Karnataka BJP Candidates 1st List: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಯಾವ ಜಾತಿಗೆ ಎಷ್ಟು ಸ್ಥಾನ? ತಿಳಿಯಿರಿ
ಬೆಂಗಳೂರು, ಏಪ್ರಿಲ್. 12: ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷವು ಮೊದಲ ಪಟ್ಟಿಯನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸುದ್ದಿಗೋಷ್ಠಿ ನಡೆಸಿ, ಒಟ್ಟು 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
ವಿಧಾನಸಭೆಯ 224 ಕ್ಷೇತ್ರಗಳ ಪೈಕಿ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡು 52 ಹೊಸ ಮುಖಗಳಿಗೆ ಮಣೆ ಹಾಕಿದೆ. ಪಟ್ಟಿಯಲ್ಲಿ ಒಂಬತ್ತು ವೈದ್ಯರು, ತಲಾ ಒಬ್ಬೊಬ್ಬ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, 31 ಸ್ನಾತಕೋತ್ತರ ಪದವೀಧರರಿದ್ದಾರೆ. 189 ಮಂದಿ ಅಭ್ಯರ್ಥಿಗಳ ಪೈಕಿ 8 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಐವರು ವಕೀಲರು ಮತ್ತು 3 ನಿವೃತ್ತ ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರೆ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದ್ದವು. ಆದರೆ ಬಿಜೆಪಿ ಮಾತ್ರ ಮೇಲಿಂದ ಮೇಲೆ ಸಭೆ ನಡೆಸಿತ್ತಾದರೂ ಪಟ್ಟಿ ಪ್ರಕಟಿಸಿರಲಿಲ್ಲ. ಇದೀಗ, ಒಟ್ಟು 189 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಗೊಳಿಸಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ 35 ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ತೊಂದರೆ ಇಲ್ಲ ಎಂದು ಹೇಳಿಕೊಂಡಿದೆ.
* ಬಿಜೆಪಿ ಪಟ್ಟಿಯಲ್ಲಿ ಸ್ಥಾನ ಪಡೆದ ಜಾತಿವಾರು ಮಾಹಿತಿ*
ಇತರೆ ಹಿಂದುಳಿದ ವರ್ಗ (OBC)- 32
ಪರಿಶಿಷ್ಟ ಜಾತಿ- 30
ಪರಿಶಿಷ್ಟ ಪಂಗಡ- 16
*ಮಹಿಳೆಯರು ಮತ್ತು ಪದವೀಧರರು*
ಮಹಿಳೆಯರು- 8
ಹೊಸ ಅಭ್ಯರ್ಥಿಗಳು- 52
ಸ್ನಾತಕೋತ್ತರ ಪದವೀಧರರು- 31
*ವೃತ್ತಿಪರರು*
ವಕೀಲರು- 5
ವೈದ್ಯರು- 9
ಶಿಕ್ಷಣ ತಜ್ಞರು- 3
ನಿವೃತ್ತ ಐಎಎಸ್ ಅಧಿಕಾರಿ - 1
ನಿವೃತ್ತ ಐಪಿಎಸ್ ಅಧಿಕಾರಿ- 1
ನಿವೃತ್ತ ಸರ್ಕಾರಿ ನೌಕರರು- 3
ಸಾಮಾಜಿಕ ಕಾರ್ಯಕರ್ತರು- 8
ಪಟ್ಟಿ ಬಿಡುಗಡೆ ಬಗ್ಗೆ ಕರ್ನಾಟಕ ಬಿಜೆಪಿ ಮಾಹಿತಿ ಹಂಚಿಕೊಂಡಿದೆ. "ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ದೆಹಲಿಯ ಕೇಂದ್ರ ಕಚೇರಿಯಲ್ಲಿ ಇಂದು ಬಿಡುಗಡೆಗೊಳಿಸಲಾಯಿತು. ಹಳೆ ಬೇರು ಹೊಸ ಚಿಗುರಿನ ಈ ಶಕ್ತಿ ಭವಿಷ್ಯದ ದಿಕ್ಸೂಚಿ" ಎಂದು ಕರೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನವ ಕರ್ನಾಟಕದದಿಂದ ನವ ಭಾರತವನ್ನು ನಿರ್ಮಿಸಲು ಮತ್ತು ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ಬಿಜೆಪಿಯ 189 ಸಮರ್ಥ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯದೆಲ್ಲೆಡೆ ಡಬಲ್ ಇಂಜಿನ್ ಸರ್ಕಾರದ ಆಡಳಿತದ ಪರವಾದ ವಾತಾವರಣವಿದ್ದು, ಈ ಬಾರಿ ಸಂಪೂರ್ಣ ಬಹುಮತದ ಸರ್ಕಾರವನ್ನು ನಾವು ರಚಿಸಲಿದ್ದೇವೆ. ಎಲ್ಲಾ ಅಭ್ಯರ್ಥಿಗಳು ಭರ್ಜರಿ ಬಹುಮತದಿಂದ ಗೆದ್ದು ಬನ್ನಿ ಎಂದು ಶುಭ ಹಾರೈಸುತ್ತೇನೆ" ಎಂದು ಶುಭಾಶಯ ಕೋರಿದ್ದಾರೆ.
ಇನ್ನು, ಸಾಕಷ್ಟು ಸದ್ದು ಮಾಡಿದ್ದ ವರುಣ ಕ್ಷೇತ್ರಕ್ಕೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಹಾಲಿ ಶಾಸಕ ವಿ. ಸೋಮಣ್ಣ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಸಚಿವ ಆರ್. ಅಶೋಕ ಮತ್ತು ವಿ. ಸೋಮಣ್ಣಗೆ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಪಕ್ಷ ಅವಕಾಶ ನೀಡಿದೆ.












Click it and Unblock the Notifications