Dalit CM: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೆಸರು ಬಿಟ್ಟು ಸಿಎಂ ರೇಸ್‌ನಲ್ಲಿ 3ನೇ ಹೆಸರು?
ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಕೇವಲ ಒಂದೇ ದಿನ ಬಾಕಿ ಇದೆ. ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ ಎಂದು ಕಾಂಗ್ರೆಸ್ ನಾಯಕರು ಆತ್ಮ ವಿಶ್ವಾಸದಲ್ಲಿದ್ದಾರೆ. ಆದರೆ ಫಲಿತಾಂಶದ ಕೊನೆಯ ದಿನ ಏನು ಬೇಕಾದರೂ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕಾಂಗ್ರೆಸ್ ನಾಯಕರು ಕೂಡ ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಮೂರನೇಯ ಸಿಎಂ ಹೆಸರು ಈಗ ಧಿಡೀರ್ ಸದ್ದು ಮಾಡುತ್ತಿದೆ. ಹಾಗಾದ್ರೆ ಆ ಹೆಸರು ಯಾವುದು? ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅನ್ನೋ ಮಾತುಗಳ ನಡುವೆ ಮತ್ತೊಬ್ಬ ಸಿಎಂ ಹೆಸರು ಕೇಳಿ ಬಂದಿದ್ದು ಯಾರದ್ದು?
ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಅಭಿಮಾನಿಗಳು ಥಟ್ ಅಂತ ಸಿದ್ದರಾಮಯ್ಯ ಅವರ ಹೆಸರನ್ನು ಹೇಳಿ ಬಿಡುತ್ತಾರೆ. ಆದರೆ ಡಿಕೆ ಶಿವಕುಮಾರ್ ಅಭಿಮಾನಿಗಳು ಡಿಕೆ ಶಿವಕುಮಾರ್ ಹೆಸರನ್ನು ಹೇಳ್ತಾರೆ. ಆದರೆ ಹೈಕಮಾಂಡ್ ಇವರಿಬ್ಬರ ಹೆಸರು ಬಿಟ್ಟು ಬೇರೆ ಹೆಸರನ್ನು ರೆಡಿ ಮಾಡಿದಿಯಂತೆ. ಹಾಗಾದರೆ ಆ ಮೂರನೆ ಸಿಎಂ ಯಾರು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ. ಇದಕ್ಕೂ ಮುನ್ನ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಪಕ್ಕಾನಾ? ಈ ಬಗ್ಗೆ ತಿಳಿಯೋಣ.

ಈ ಬಾರಿ ಫಲಿತಾಂಶದ ದಿನ ಕಾಂಗ್ರೆಸ್ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದರೂ, ಮ್ಯಾಜಿಕ್ ನಂಬರ್ ಬಳಿ ಹೋಗಿ ಎರಡು ಮೂರು ಸ್ಥಾನಗಳ ಕೊರತೆ ಎದುರಾದರೆ ಏನ್ ಮಾಡ್ಬೇಕು ಎನ್ನುವ ಚರ್ಚೆ ನಡೆದಿದೆ. ಈಗಾಗಲೇ ಅತಂತ್ರ ಬಂದರೆ ಅದನ್ನು ಬಾಚಿ ತಪ್ಪಿಕೊಳ್ಳಬೇಕು ಅನ್ನೋ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾತುರದಿಂದ ಕಾಯುತ್ತಿದ್ದಾರೆ.
ಮತ್ತೊಂದೆಡೆ ತೆರೆಮರೆ ಆಪರೇಷನ್ ಕೈಗೆ ಕಾಂಗ್ರೆಸ್ ರೆಡಿಯಾಗಿ ನಿಂತಿದೆ. ಹೀಗಾಗಿ ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರ ರಚನೆ ಮಾಡೋ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಜೆಡಿಎಸ್ ಅನ್ನು ಪಕ್ಕಕ್ಕೆ ಇಟ್ಟು ಸರ್ಕಾರ ರಚನೆ ಮಾಡಲು ಇರುವ ಕ್ರಮಗಳೇನು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.

