Karnataka Election 2023 LIVE News Updates: ನಾಮಪತ್ರ ಹಿಂಪಡೆಯಲು ಇದ್ದ ಗಡುವು ಅಂತ್ಯ, ಸಿಎಂ ಸ್ಥಾನಕ್ಕಾಗಿ ಡಿಕೆಶಿ ಪೂಜೆ

ಕರ್ನಾಟಕ ವಿಧಾನಸಭಾ ಚುನಾವಣೆ 2023 ಲೈವ್ ಸುದ್ದಿ: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬಂಡಾಯವೆದ್ದ ಬೆಂಗಳೂರಿನ ಪುಲಿಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಎಸ್‌ಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಿಂದ ಗೆದ್ದಿದ್ದರೂ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಇದರಿಂದ ಬೇಸರಗೊಂಡ ಅವರು ಕಾಂಗ್ರೆಸ್ ತೊರೆದು ಬಹುಜನ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ 3ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಹೆಸರು ಇರಲಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಶ್ರೀನಿವಾಸಮೂರ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Karnataka Election 2023

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಕೂಡ ಮಾಡಲಾಗಿದೆ. ಇಂದು ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

'ಒನ್ ಇಂಡಿಯಾ ಕನ್ನಡ' ಜಾಲತಾಣವು ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿ ನೀಡಲು ನಿತ್ಯವು ಹೊಸ ಲೈವ್ ಬ್ಲಾಗ್ ಆರಂಭಿಸಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು.

Apr 24, 2023, 9:50 pm IST

ಹಾವೇರಿ: ಪ್ರಚಾರದ ವೇಳೆ ಪೊಲೀಸರ ವಿರುದ್ಧ ಸಿಎಂ ಗರಂ

ಹಾವೇರಿ: ಪ್ರಚಾರದ ವೇಳೆ ಪೊಲೀಸರ ವಿರುದ್ಧ ಸಿಎಂ ಗರಂ
ಹಾವೇರಿಯಲ್ಲಿ ರೋಡ್‌ ಶೋ ನಲ್ಲಿ ತೊಡಗಿ ಭಾಷಣ ಮಾಡುತ್ತಿದ್ದ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸರ ವಿರುದ್ಧ ಗರಂ ಆದ ಘಟನೆ ಸೋಮವಾರ ನಡೆಸಿದೆ. ಮುಖ್ಯಮಂತ್ರಿಗಳ ಭಾಷಣದ ವಿಡಿಯೋವನ್ನು ಮೊಬೈಲ್‌ನಲ್ಲಿ ಪೇದೆ ವಿಡಿಯೋ ಮಾಡುತ್ತಿದ್ದರು ಎನ್ನಲಾಗಿದೆ. ನನ್ನ ಭಾಷಣ ಬೇರೆಯವರಿಗೆ ಕೇಳಿಸಲು ಪೊಲೀಸರು ಹೀಗೆ ಮಾಡುವುದು ಸರಿಯಲ್ಲ. ಮೊದಲು ಮೊಬೈಲ್ ಒಳಗಿಡು. ಇದು ವಾರ್ನಿಂಗ್ ಎಂದು ಸಿಎಂ ಬೊಮ್ಮಾಯಿ ಪೇದೆಗೆ ಎಚ್ಚರಿಕೆ ನೀಡಿದರು.
Apr 24, 2023, 9:42 pm IST

ಜೆಡಿಎಸ್‌ಗೆ ಮತಹಾಕಿದರೆ ಕಾಂಗ್ರೆಸ್‌ ಜತೆ ಅಧಿಕಾರಕ್ಕೆ: ಶಾ

https://kannada.oneindia.com/news/karnataka/karnataka-assembly-election-2023-live-news-updates-april-24-last-date-for-nomination-withdrawal-291156.html
Apr 24, 2023, 8:39 pm IST

ಏಕಕಾಲಕ್ಕೆ ಬಿಜೆಪಿ 'ಮತಪ್ರಚಾರ ಅಭಿಯಾನ'

