Get Updates
Get notified of breaking news, exclusive insights, and must-see stories!

karnataka Assembly Session: ಭಾಷಣದಲ್ಲಿ ಕಾಂಗ್ರೆಸ್ ಸರ್ಕಾರದ ಪರ ಬ್ಯಾಟ್ ಬೀಸಿದ ರಾಜ್ಯಪಾಲರು, ಮುಖ್ಯ ಅಂಶಗಳಿವು

ಬೆಂಗಳೂರು, ಜುಲೈ 03: ಅಸ್ತಿತ್ವಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ವಿಧಾನಮಂಡಲ ಜಂಟಿ ಅಧಿವೇಶನ ಇಂದು ಜೂನ್ 03ರಿಂದ ಆರಂಭಗೊಂಡಿದೆ. ಮೊದಲ ದಿನ ಸದನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಐದು ಗ್ಯಾರಂಟಿಗಳನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ಪರ ಬ್ಯಾಟ್ ಬೀಸಿದರು. ಜೊತೆಗೆ ಕೃಷಿ, ರೈತರ ಪೂರಕ ವಾತಾವರಣ ನಿರ್ಮಾಣ, ಅನೂಕೂಲಕರ ಕಾಯ್ದೆಗಳನ್ನು ಮುಂದುವರಿಸುವುದು ಹಾಗೂ ಪಿಟಿಸಿಎಲ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವುದು ಮುಖ್ಯ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎಲ್ಲರೂ ಸಮಾನರೆಂಬ ಧ್ಯೇಯವಾಕ್ಯದಡಿ ಜನಸ್ನೇಹಿಯಾದ ಮತ್ತು ನಿಸ್ಪಕ್ಷಪಾತ ಆಡಳಿತ ನೀಡುವುದೇ ನಮ್ಮ ಸರ್ಕಾರ ಗುರಿಯಾಗಿದೆ. ಸಮರ್ಥ ಕಾನೂನು ಸುವ್ಯವಸ್ಥೆ ಒದಗಿಸುವ ಮೂಲಕ ಮಹಿಳೆಯರು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಇನ್ನು ಪೊಲೀಸ್ ಇಲಾಖೆಯನ್ನು ಮಹಿಳಾ ಹಾಗೂ ಮಕ್ಕಳಸ್ನೇಹಿ ಆಗಿಸಲಿದ್ದೇವೆ.

karnataka Assembly Session: Governor Thawar Chand Gehlot Speech in Joint Session on July 3rd

ಆರೋಗ್ಯ ವಲಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಕಠಿಣ ಹೋರಾಟ ನಡೆಸಲಾಗುವುದು ಎಂದು ರಾಜ್ಯಪಾಲರು ಸರ್ಕಾರ ಪರ ಅವರು ಭರವಸೆ ನೀಡಿದರು.

ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ ರಾಜ್ಯಪಾಲರು, ದೇಶದ ಆರ್ಥಿಕ ವ್ಯವಸ್ಥೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಕೊಡುಗೆ ಅಪಾರ. ಅದರಲ್ಲೂ ರಾಜಧಾನಿ ಬೆಂಗಳೂರು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ನಗರದಿಂದ ದೇಶಕ್ಕೆ ಅಪಾರ ಕೊಡುಗೆ ದೊರೆತಿದೆ. ಇಲ್ಲಿ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಅಭಿವೃದ್ಧಿ ನಗರವಾಗಿ ರೂಪಿಸುತ್ತೇವೆ ಎಂದರು.

karnataka Assembly Session: Governor Thawar Chand Gehlot Speech in Joint Session on July 3rd

ಕುಡಿಯುವ ನೀರಿನ ವ್ಯವಸ್ಥೆ, ಆರ್ಥಿಕ ಸಬಲೀಕರಣ

ಇನ್ನೂ ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ಶುದ್ಧಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಸರ್ಕಾರ ಮಟ್ಟದ್ಲಲಿ ಹೊಸ ಕಾರ್ಯಕ್ರಮಗಳ ಅನುಷ್ಠಾನ ತರಲಾಗುವುದು. ದೇಶದ ಜೀವಾಳ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ. ನರೇಗಾ ಯೋಜನೆ, ಮಾಹಿತಿ ಹಕ್ಕು ಕಾಯ್ದೆಗೆ ಮತ್ತಷ್ಟು ಬಲ ನೀಡುವ ಜೊತೆಗೆ ಬಡವರ ಆರ್ಥಿಕ ಸಬಲೀಕರಣಕ್ಕೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಲಿದೆ. ಅದರಲ್ಲೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (APMC) ಸಾಕಷ್ಟು ಸುಧಾರಣೆ ತರುವ ಮೂಲಕ ಅವುಗಳನ್ನು ರೈತಸ್ನಹಿ ಮಾರುಕಟ್ಟೆಗಳನ್ನಾಗಿ ರೂಪಿಸುವ ಗುರಿ ನಮ್ಮ ಸರ್ಕಾರ ಹೊಂದಿದೆ.

