ಕರ್ನಾಟಕ ಚುನಾವಣೆ: ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ
Recommended Video

ಕರ್ನಾಟಕ ಚುನಾವಣೆ ಹಿನ್ನೆಲೆ ನಮ್ಮ ಬೆಂಗಳೂರಿಗೆ ಬರಲಿದ್ದಾರೆ ರಾಹುಲ್ ಗಾಂಧಿ | Oneindia kannada
ಬೆಂಗಳೂರು, ಏಪ್ರಿಲ್ 07: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಕರ್ನಾಟಕ ಜನಾಶೀರ್ವಾದ ಯಾತ್ರೆಯ ಆರನೇ ಭಾಗವಾಗಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಎರಡು ದಿನಗಳ ಕಾಲ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ರಾಹುಲ್ ಗಾಂಧಿ, ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮುಳಬಾಗಿಲಿನ ಕುದುಮಲೈ ಗಣೇಶ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಅವರು ತಮ್ಮ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ.

ಈಗಾಗಲೇ ಉತ್ತರ ಕರ್ನಾಟಕ, ಮೈಸೂರು, ಮಲೆನಾಡು, ಮಧ್ಯಕರ್ನಾಟಕ ಭಾಗಗಳಲ್ಲಿ ಪ್ರಚಾರ ನಡೆಸಿರುವ ರಾಹುಲ್ ಗಾಂಧಿ, ರಾಜ್ಯದ ರಾಜಧಾನಿ ಬಾಗದಲ್ಲಿ ಎರಡು ದಿನಗಳ ಕಾಲ ಪ್ರಚಾರ ಕಾರ್ಯ ನಡೆಸಲಿದ್ದಾರೆ.












Click it and Unblock the Notifications