ಏಪ್ರಿಲ್ 25 ಮತ್ತು 26ರಂದು ಬಿಜೆಪಿಯಿಂದ ಮತಪ್ರಚಾರ ಆರಂಭವಾಗಲಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿಳಿಸಿದೆ. ರಾಜ್ಯದ ಹೂಬಳಿ ತಾಲೂಕು ಕೇಂದ್ರ ಸೇರಿ 224 ಕ್ಷೇತ್ರಗಳಲ್ಲೂ ಸುದ್ದಿಗೋಷ್ಠಿ ನಡೆಯಲಿದೆ. 98ರಾಷ್ಟ್ರೀಯ ನಾಯಕರು ಮತ್ತು 150 ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಅಧಿಕಾರವು ತಾಯಿಯಿಂದ ಮಗನಿಗೆ, ತಂದೆಯಿಂದ ಮಕ್ಕಳಿಗೆ ಅಥವಾ ಗಂಡನಿಂದ ಹೆಂಡತಿಗೆ ವರ್ಗಾವಣೆ ಆಗುವುದಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದೆ. ಏಕಕಾಲಕ್ಕೆ ಕಾರ್ಯಕರ್ತರು ಮತ್ತು ಜನರೊಂದಿಗೆ ಬಲವಾದ ಸಂಪರ್ಕವನ್ನು ಕಾಪಾಡಿಕೊಳ್ಳಲು ಪಕ್ಷ ಸಿದ್ಧವಾಗಿದೆ ಎಂದು ತಿಳಿಸಿದೆ.
Apr 24, 2023, 8:30 pm IST

ಪರಿವಾರ ರಾಜಕಾರಣಕ್ಕೆ ವಿರೋಧ: ಶಾ

ಪರಿವಾರ ರಾಜಕಾರಣಕ್ಕೆ ವಿರೋಧ: ಶಾ
ಬಿಜೆಪಿ ಪಕ್ಷವು ಯಾವಾಗಲೂ ಸಹ ಪರಿವಾರ ರಾಜಕಾರಣವನ್ನು ವಿರೋಧಿಸುತ್ತದೆ. ಬಿಜೆಪಿಯಲ್ಲಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಪದಾಧಿಕಾರಿಗಳು ಬದಲಾಗುತ್ತಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಹೇಳಿಕೆ.
Apr 24, 2023, 7:40 pm IST

ನನಗೂ ಸಿಎಂ ಆಗುವ ಆಸೆ ಇದೆ: ಸಿ.ಟಿ ರವಿ

ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂದು ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಖ್ಯಮಂತ್ರಿ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ಸಿಎಂ ಮುಖ್ಯಮಂತ್ರಿ ಸಿ.ಟಿ.ರವಿ ಎನ್ನುವ ಕಾರ್ಯಕರ್ತರ ಹೇಳಿಕೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ಹಾಗಾಗಿ ಸುಮ್ಮನೆ ಇದ್ದೇನೆ. ಯಾವಾಗ ನಾನು ಸಿಎಂ ಆಗಬೇಕೆಂಬ ಕೂಗು ರಾಜ್ಯದೆಲ್ಲೆಡೆ ಕೇಳಿ ಬರುತ್ತದೋ ಅಂದು ನನ್ನನ್ನು ಸಿಎಂ ಮಾಡುವಂತೆ ವರಿಷ್ಠರ ಬಳಿ ಕೇಳುತ್ತೇನೆ ಎಂದು ಹೇಳಿದರು.
Apr 24, 2023, 7:40 pm IST

ಶೆಟ್ಟರ್ ಅವಮಾನದ ಹಿಂದೆ ಇದ್ದ ಪೇಶ್ವೆ ಯಾರು?