ಕೃಷಿ ವ್ಯವಸ್ಥೆಗೆ ಹೊಸ ಕಾಯಕಲ್ಪ

ಕೃಷಿಯಲ್ಲಿ ಆಧುನಿಕಗೊಳಿಸಲು ವೈಜ್ಞಾನಿಕ ಪದ್ಧತಿಗಳ ಅನುಷ್ಠಾನ ಜಾರಿ ತರಲಾಗುವುದು. ಅದರೊಂದಿಗೆ ಈ ರಂಗದಲ್ಲಿಯೇ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಲು ಪ್ರಯತ್ನಿಸಲಾಗುವುದು. ಹಾಗೆಯೇ ಜನಕೇಂದ್ರಿತ ಆರ್ಥಿಕ ವ್ಯವಸ್ಥೆಗೆ ಒತ್ತು ನೀಡಲಿದ್ದೇವೆ. ರೈತರಿಗೆ ಬಿತ್ತನೆ ಸಮಯದಲ್ಲಿ ಅಗತ್ಯ ಬೀಜ ರಸಗೊಬ್ಬರಗಳ ಪೂರೈಕೆ ಮಾಡುವ ಜೊತೆಗೆ ಯಾವುದೇ ತೊಂದರೆ, ವಿಳಂಬ ಇಲ್ಲದೇ ನೋಡಿಕೊಳ್ಳಲಾಗುವುದ ಎಂದು ಅವರು ಹೇಳಿದರು.

ಅಲೆಮಾರಿ ಕುರಿಗಾಹಿಗಳಿಗೆ ಪ್ರತ್ಯೇಕ ಕಾಯ್ದೆ ರೂಪಿಸುವ ಜೊತೆಗೆ ಕುರಿ-ಮೇಕೆ-ಹಸುಗಳು ನೈಸರ್ಗಿಕ ವಿಕೋಪಗಳಿಂದ ಮೃತಪಟ್ಟಲ್ಲಿ ಅವುಗಳಿಗೆ ಪರಿಹಾರ ನೀಡುವಲ್ಲಿ ಪೂರಕವಾಗುವ ಅನುಗ್ರಹ ಯೋಜನೆ ಮುಂದುವರಿಸಲಾಗುವುದು. ಅದಲ್ಲದೇ ಪಶುಭಾಗ್ಯ ಯೋಜನೆಗೆ ಮತ್ತಷ್ಟು ಬಲ ತುಂಬಲು ಚಿಂತನೆ ನಡೆಸಲಾಗಿದ್ದು, ಪಾರಂಪರಿಕೆ ನೀರಾವರಿ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುವುದು.

ಕೃಷಿ ಭಾಗ್ಯ ಯೋಜನೆ ವಿಸ್ತರಣೆ

ಎಲ್ಲಾ ನೀರಾವರಿ ಯೋಜನೆಗಳ ಅನುಷ್ಠಾನ, 2013, 2018 ರ ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಣೆ ಮಾಡಲಾಗುವುದು. ವಸತಿ ರಹಿತರಿಗೆ ವಸತಿ ಯೋಜನೆ ಅನುಷ್ಠಾನಗೊಳಿಸಲಿದ್ದೇವೆ. ಅದರಲ್ಲೂ ಮುಖ್ಯವಾಗಿ ಪೌರ ಕಾರ್ಮಿಕರು, ಚಾಲಕರು, ಬೀದಿ‌ಬದಿ ವ್ಯಾಪಾರಿಗಳು, ಗಾರ್ಮೆಂಟ್ ಕೆಲಸಗಾರರು, ಕಟ್ಟಡ ಕಾರ್ಮಿಕರುವಿಶೇಷಚೇತನರ ಅಭಿವೃದ್ಧೀಗಾಗಿ ಕ್ರಿಯಾಶೀಲ ಯೋಜನೆ ಅನುಷ್ಠಾನ ತರಲಾಗುವುದು.

ಪಿಟಿಸಿಎಲ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ದಮನಿತ ಸಮುದಾಯಗಳಿಗೆ ಸ್ವಾವಲಂಬಿ ಜೀವನ ಸಾಗಿಸಲು ಸಹಕರಿಸುವುದು. ವಿಶ್ವವಿದ್ಯಾಲಯಗಳಲ್ಲಿ ಸಾಮರಸ್ಯದ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡುವುದಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದು ಅವರು ವಿವರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+