Young icon Kiccha Sudeep: ಧಾರವಾಡದಲ್ಲಿ ಘರ್ಜಿಸಲಿರುವ 'ಹೆಬ್ಬುಲಿ'- ಪೇಡಾ ನಗರಿಯಲ್ಲಿಂದು ಕಿಚ್ಚ ರೋಡ್ ಶೋ
ಯಂಗ್ ಐಕಾನ್ ಕಿಚ್ಚ ಸುದೀಪ್ ಇಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಇದಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ಸಿದ್ದವಾಗಿವೆ. ಈಗಾಗಲೇ ಬಿಜೆಪಿ ಅಭ್ಯರ್ಥೀಗಳ ಪರ ಪ್ರಚಾರದಲ್ಲಿ ಭಾಗಿಯಾಗುತ್ತಿರುವ ಸುದೀಪ್ ಹೋದ ಕಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಂದೂ ಕೂಡ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ.
ಬೆಳಿಗ್ಗೆ 9-30ಕ್ಕೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಪ್ರಚಾರ ಧೂಳೆಬ್ಬಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಕಲಘಟಗಿಯಲ್ಲಿ ರೋಡ್ ಶೋ ನಡೆಸಲಿರುವ 'ಪೂಲ್ವಾನ್' ಮಧ್ಯಾಹ್ನ 12.30ಕ್ಕೆ ಧಾರವಾಡ ನಗರದಲ್ಲಿ ಮತಬೇಟೆ ನಡೆಸಲಿದ್ದಾರೆ. ಜೊತೆಗೆ ಮಧ್ಯಾಹ್ನ 3ಕ್ಕೆ ಗದಗದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ಗುರುವಾರ ಹಿರೇಕೆರೂರು ಬಿಜೆಪಿ ಅಭ್ಯರ್ಥಿಯಾದ ಬಿಸಿ ಪಾಟೀಲ್ ಮತ್ತು ರಾಣಿಬೆನ್ನೂರು ಬಿಜೆಪಿ ಅಭ್ಯರ್ಥಿಯಾದ ಅರುಣ್ ಕುಮಾರ್ ಪೂಜಾರ್ ಅವರ ಪರ ನಟ ಕಿಚ್ಚ ಸುದೀಪ್ ಪ್ರಚಾರ ನಡೆಸಿದರು. ಈ ವೇಳೆ ಕಿಚ್ಚ ಸುದೀಪ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೇ ರೀತಿ ಇಂದೂ ಕೂಡ ಧಾರವಾಡದಲ್ಲಿ ಕಿಚ್ಚ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇದೆ.
ಪಕ್ಷ ತೊರೆದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆನ್ನಿಗೆ ಚೂರು ಹಾಕಿ ಹೋಗಿದ್ದಾರೆ, ಮೋಸ ಮಾಡಿದ್ದಾರೆ, ನಂಬಿಕೆ ದ್ರೋಹ ಮಾಡಿದ್ದಾರೆ ಹೀಗೆ ಒಂದಲ್ಲ ಎರಡಲ್ಲ ಹಲವಾರು ಆರೋಪಗಳನ್ನು ಬಿಜೆಪಿ ಮಾಡಿದೆ. ಇವರ ವಿರುದ್ಧ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಲು ತೊಡೆ ತಟ್ಟಿ ನಿಂತಿದೆ.

ಇತ್ತ ಶೆಟ್ಟರ್ ಬಿಜೆಪಿ ವಿರುದ್ಧ 'ಲಿಂಗಾಯತ ವಿರೋಧಿ' ಆರೋಪ ಮಾಡಿದ್ದಾರೆ. ಬಿಜೆಪಿ ನಡೆಸಿಕೊಂಡ ರೀತಿಗೆ ಬೇಸತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದರು. ಬಿಜೆಪಿ ಪಕ್ಷ ತಮ್ಮನ್ನು ಕೆಟ್ಟದಾಗಿ ನಡೆಸಲಿಕೊಂಡಿದೆ ಎಂದು ಶೆಟ್ಟರ್ ದೂರಿದ್ದಾರೆ. ಇದೇ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್ ಬಿಜೆಪಿ ಲಿಂಗಾಯತ ಸಮುದಾಯದ ವಿರೋಧಿ ಎಂಬ ಆರೋಪಗಳನ್ನು ಮಾಡಿದೆ. ಈ ಒಂದೇ ಒಂದು ಆರೋಪದಿಂದ ಲಿಂಗಾಯತ ಸಮುದಾಯದ ನಿರ್ಣಾಯಕ ಮತಗಳನ್ನು ಹೊಂದಿದ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಗೆಲ್ಲುವುದು ಸವಾಲಾಗಿದೆ.
ಹೀಗಾಗಿ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳಲು ಕೇಂದ್ರ ನಾಯಕರನ್ನು ಬಿಜೆಪಿ ಹಲವಾರು ಕರೆಸಿದೆ. ಜೊತೆಗೆ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ಈಗಾಗಲೇ ಪ್ರಚಾರದಲ್ಲಿ ಭಾಗಿಯಾಗಿರುವುದು ಮಾತ್ರವಲ್ಲದೆ ಹುಬ್ಬಳ್ಳಿ ಧಾರವಾಡದತ್ತ ಒಂದು ಕಣ್ಣು ಇಟ್ಟಿದೆ.

ಪಕ್ಷ ತೊರೆದ ಶೆಟ್ಟರ್ ವಿರುದ್ಧ ಬಿಎಸ್ ಯಡಿಯೂರಪ್ಪ ಗೆಲ್ಲಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬೃಹತ್ ಮೆರವಣಿಗೆ ಆಯೋಜಿಸಬೇಕು. ಹತ್ತು, ಹನ್ನೆರಡು ಸಾವಿರ ಜನರನ್ನು ಸೇರಿಸಿ ಮನೆಯಲ್ಲಿ ಕುಳಿತ ಶೆಟ್ಟರ್ ಗೆ ನಡುಕ ಉಂಟಾಗಬೇಕು. ಪ್ರಧಾನಿ ಮತ್ತೊಮ್ಮೆ ಬರೋ ಸಂಭವ ಇದೆ. ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳಲ್ಲ, ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ ಎನ್ನುತ್ತೇನೆ. ಪಕ್ಷಾಂತರಿಗಳಿಗೆ ಕ್ಷಮಿಸೋದಿಲ್ಲ ಅನ್ನೋ ಸುದ್ದಿ ಎಲ್ಲೆಡೆ ಹೋಗಬೇಕು ಅಂತ ಕರೆ ಕೊಟ್ಟರು.
ಜಗದೀಶ್ ಶೆಟ್ಟರ್ ವಿರುದ್ಧ ಗೆಲುವು ಸಾಧಿಸಲು ಪ್ರಯತ್ನದಲ್ಲೇ ಕಿಚ್ಚ ಸುದೀಪ್ ಅವರನ್ನು ಇಂದು ಹುಬ್ಬಳ್ಳಿ ಧಾರವಾಡ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಹ್ವಾನಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಪರ ಕಿಚ್ಚ ಸುದೀಪ ಪ್ರಚಾರ ಮಾಡಲಿದ್ದಾರೆ. ಇದು ಅದೆಷ್ಟು ಲಾಭವನ್ನು ತಂದು ಕೊಡುತ್ತೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.












Click it and Unblock the Notifications