ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಬಾಕಿ ಉಳಿಸಿಕೊಂಡ ಆ 35 ಕ್ಷೇತ್ರಗಳು ಯಾವುವು?

ಬೆಂಗಳೂರು,ಏಪ್ರಿಲ್12:‌ 2023 ರ ವಿಧಾನಸಭಾ ಚುನಾವಣೆಯ ನಂತರ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ರಾಜ್ಯ ಬಿಜೆಪಿ ಮಿಷನ್‌ 150 ಟಾರ್ಗೆಟ್‌ ಹಾಕಿಕೊಂಡಿದೆ. ಈ ನಡುವೆ ಅಳೆದುತೂಗಿ ಬಿಜೆಪಿ ಹೈಕಮಾಂಡ್‌ 224 ಕ್ಷೇತ್ರಗಳ ಫೈಕಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ.

ಈ ಬಾರಿ ಚುನಾವಣೆಗೆ ಭರ್ಜರಿ ಸಿದ್ದತೆ ಮಾಡಿಕೊಂಡ ಕಮಲಕಲಿಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರವೇ ದೊಡ್ಡ ತಲೆನೋವಾಗಿದ್ದು, ಹಲವು ಲೆಕ್ಕಾಚಾರವನ್ನ ಹಾಕಿಕೊಂಡು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ.

karnataka Assembly Elections 2023: Who Did Not Get Ticket In BJP First List

ಇನ್ನೂ 189 ಕ್ಷೇತ್ರಗಳಲ್ಲಿ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಹಿರಿಯ ನಾಯಕರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದಿದೆ. 224 ಕ್ಷೇತ್ರಗಳ ಪೈಕಿ 189 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ್ದು ಇನ್ನು 35 ಕ್ಷೇತ್ರಗಳನ್ನು ಉಳಿಸಿಕೊಂಡಿದೆ.

ಟಿಕೆಟ್‌ ಬಾಕಿ ಇರುವ ಆ 35 ಕ್ಷೇತ್ರಗಳು ಯಾವುವು?

ಶಿವಮೊಗ್ಗ ನಗರ

ಚನ್ನಗಿರಿ

ಬೈಂದೂರು

ಮೂಡಿಗೆರೆ

ಗೋವಿಂದ ರಾಜನಗರ

ದೇವರಹಿಪ್ಪರಗಿ

ಬಸವನಬಾಗೇವಾಡಿ

ನಾಗಠಾಣ

ಗುರುಮಿಟ್ಕಲ್

ಸೇಡಂ

ಬೀದರ್ ನಗರ

ಭಾಲ್ಕಿ

ಮಾನ್ವಿ

ಕೊಪ್ಪಳ

ರೋಣ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್

ಕಲಘಟಗಿ

ಹಾನಗಲ್

ಹಾವೇರಿ

ಹರಪನಹಳ್ಳಿ

ಹಗರಿಬೊಮ್ಮನಹಳ್ಳಿ

ದಾವಣಗೆರೆ ಉತ್ತರ

ದಾವಣಗೆರೆ ದಕ್ಷಿಣ

ಮಾಯಕೊಂಡ

ಗುಬ್ಬಿ

ಶಿಡ್ಲಘಟ್ಟ

ಕೆಜಿಎಫ್

ಹೆಬ್ಬಾಳ

ಕೃಷ್ಣ ರಾಜ

ಅರಸೀಕೆರೆ

ಹೆಚ್ ಡಿ ಕೋಟೆ

ಮಹಾದೇವಪುರ

ಶ್ರವಣಬೆಳಗೊಳ

ಗಂಗಾವತಿ

ಇಂಡಿ

ಬಿಜೆಪಿ ಹೈಕಮಾಂಡ್‌ ಹೊಸ ಲೆಕ್ಕಾಚಾರ; 75 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ

ಇನ್ನು ಈ ಬಾರಿ ಚುನಾವಣೆಯಲ್ಲಿ ಗುಜರಾಜ ಮಾದರಿ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಅಲ್ಲದೇ ಆಡಳಿತರೂಢ ಬಿಜೆಪಿಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪಗಳ ಕಳಂಕವನ್ನ ಹೊತ್ತಿಕೊಂಡಿತ್ತು. ಇನ್ನೂ ಈ ಬಾರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್‌ ಹೊಸ ಪ್ರಯೋಗವನ್ನ ಮಾಡಿತ್ತು.

karnataka Assembly Elections 2023: Who Did Not Get Ticket In BJP First List

ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯಲ್ಲೂ ಸ್ಥಳೀಯ ನಾಯಕರ ಉತ್ತರವನ್ನ ಪರಿಗಣಿಸಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದು, 224 ಕ್ಷೇತ್ರಗಳ ಫೈಕಿ 189 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, 75 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಲಾಗಿದೆ.

ಚಿಕ್ಕೋಡಿ, ಹುಕ್ಕೇರಿ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಜಮಖಂಡಿ, ಬಾದಾಮಿ, ಜೇವರ್ಗಿ, ಶಹಾಪುರ, ಚಿತ್ತಾಪುರ, ಹುಮ್ನಾಬಾದ್, ಸಿಂಧನೂರು, ಶಿರಹಟ್ಟಿ, ಕುಂದಗೋಳ, ಹುಬ್ಬಳ್ಳಿ-ಧಾರವಾಡ ಪೂರ್ವ, ಹಡಗಲಿ, ವಿಜಯನಗರ, ಬಳ್ಳಾರಿ ಗ್ರಾಮೀಣ, ಸಂಡೂರು, ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ, ಭದ್ರಾವತಿ, ಶಿಕಾರಿಪುರ, ಕುಂದಾಪುರ, ಉಡುಪಿ, ಕಾಪು, ಕೊರಟಗೆರೆ, ಪಾವಗಡ, ಮಧುಗಿರಿಯಲ್ಲಿ ಅಭ್ಯರ್ಥಿ ಬದಲಾವಣೆ ಆಗಿದೆ.

ಇನ್ನು ಕೋಲಾರ, ಮಾಲೂರು, ಬ್ಯಾಟರಾಯನಪುರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಜಯನಗರ, ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಹೊಳೆನರಸೀಪುರ, ಸಕಲೇಶಪುರ, ಮಂಗಳೂರು, ಪುತ್ತೂರು, ಸುಳ್ಯ, ಪಿರಿಯಾಪಟ್ಟಣ, ಕೆ.ಆರ್. ನಗರ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ, ವರುಣ, ಟಿ. ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ, ಗೌರಿ ಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆಯಲ್ಲಿ ಅಭ್ಯರ್ಥಿ ಬದಲಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+