುಖ ಅಧಿಕಾರಿಗಳೆನ್ನೆಲ್ಲ ಪಂಚತಾರಾ ಹೋಟೆಲ್‌ನಲ್ಲಿ ಗುಡ್ಡೆ ಹಾಕಿ ರಹಸ್ಯ ಸಭೆ ನಡೆಸಿದ್ದೇ ಈ ಸರ್ಕಾರ ಮುಂದೆ ನಡೆಯುವ ಹಾದಿಯನ್ನು ಅಧಿಕಾರಿಗಳಿಗೆ ಸ್ಪಷ್ಟಪಡಿಸಲು. ಎಲ್ಲಾ ಇಲಾಖೆಯ ಮುಖ್ಯಸ್ಥರಿಗೂ ತಿಂಗಳ ಟಾರ್ಗೆಟ್ಟನ್ನು ಸ್ವತಃ ಕೊಟ್ಟು ಹೋದ ಸುರ್ಜೇವಾಲ ಅವರು ನಂತರ ತಿಂಗಳಿಗೆ ಎರಡೆರೆಡು ಬಾರಿ ರಾಜ್ಯಕ್ಕೆ ಬರುವ ಮೂಲಕ ಟಾರ್ಗೆಟ್ ತಲುಪುತ್ತಿರುವುದನ್ನು ಸ್ವತಃ ಖಾತರಿ ಮಾಡಿಕೊಂಡರು. ಈಗ ಬರಗಾಲದಲ್ಲಿಯೂ ಬಂಗಾರದಂತೆ ಹೊಳೆಯುತ್ತಿರುವುದೇ ಅವತ್ತು ಬಿತ್ತಿ ಹೋದ ಬೀಜದ ಸಮೃದ್ಧ ಫಸಲು.' ಎಂದಿದೆ ಬಿಜೆಪಿ.
ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲೇ ಈ #ATMSarkara ಕ್ಕೆ ಇದ್ದದ್ದು ಹಣ ಕಲೆಕ್ಷನ್ ಮಾಡಿ ಹೈಕಮಾಂಡ್‌ಗೆ ಒಪ್ಪಿಸುವ ಬೃಹತ್ ಜವಾಬ್ದಾರಿ. ದೆಹಲಿಯಿಂದ ಬಂದ ಕಲೆಕ್ಷನ್ ಏಜೆಂಟ್ @rssurjewala ರಾಜ್ಯದ ಪ್ರಮುಖ ಅಧಿಕಾರಿಗಳೆನ್ನೆಲ್ಲ ಪಂಚತಾರಾ ಹೋಟೆಲ್‌ನಲ್ಲಿ ಗುಡ್ಡೆ ಹಾಕಿ ರಹಸ್ಯ ಸಭೆ ನಡೆಸಿದ್ದೇ ಈ ಸರ್ಕಾರ ಮುಂದೆ ನಡೆಯುವ…
— BJP Karnataka (@BJP4Karnataka) October 15, 2023
ಸರಣಿ ಟ್ವೀಟ್ ಮೂಲಕ ಬಿಜೆಪಿ, 'ಒಬ್ಬ ಮಾಜಿ ಕಾರ್ಪೋರೇಟರ್ ಪತಿಯೇ ನಿತ್ಯವೂ ಕೋಟಿಗಟ್ಟಲೆ ದುಡ್ಡಿನ ಮೇಲೆ ಮಲಗುತ್ತಾನೆ ಎಂದರೆ ಇನ್ನು ಈ #ATMSarkara ದಲ್ಲಿ ಮಂತ್ರಿಗಳಾಗಿದ್ದವರು ಅದೆಷ್ಟು ತಿಂದು ತೇಗಿರಬಹುದು ಎಂಬುದನ್ನು ನೀವೇ ಊಹಿಸಿ. ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆಯಾದರೆ ಅದರಲ್ಲಿ ಹಳ್ಳಿಗೆ ಸೇರುವುದು 15 ಪೈಸೆ ಮಾತ್ರ ಎಂದು ಮಹಾನ್ ಕಾಂಗ್ರೆಸ್ಸಿಗ ಹಾಗೂ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಸ್ವತಃ ಬಾಯಿ ಬಿಟ್ಟು ಹೇಳಿದ್ದರು. ಅದನ್ನು @INCKarnataka ಶಿರಸಾವಹಿಸಿ ಪಾಲಿಸುತ್ತಿರುವುದು ಮಾತ್ರವಲ್ಲದೆ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ವಿಧಾನ ಸೌಧದಲ್ಲಿ ಕೂತು ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದರೆ, ಅದರಲ್ಲಿ ₹80 ಲಕ್ಷ ಕ್ವೀನ್ಸ್ ರಸ್ತೆಗೆ ತಲುಪುತ್ತದೆ.' ಎಂದು ಆರೋಪ ಮಾಡಿದೆ.