ಲಿಂಗಾಯತ ನಾಯಕರಿಗೆ ಅವಮಾನ ವಿಚಾರ ಸದ್ದು ಮಾಡುತ್ತಲೇ ಇದೆ. ಇದೀಗ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರು ಪಕ್ಷದಲ್ಲಿದ್ದಾಗ ಬಿಜೆಪಿ ಮಾಡಿದ ಅವಮಾನಗಳು ಒಂದೆರಡಲ್ಲ ಎಂದು ವಾಗ್ದಾಳಿ ನಡೆಸಿದೆ. ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲೇ ನಡೆದ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಆಹ್ವಾನವಿರಲಿಲ್ಲ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲೂ ಅವರಿಗೆ ಜಾಗ ಕೊಟ್ಟಿರಲಿಲ್ಲ. ಅಮಿತ್ ಶಾ ಕಾರ್ಯಕ್ರಮಕ್ಕೂ ಒಳಗೆ ಬಿಟ್ಟುಕೊಂಡಿರಲಿಲ್ಲ. ಇಷ್ಟೆಲ್ಲ ಅವಮಾನದ ಹಿಂದೆ ಯಾವ ಪೇಶ್ವೆ ಇದ್ದರು? ಎಂದು ಕಾಂಗ್ರೆಸ್ ಪ್ರಶ್ನಿಸಿ ಟ್ವೀಟ್ ಮಾಡಿದೆ.
Apr 24, 2023, 7:21 pm IST

ಹುಬ್ಬಳ್ಳಿ: ಅಮಿತ್ ಶಾ ಸುದ್ದಿಗೋಷ್ಠಿ

ಕಾಂಗ್ರೆಸ್‌-ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿವೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ. ಈ ಬಾರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ನಾವು ಸರ್ಕಾರ ರಚನೆ ಮಾಡುತ್ತೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲ ಕ್ಷೇತ್ರಗಳು ಅಭಿವೃದ್ಧಿ ಕಂಡಿವೆ ಎಂದು ಅಮಿತ್ ಶಾ ಹೇಳಿಕೆ. ಸುದ್ದಿಗೋಷ್ಠಿಯಲ್ಲಿ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.
Apr 24, 2023, 7:07 pm IST

ಸಿದ್ದರಾಮಯ್ಯರಿಂದ ಲಿಂಗಾಯತರಿಗೆ ಅವಮಾನ: ಸಿಸಿ ಪಾಟೀಲ್

ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಸೆಣಸಾಟ ನಡೆದಿದೆ. ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ. ಡಿಕೆ ಶಿವಕುಮಾರ್ ನಂತವರು ನೂರು ಮಂದಿ ಬಂದರು ಲಿಂಗಾಯರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಜಗದೀಶ್ ಶೆಟ್ಟರ್, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಲಿಂಗಾಯತ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಗದಗಿನಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ ಕಿಡಿ ಕಾರಿದರು.
Apr 24, 2023, 6:57 pm IST

ಕಾಫಿನಾಡಲ್ಲಿ ಎಐಸಿಸಿ ಅಧ್ಯಕ್ಷರ ಗುಡುಗು

ಮಲ್ಲಿಕಾರ್ಜುನ್ ಖರ್ಗೆ ಚಿಕ್ಕಮಗಳೂರು ಬ್ರಿಟೀಷರ ಕಾಲದಲ್ಲೇ ಅಂಬೇಡ್ಕರ್ ಅವರು ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿದ್ದರು.ಈಗ ಬಿಜೆಪಿ ಅದನ್ನು 12 ಗಂಟೆಗೆ ಹೆಚ್ಚಿಸಿದೆ. ಇದು ಕಾರ್ಮಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ? ಎಂದು ಬಿಜೆಪಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.
Apr 24, 2023, 6:51 pm IST

ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿದ 'ರಾಗಾ'

ಕರ್ನಾಟಕದಲ್ಲಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಸೋಮವಾರ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಂವಾದ ನಡೆಸಿದರು. ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಸಿದರು. ಕಾಂಗ್ರೆಸ್ ಪಕ್ಷ ಎಂದಿಗೂ ರೈತರ ಬೆನ್ನಿಗೆ ನಿಲ್ಲಲಿದೆ ಎಂಬ ಭರವಸೆ ನೀಡಿ ಮತಯಾಚನೆ ಮಾಡಿದರು. ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
Apr 24, 2023, 6:14 pm IST

