Winter Session: ಇಂದಿನಿಂದ ವಿಧಾನಮಂಡಲದ 11ನೇ ಅವಧಿಯ ಚಳಿಗಾಲ ಅಧಿವೇಶನ: ಡಿ.19ಕ್ಕೆ ಅಧಿವೇಶನ ಮುಕ್ತಾಯ?
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ರಾಜ್ಯ ವಿಧಾನಮಂಡಲದ ಚಳಿಗಾಲದ 11ನೇ ಅವಧಿಯ ಅಧಿವೇಶನವು ಇಂದು ಸೋಮವಾರ ಡಿಸೆಂಬರ್ 09ರಿಂದ ಡಿಸೆಂಬರ್ 20ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ದೊಡ್ಡ ಜಿಲ್ಲೆಯದ ಬೆಳಗಾವಿಯ ಸುವರ್ಣಸೌಧದಲ್ಲಿ ಸದನದ ಕಾಲಪಗಳು ಆರಂಭವಾಗಲಿವೆ. ಆದರೆ ನಿಗದಿಯಂತ ಹತ್ತು ದಿನಗಳ ಕಾಲ ನಡೆಯಲಿದೆ ಎನ್ನಲಾಗುತ್ತಾದರೂ ಡಿಸೆಂಬರ್ 19ಕ್ಕೆ ಅಧಿವೇಶನ ಮೊಟಕುಗೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಇಲ್ಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂವಾಗುತ್ತಿದ್ದಂತೆ ಮೊದಲಿಗೆ ಸಂತಾಪ ಸೂಚನಾ ನೀರ್ಣಯ ಮಂಡನೆ ಮಾಡಲಾಗುತ್ತಿದೆ. ಈ ಹಿಂದಿನ ಅಧಿವೇಶನದಿಂದ ಈವರೆಗೆ ಮೃತಪಟ್ಟ ರಾಜಕೀಯ ಗಣ್ಯರಿಗೆ ಈ ವೇಳೆ ಸಂತಾಪ ಸೂಚಿಸಲಾಗುತ್ತದೆ.

ಈ ಹತ್ತು ದಿನಗಳ ಅಧಿವೇಶನ ಗಮನದಲ್ಲಿಟ್ಟುಕೊಂಡಿರುವ ರಾಜ್ಯ ಬಿಜೆಪಿಯು ಸಿಎಂ ಸಿದ್ದರಾಮಯ್ಯ ಮೇಲಿನ ಮುಡಾ ಹಗರಣ ಮತ್ತು ತನಿಖೆ, ವಕ್ಪ್ ಮಂಡಳಿಯಿಂದ ಸಾವಿರಾರು ಎಕರೆ ಜಮೀನು ಕಳಬಳಿಕೆ ಪ್ರಕರಣ, ಸರ್ಕಾರದಲ್ಲಿನ ಭ್ರಷ್ಟಾಚಾರ, ಅಕ್ರಮ, ಸರ್ಕಾರಿ ಅಧಿಕಾರಿಗಳ ಸಾವು ಸೇರಿದಂತೆ ವಿವಿಧ ವಿಷಯಗಳನ್ನು ಇಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಸಜ್ಜಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಹಾಗೂ ಶಾಸಕರು, ಬಿಜೆಪಿ ಮಾಡುವ ಆರೋಪಿಗಳು, ಪ್ರಸ್ತಾಪಿಸುವ ವಿಷಯಗಳಿಗೆ ಎದುರೇಟು ಕೊಡಲು ಸಜ್ಜಾಗಿದ್ದಾರೆ. ಬಿಜೆಪಿ ಅವಧಿಯ ಭ್ರಷ್ಟಾಚಾರಗಳನ್ನು ಎಳೆದು ತರುವ ಸಾಧ್ಯತೆ ಇದೆ. ಈ ಮಧ್ಯೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ನಾಲ್ಕು ದಿನ ಮೀಸಲಿಡಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ, ಬಸವನಗ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರವಾಸೋದ್ಯಮ ರೂಪ್‌ವೇ ವಿಧೇಯಕ ಪರ್ಯಾಲೋಚನೆ ಮಂಡಿಸುವುದು ಸೇರಿದಂತೆ ಒಟ್ಟು ಸುಮಾರು 15 ವಿಧೇಯಕಗಳನ್ನು ಮಂಡಿಸುವ ಸಾಧ್ಯತೆ ಇದೆ.
ಅಧಿವೇಶನ ಒಂದು ಮೊದಲೇ ಮುಕ್ತಾಯ, ಯಾಕೆ?
ಡಿಸೆಂಬರ್ 9ರಿಂದ 20ರವರೆಗೆ ಒಟ್ಟು ಹತ್ತು ದಿನಗಳ ಕಾಲ ಅಧಿವೇಶನಕ್ಕೆ ಸಮಯ ನಿಗದಿ ಆಗಿದೆ. ಆದರೆ ಡಿಸೆಂಬರ್ 20ರಂದು ಮಂಡ್ಯದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನ ಸಲುವಾಗಿ ಚಳಿಗಾಲ ಅಧಿವೇಶನವು ಡಿಸೆಂಬರ್ 19ರಂದು ಮೊಟಕುಗೊಳ್ಳುವ ನಿರೀಕ್ಷೆ ಇದೆ. ಈ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ಬಳಿಕ ಅಧಿಕೃತ ಮಾಹಿತಿ ಹೊರ ಬೀಳಲಿದೆ.












Click it and Unblock the Notifications