ಜುಲೈ 29ರಂದು ವಿಶ್ವಾಸಮತಯಾಚನೆ : ಯಡಿಯೂರಪ್ಪ

Recommended Video

      ಜುಲೈ 29ಕ್ಕೆ ಬಿಎಸ್‍ವೈ ಭವಿಷ್ಯ ನಿರ್ಧಾರ

      ಬೆಂಗಳೂರು, ಜುಲೈ 26 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜುಲೈ 29ರಂದು ಬಹುಮತ ಸಾಬೀತು ಮಾಡುವುದಾಗಿ ಅವರು ಘೋಷಣೆ ಮಾಡಿದರು.

      ಶುಕ್ರವಾರ ಮೊದಲ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, "ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಜನತೆ, ಪ್ರತಿಪಕ್ಷಗಳಿಗೆ ಭರವಸೆ ಕೊಡುತ್ತೇನೆ. ಫರ್ ಗೆಟ್ ಅಂಡ್ ಫರ್ ಗಿವ್ ನಮ್ಮ ನಿಲುವು" ಎಂದು ಹೇಳಿದರು.

      Karnataka assembly floor test on July 29 says Yeddyurappa

      "ಜುಲೈ 29ರಂದು ವಿಧಾನ ಮಂಡಲ ಅಧಿವೇಶನ ಕರೆಯಲು ತೀರ್ಮಾನ ಮಾಡಿದ್ದೇವೆ. ಅಂದು ಬೆಳಗ್ಗೆ 10 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಅಂದು ವಿಶ್ವಾಸಮತ ಸಾಬೀತು ಮಾಡುತ್ತೇವೆ" ಎಂದು ತಿಳಿಸಿದರು.

      "ವಿಶ್ವಾಸಮತಯಾಚನೆ ಮತ್ತು ಫೈನಾನ್ಸ್ ಬಿಲ್ ಪಾಸ್ ಆಗಬೇಕು. ಜುಲೈ 29ರಂದು ಸೋಮವಾರ ವಿಧಾನ ಮಂಡಲದ ಕಲಾಪ ನಡೆಸುತ್ತೇವೆ. ರೈತರ ಸಾಲಮನ್ನಾ ಬಗ್ಗೆ ಮಾಹಿತಿ ಪಡೆದು ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದು ಸ್ಪಷ್ಟಪಡಿಸಿದರು.

      ವಿಧಾನಸಭೆ ಲೆಕ್ಕಾಚಾರ : ಮೂವರು ಶಾಸಕರ ಅನರ್ಹತೆ ಬಳಿಕ ವಿಧಾನಸಭೆ ಬಲ 221. ಬಹುಮತ ಸಾಬೀತಿಗೆ ಬೇಕಾದ ಸಂಖ್ಯೆ 111.

      * ಬಿಜೆಪಿ ಬಲ : 105 (1 ಪಕ್ಷೇತರ ಅಭ್ಯರ್ಥಿ ನಾಗೇಶ್ ಬೆಂಬಲ ನೀಡಿದರೆ 106).
      * ಕಾಂಗ್ರೆಸ್ : 76
      * ಜೆಡಿಎಸ್ : 37
      * ಬಿಎಸ್‌ಪಿ : 1
      * ಪಕ್ಷೇತರ : 1

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+