ಅಮಿತ್ ಶಾ ರೋಡ್ ಶೋನಲ್ಲಿ ಕಂಡು ಬಂದ ದೃಶ್ಯ

ಮೈಸೂರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಮುಂಡೇಶ್ವರಿ ದರ್ಶನ ಪಡೆದರು. ಬಳಿಕ ಚಾಮರಾಜನಗರ ಮತ್ತು ಸಕಲೇಶಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಕುರಿತು ಪೋಸ್ಟ್ ಮಾಡಿರು ಕರ್ನಾಟಕ ರಾಜ್ಯ ಬಿಜೆಪಿ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ನ ನಿದ್ದೆಗೆಡಿಸಿವೆ. ಬಿಜೆಪಿಗೆ ಕರುನಾಡಿನ ಜನರ ಪ್ರೀತಿ, ಭರವಸೆ, ಒಗ್ಗಟ್ಟೇ ಶಕ್ತಿ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಪೋಸ್ಟ್ ಮಾಡಿದೆ.
Apr 24, 2023, 5:25 pm IST

ಎಎಪಿ ದೆಹಲಿ ನಾಯಕ ಏ.25ಕ್ಕೆ ಆಗಮನ

ಎಎಪಿ ದೆಹಲಿ ನಾಯಕ ಏ.25ಕ್ಕೆ ಆಗಮನ
ಕರ್ನಾಟಕ ಚುನಾವಣೆ ಹಿನ್ನೆಲೆಯ ದೆಹಲಿಯ ಆಮ್ ಆದ್ಮಿ ಪಕ್ಷದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಮ್ರಾನ್ ಹುಸೇನ್ ನಾಳೆ ಏಪ್ರಿಲ್ 25 ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ಮೂರು ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 25ರಂದು ಬೆಂಗಳೂರಿನ ಬಿಟಿಎಂ ಲೇಜೌಟ್, ಚಾಮರಾಜಪೇಟೆ, ಪದ್ಮನಾಭನಗರ ಮತ್ತು ಏಪ್ರಿಲ್ 26 ರಂದು ಪುಲಕೇಶಿನಗರ, ಚಿಕ್ಕಪೇಟೆ, ಸರ್ವಜ್ಞ ನಗರದಲ್ಲಿ ಮತಭೇಟಿ ನಡಸಲಿದ್ದಾರೆ. ಏಪ್ರಿಲ್ 27 ರಂದು ಉತ್ತರ ಕರ್ನಾಟಕದ ಗದಗ ಜಿಲ್ಲೆ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
Apr 24, 2023, 5:05 pm IST

ಜೆಪಿ ನಡ್ಡಾ-ಅಮಿತ್ ಶಾ ರೋಡ್ ಶೋ

ರಾಜ್ಯದ ಶಿಡ್ಲಘಟ್ಟ ವ್ಯಾಪ್ತಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರೋಡ್ ಶೋ. ಆಯಾಸಗೊಂಡು ಕುಸಿದು ಬಿದ್ದು ಪಕ್ಷದ ನಾಯಕ ಮಂಜುನಾಥ್. ಬಿಜೆಪಿ ಸೀಕಲ್ ರಾಮಚಂದ್ರಗೌಡ ಪರ ಜೆ.ಪಿ.ನಡ್ಡಾ ಪ್ರಚಾರದಲ್ಲಿ ಘಟನೆ ನಡೆದಿದೆ. ಇನ್ನು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ 1.5 ಕಿಲೋ ಮೀಟರ್ ಅಮಿತ್ ಶಾ ರೋಡ್ ಭರ್ಜರಿ ಶೋ ನಡೆಸಿದರು.
Apr 24, 2023, 4:23 pm IST

ಉಳ್ಳಾಲದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಾಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಜೆ‌.ಡಿ.ಎಸ್ ನಾಯಕರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅಲ್ತಾಫ್ ಕುಂಪಲ, ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಹಿಂದಿನ ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರುತ್ತಿರುವ ವೇಳೆ ನನಗೆ ನಾಮಪತ್ರ ವಾಪಸ್‌ ಪಡೆಯುವಂತೆ ಗೊಂಪೊಂದು ಧಮ್ಕಿ ಹಾಕಿತ್ತು. ಆದ್ದರಿಂದ ನಾಮಪತ್ರ ವಾಪಸ್‌ ಪಡೆದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Apr 24, 2023, 4:22 pm IST

