ಜುಲೈ 5ರಂದು ಸ್ಪೀಕರ್ ಆಯ್ಕೆ, ಕೆ.ಬಿ.ಕೋಳಿವಾಡ ನೂತನ ಸ್ಪೀಕರ್?

Posted By:
Subscribe to Oneindia Kannada

ಬೆಂಗಳೂರು, ಜೂನ್ 28 : ಕರ್ನಾಟಕ ವಿಧಾನಸಭೆ ಸ್ಪೀಕರ್ ಆಯ್ಕೆಗೆ ಜುಲೈ 5ರಂದು ಚುನಾವಣೆ ನಡೆಯಲಿದೆ. ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಸಂಪುಟ ಸೇರಿರುವುದರಿಂದ, ಹೊಸ ಸ್ಪೀಕರ್ ಆಯ್ಕೆ ಮಾಡಬೇಕಾಗಿದೆ.

ಜುಲೈ 5ರಂದು ನೂತನ ಸ್ಪೀಕರ್ ಆಯ್ಕೆ ಮಾಡಲು ಚುನಾವಣೆ ನಡೆಸಲಾಗುತ್ತದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಹೇಳಿದ್ದಾರೆ. ಜುಲೈ 4 ರಂದು ಮಧ್ಯಾಹ್ನ 12 ಗಂಟೆಯೊಳಗೆ ಸ್ಪೀಕರ್ ಆಯ್ಕೆ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. [ಬಗೆಹರಿಯಿತು ಸ್ಪೀಕರ್ ಹುದ್ದೆಯ ಕಗ್ಗಂಟು!]

kb koliwad

ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಅವರಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಸಲು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯಪಾಲರು ಜುಲೈ 5ರಂದು ಚುನಾವಣೆ ನಡೆಸಲು ಸೂಚನೆ ಕೊಟ್ಟಿದ್ದಾರೆ. [ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಅವರು ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಕೋಳಿವಾಡ ಅವರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. [ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 13 ಹೊಸಮುಖಗಳ ಸೇರ್ಪಡೆ]

ಹೇಗೆ ನಡೆಯುತ್ತೆ ಆಯ್ಕೆ? : ಸಭಾಧ್ಯಕ್ಷರನ್ನು ಆಯ್ಕೆ ಮಾಡಬೇಕೆಂದು ಶಾಸಕರೊಬ್ಬರು ವಿಧಾನಸಭೆ ಕಾರ್ಯದರ್ಶಿಗಳಿಗೆ ಚುನಾವಣಾ ಪ್ರಸ್ತಾವನೆ ಸಲ್ಲಿಸಬೇಕು. ಇದನ್ನು ಮತ್ತೊಬ್ಬ ಶಾಸಕರ ಅನುಮೋದಿಸಬೇಕು.

ಪ್ರಸ್ತಾವನೆಯಲ್ಲಿ ಸ್ಪೀಕರ್ ಹುದ್ದೆಗೆ ಸೂಚಿಸಲಾದ ಶಾಸಕ ಚುನಾಯಿತರಾದರೆ ಸೇವೆ ಸಲ್ಲಿಸಲು ಸಮ್ಮತಿ ಇದೆ ಎಂಬುದನ್ನು ಲಿಖಿತವಾಗಿ ಸ್ಪಷ್ಟಪಡಿಸಿರಬೇಕು. ಈ ರೀತಿ ಕ್ರಮಬದ್ಧವಾಗಿರುವ ಪ್ರಸ್ತಾವನೆಯನ್ನು ಅಭ್ಯರ್ಥಿಯಾಗಲಿ, ಸೂಚಕರಾಗಲಿ ಅಥವಾ ಅನುಮೋದಕರಾಗಲಿ ಖುದ್ದಾಗಿ ವಿಧಾನಸಭೆ ಕಾರ್ಯದರ್ಶಿ ಅವರಿಗೆ ಜುಲೈ 4 ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Election will be held on July 5, 2016 to elect new speaker for Karnataka assembly. Post vacant after Kagodu Thimmappa joined for Chief Minister Siddaramaiah cabinet.
Please Wait while comments are loading...