Karnataka bandh: ಇಂದು ಅಖಂಡ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ? ಸಂಪೂರ್ಣ ಮಾಹಿತಿ
ಬೆಳಗಾವಿಯಲ್ಲಿ ಕೆಸ್‌ಎಆರ್‌ಟಿಸಿ ಕಂಡಕ್ಟರ್ ಮೇಲೆ ಮರಾಠಿಗರಿಂದ ದಾಳಿ ಖಂಡಿಸಿ, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ತಡೆಯುವುದು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧ, ಕಳಸಾ ಬಂಡೂರಿ ಮಹದಾಯಿ ಯೋಜನೆ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಶನಿವಾರ (ಮಾರ್ಚ್ 22) ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇನ್ನು ಈ ಬಂದ್ ಅನ್ನು ಎಲ್ಲರೂ ಬೆಂಬಲಿಸಿಲ್ಲ. ಕೆಲವರು ಮಾತ್ರವೇ ಬಂದ್‌ಗೆ ನೇರ ಬೆಂಬಲ ಸೂಚಿಸಿದ್ದು, ಇನ್ನೂ ಕೆಲ ಸಂಘಟನೆಗಳು ಬಂದ್ ಬೇಡ ಎಂತಲೇ ವಾದಿಸಿವೆ. ಆದರೂ ಇಂದು ಬಂದ್ ಹಿನ್ನೆಲೆ ಏನೇನಿರುತ್ತೆ? ಏನೇನಿರಲ್ಲ? ಎಂಬ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಕನ್ನಡ ಒಕ್ಕೂಟಗಳು ಕರ್ನಾಟಕ ಬಂದ್ ಹಮ್ಮಿಕೊಂಡಿದ್ದು, ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಮುಂದಾಗಿವೆ. ಇನ್ನು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ಕೂಡ ನಡೆಯಲಿದೆ. ಆದರೆ, ರಾಜ್ಯ ಸರ್ಕಾರ ಕೂಡ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿಲ್ಲ. ಕನ್ನಡಪರ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಆಚರಣೆಗೆ ಕರೆ ನೀಡುವ ಅಗತ್ಯವಿರಲಿಲ್ಲ. ಅವರ ಬೇಡಿಕೆಗಳ ಬಗ್ಗೆ ಸರ್ಕಾರದ ಜೊತೆ ಮಾತನಾಡಬಹುದಿತ್ತು. ಬಂದ್ ಕರೆ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ.

ಸದ್ಯ ಕರ್ನಾಟಕ ಬಂದ್ಗೆ ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್ಆರ್ಟಿಸಿ, ಕರ್ನಾಟಕ ಫಿಲ್ಮ್ ಚೇಂಬರ್, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬೆಂಬಲ ವ್ಯಕ್ತವಾಗಿದೆ. ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಮಾತ್ರ ಬೆಂಬಲ ಸೂಚಿಸಿದ್ದರೆ, ಟಿ.ಎ.ನಾರಾಯಣಗೌಡರ ಬಣ ಬೆಂಬಲ ನೀಡಲ್ಲ ಎಂದು ಹೇಳಿದೆ. ಹೊಟೇಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿವೆ. ಉಳಿದಂತೆ ಓಲಾ, ಉಬರ್ ಅಸೋಸಿಯೋಷನ್ ಸೇರಿ ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.
ಈನ ದಿನದ ಬಂದ್‌ಗೆ ಓಲಾ, ಉಬರ್ ಚಾಲಕರ ಸಂಘ, ಕರವೇ ಗಜಕೇಸರಿ ಸೇನೆ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ಜಯಭಾರತ್ ಚಾಲಕರ ಸಂಘ, ಕರ್ನಾಟಕ ಜನಪರ ವೇದಿಕೆ, ವೀರ ಕನ್ನಡಿಗರ ಸೇನೆ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು, ಬೆಂಗಳೂರು ಆಟೊ ಸೇನೆ, ಆದರ್ಶ ಆಟೊ ಯೂನಿಯನ್, ಗೂಡ್ಸ್ ಚಾಲಕರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿವೆ. ರಾಜ್ಯದ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದ ಅಧಿಕೃತ ರಜೆ ಘೋಷಣೆಯಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ಶಾಲೆ-ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಎಸ್ಆರ್ಟಿಸಿ ಯೂನಿಯನ್ಗಳು ಒಗ್ಗೂಡಿ ಬಂದ್ಗೆ ಬೆಂಬಲ ನೀಡಿದರೆ ಬಸ್ ಓಡಲ್ಲ, ಬೆಂಬಲಿಸದಿದ್ದರೆ ಬಸ್ ಸಂಚಾರ ಇರುತ್ತೆ ಎನ್ನುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗೊಂದಲ ಸೃಷ್ಟಿಸಿದ್ದಾರೆ.

ಇಂದು ಏನಿರಲ್ಲ?
* ಓಲಾ
* ಉಬರ್
* ಆಟೋ ಸೇವೆ
* ಏರ್‌ಪೋರ್ಟ್ ಟ್ಯಾಕ್ಸಿ
* ಕೆಲ ಖಾಸಗಿ ವಾಹನಗಳ ಸಂಚಾರ
* ಮಧ್ಯಾಹ್ನದವರೆಗೆ ಸಿನಿಮಾ ಶೋಗಳು ಕ್ಯಾನ್ಸಲ್
ಏನೆಲ್ಲ ಇರುತ್ತೆ?
* ಆಸ್ಪತ್ರೆ, ವೈದ್ಯಕೀಯ ಸೇವೆ
* ಮೆಡಿಕಲ್
* ಹಾಲು
* ಅಗತ್ಯ ವಸ್ತುಗಳು
* ನಮ್ಮ ಮೆಟ್ರೋ
* ಶಾಲಾ ಕಾಲೇಜುಗಳು
* ಸರ್ಕಾರಿ ಕಚೇರಿಗಳು
* ಬಾರ್‌ಗಳು












Click it and Unblock the Notifications