ಹೀಗಾಗಿ ಜನಾರ್ಧನ ರೆಡ್ಡಿ ಅವರ ಪಕ್ಷ ಎಷ್ಟು ಸ್ಥಾನ ಗೆಲ್ಲುತ್ತೆ, ಅದೇ ರೀತಿ ಪಕ್ಷೇತರರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎನ್ನುವ ಬಗ್ಗೆ ನೋಡಿಕೊಂಡು ಅವರಿಗೆ ಗಾಳ ಹಾಕೋಕೆ ಕೈ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದ್ಯಾವುದು ಸಾಧ್ಯವಾಗದೇ ಇದ್ದರೆ ಜೆಡಿಎಸ್ ಕಡೆ ಗಮನ ಹರಿಸುವ ಚಿಂತನೆಯನ್ನು ಕಾಂಗ್ರೆಸ್ ಮಾಡುತ್ತಿದೆಯಂತೆ. ಹೀಗಾಗಿ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ಅನ್ನು ಸೆಕೆಂಡ್ ಆಪ್ಷನ್ ಆಗಿ ಇಟ್ಟುಕೊಳ್ಳುವ ಸಾಧ್ಯತೆ ಇದೆ.
ಆದರೆ ಜೆಡಿಎಸ್ ನಾಯಕರು ಮೈತ್ರಿಗೆ ಒಪ್ಪಿಕೊಳ್ಳದೇ ಹೋದರೆ ಜೆಡಿಎಸ್ ನಾಯಕರನ್ನು ಸೆಳೆಯುವುದು ಕಾಂಗ್ರೆಸ್ ಅಂತಿಮ ಗುರಿ ಎನ್ನಲಾಗುತ್ತಿದೆ. ಅಂದರೆ ಹೆಚ್.ಡಿ ಕುಮಾರಸ್ವಾಮಿಯನ್ನು ದೂರ ಇಟ್ಟು ಜೆಡಿಎಸ್ ಉಳಿದ ನಾಯಕರನ್ನು ಸೆಳೆಯುವುದು ಕಾಂಗ್ರೆಸ್ ನ ಮೆಗಾ ಪ್ಲ್ಯಾನ್ ಎನ್ನಲಾಗುತ್ತಿದೆ. ಹಾಗೇನಾದ್ರು ಆದರೆ ಮಹರಾಷ್ಟ್ರದಲ್ಲಿ ಶಿವಸೇನೆಗೆ ಆದ ಗತಿಯೇ ಜೆಡಿಎಸ್‌ಗೂ ಆಗಲಿದೆ. ಹೀಗೆ ಒಂದೆಡೆ ಕಾಂಗ್ರೆಸ್ ನಾಯಕರು ಈ ಬಾರಿ ಶತಾಯಗತಾಯ ಸರ್ಕಾರ ರಚನೆ ಮಾಡೋ ಬರದಲ್ಲಿದ್ದರೆ, ಮತ್ತೊಂಡೆದೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಲ್ಲದೇ ಮೂರನೇ ವ್ಯಕ್ತಿಗೆ ಸಿಎಂ ಪಟ್ಟ ಕಟ್ಟೋಕೆ ಯೋಜನೆ ರೂಪಿಸಿದೆ ಅನ್ನೋ ಮಾತುಗಳು ಮುನ್ನಲೆಗೆ ಬಂದಿವೆ.
ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ. ಆದರೆ ದಲಿತ ನಾಯಕರನ್ನು ಸಿಎಂ ಮಾಡೋ ಕಾಲವಿನ್ನೂ ಕೂಡ ಬಂದಿಲ್ಲ. ಕಾಂಗ್ರೆಸ್‌ನಲ್ಲಿ ಪರಮೇಶ್ವರ್. ಹೆಚ್.ಮುನಿಯಪ್ಪ ಅವರಂತ ಘಟಾನುಘಟಿ ನಾಯಕರು ಇದ್ದಾರೆ. ಇಂತಹ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರಪ್ರಿಯಾಂಕ ಖರ್ಗೆ ಅವರನ್ನು ಸಿಎಂ ಮಾಡಬೇಕು ಎನ್ನುವ ಅಭಿಯಾನಗಳು ನಡೆಯುತ್ತಿವೆ. ಫಲಿತಾಂಶಕ್ಕೂ ಮುನ್ನ ದಲಿತ ಸಿಎಂ ಆಗಬೇಕು ಎನ್ನುವ ಮಾತು ಕೇಳಿ ಬರುತ್ತಿವೆ. ಚುನಾವಣೋತ್ತರ ಫಲಿತಾಂಶ ಬಂದ ಬಳಿಕ ಪ್ರಿಯಾಂಕ ಖರ್ಗೆ ಸಿಎಂ ಆಗಬೇಕು ಅನ್ನೋ ಕನಸು ಮಲ್ಲಿಕಾರ್ಜುನ ಖರ್ಗೆ ಮುಂದಿಟ್ಟಿಲ್ಲ. ಆದರೆ ಜನಸಾಮಾನ್ಯರ ಆಶಯ ಎಂದು ಕಲಬುರ್ಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡ ಪೋಸ್ಟರ್ ಸದ್ಯ ವೈರಲ್ ಆಗುತ್ತಿದೆ.
ಆದರೆ ಹೈಕಮಾಂಡ್ ನಾಯಕರು ಹೀಗೆ ಮಾಡಿದರೆ ಸಿದ್ದರಾಮಯ್ಯ ಫ್ಯಾನ್ಸ್ ರೊಚ್ಚಿಗೇಳೋದು ಗ್ಯಾರೆಂಟಿ. ಜೊತೆಗೆ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹಗಳು ಮುಗಿಲು ಮುಟ್ಟೋದು ಪಕ್ಕ ಎನ್ನುವ ರಾಜಕೀಯ ವಿಶ್ಲೇಷಣೆಗಳಿವೆ. ಜೊತೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ಸಿದ್ದರಾಮಯ್ಯ ಸಿಎಂ ಆದರೆ ಮಾತ್ರ ಬಿಜೆಪಿಗೆ ಬಿಸಿ ಮುಟ್ಟಿಸೋಕೆ ಸಾಧ್ಯ ಎನ್ನುವ ಸತ್ಯ ಹೈಕಮಾಂಡ್‌ಗೂ ತಿಳಿದಿದೆ. ಹೀಗಾಗಿ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲ ಮುಂಬರುವ ಫಲಿತಾಂಶವೇ ಮುನ್ನುಡಿ ಬರೆಯಲಿದೆ.












Click it and Unblock the Notifications