ಒಬ್ಬ ಮಾಜಿ ಕಾರ್ಪೋರೇಟರ್ ಪತಿಯೇ ನಿತ್ಯವೂ ಕೋಟಿಗಟ್ಟಲೆ ದುಡ್ಡಿನ ಮೇಲೆ ಮಲಗುತ್ತಾನೆ ಎಂದರೆ ಇನ್ನು ಈ #ATMSarkara ದಲ್ಲಿ ಮಂತ್ರಿಗಳಾಗಿದ್ದವರು ಅದೆಷ್ಟು ತಿಂದು ತೇಗಿರಬಹುದು ಎಂಬುದನ್ನು ನೀವೇ ಊಹಿಸಿ.
— BJP Karnataka (@BJP4Karnataka) October 15, 2023
ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆಯಾದರೆ ಅದರಲ್ಲಿ ಹಳ್ಳಿಗೆ ಸೇರುವುದು 15 ಪೈಸೆ ಮಾತ್ರ ಎಂದು ಮಹಾನ್ ಕಾಂಗ್ರೆಸ್ಸಿಗ ಹಾಗೂ ಮಾಜಿ…
ಅಂತಿಮವಾಗಿ, 'ರಾಜ್ಯದ ಜನರ ಶ್ರಮದ ದುಡಿಮೆಯ ಹಣವನ್ನು ಪಂಚ ರಾಜ್ಯಗಳ ಚುನಾವಣೆ ಖರ್ಚಿಗೆ "ಕೈ" ಸರ್ಕಾರ ನೀಡಲು ಮುಂದಾಗಿರುವುದು ನಾಡದ್ರೋಹದ ಕೆಲಸ. ರಾಜ್ಯದ ಜನತೆಗೆ ತೆರಿಗೆಯ ಹೊರೆ ಹೆಚ್ಚಿಸಿ, ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿ, ಈಗ ಪಂಚರಾಜ್ಯಗಳಿಗೆ ಫಂಡ್ ಮಾಡುತ್ತಿರುವುದು, ಅತ್ತೆಯ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ. ಕಲೆಕ್ಷನ್ ದಂಧೆಯಲ್ಲಿ ಕಮಾಯಿ ಮಾಡುತ್ತಾ, ಕರ್ನಾಟಕವನ್ನು ATM ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಬೀಗ ಜಡಿಯದಿದ್ದರೆ, ಕರ್ನಾಟಕ ರಾಜ್ಯ ಸಂಪೂರ್ಣ ದಿವಾಳಿಯಾಗುವುದು ಖಂಡಿತ.' ಎಂದು ಹೇಳಿದೆ ಕರ್ನಾಟಕ ಬಿಜೆಪಿ.
ರಾಜ್ಯದ ಜನರ ಶ್ರಮದ ದುಡಿಮೆಯ ಹಣವನ್ನು ಪಂಚ ರಾಜ್ಯಗಳ ಚುನಾವಣೆ ಖರ್ಚಿಗೆ “ಕೈ” ಸರ್ಕಾರ ನೀಡಲು ಮುಂದಾಗಿರುವುದು ನಾಡದ್ರೋಹದ ಕೆಲಸ.
— BJP Karnataka (@BJP4Karnataka) October 15, 2023
ರಾಜ್ಯದ ಜನತೆಗೆ ತೆರಿಗೆಯ ಹೊರೆ ಹೆಚ್ಚಿಸಿ, ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿ, ಈಗ ಪಂಚರಾಜ್ಯಗಳಿಗೆ ಫಂಡ್ ಮಾಡುತ್ತಿರುವುದು, ಅತ್ತೆಯ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ.
ಕಲೆಕ್ಷನ್…












Click it and Unblock the Notifications