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ನಾಮಪತ್ರ ವಾಪಸ್ ಪಡೆಯಲು ಸಮಯ ಅಂತ್ಯವಾಗಿದ್ದು, ಕೊನೆಯ ದಿನವಾದ ಏಪ್ರಿಲ್ 24ರಂದು ಹಲವು ಪ್ರಮುಖರು ನಾಪಪತ್ರ ವಾಪಸ್ ಪಡೆದಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಬಂಡಾಯವೆದ್ದಿದ್ದ ಹಲವರು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಹಲವರನ್ನು ಮನವೊಲಿಸುವಲ್ಲಿ ಪಕ್ಷದ ವರಿಷ್ಠರು ಯಶಸ್ವಿಯಾಗಿದ್ದರೆ ಇನ್ನೂ ಹಲವು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ.
Apr 24, 2023, 4:19 pm IST

ಲಿಂಗಾಯತ ಸಿಎಂ ಬಾಂಬ್‌ಗೆ ಸಿದ್ದು ಸ್ಪಷ್ಟನೆ

ನನ್ನ ಮಾತುಗಳನ್ನು ತಿರುಚಲಾಗಿದೆ. ವೀರಶೈವ ಲಿಂಗಾಯತರಿಗೆ ನಾನು ಅವಮಾನ ಮಾಡಿಲ್ಲ. ಬೊಮ್ಮಾಯಿ ಮೋಸ್ಟ್ ಕರಪ್ಟ್ ಸಿಎಂ ಎಂದು ಹೇಳಿದ್ದೇನೆ. ನಾನು ಯಾವ ಸಮುದಾಯದ ಬಗ್ಗೆಯು ಮಾತನಾಡಿಲ್ಲ. ಕೂಸು ಹುಟ್ಟುವ ಮೊದ್ಲೆ ಕುಲಾಯಿ ಹೊಲಿಸೋದು ಏಕೆ ಎನ್ನವು ಮೂಲಕ ಲಿಂಗಾಯತರನ್ನು ಸಿಎಂ ಮಾಡಲಿ ಎಂದ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸಿಎಂ ಯಾರೆಂದು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ತೀರ್ಮಾನವಾಗಲಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.
Apr 24, 2023, 4:13 pm IST

ಮಂಗಳೂರಲ್ಲಿ ಜೆಡಿಎಸ್‌ಗೆ ಮುಖಭಂಗ

ಮಂಗಳೂರಲ್ಲಿ ಜೆಡಿಎಸ್‌ಗೆ ಮುಖಭಂಗ
ಪಕ್ಷಕ್ಕೆ ಮಾಹಿತಿ ನೀಡಿದೇ ಮಂಗಳೂರಿನ ಉಳ್ಳಾಲ ಜೆಡಿಎಸ್ ಅಭ್ಯರ್ಥಿಗೆ ಅಲ್ತಾಫ್ ಕುಂಪಲ ನಾಮಪತ್ರ ವಾಪಸ್‌ಗೆ ಟ್ವಿಸ್ಟ್. ಎರಡು ದಿನದ ಹಿಂದೆಯೇ ಅಲ್ತಾಫ್ ನಾಮಪತ್ರ ವಾಪಾಸ್. ಈ ಬಗ್ಗೆ ಜೆಡಿಎಸ್‌ಗೆ ಗೊತ್ತೇ ಇಲ್ಲ. ಎರಡು ದಿನ ಬಳಿಕ ನಾಮಪತ್ರ ವಾಪಸ್‌ ಬಗ್ಗೆ ಕೇಳಿದಾಗ, ತಮಗೆ ಕಾಂಗ್ರೆಸ್ ನಾಯಕರು ನಾಮಪತ್ರ ವಾಪಸ್‌ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಅಲ್ತಾಫ್ ಆರೋಪಿಸಿದ್ದಾರೆ. ತಡವಾಗಿ ಸುದ್ದಿ ಗೊತ್ತಾದ ಜೆಡಿಎಸ್‌ಗೆ ಮುಜುಗರ. ಎಚ್‌ಡಿ ಕುಮಾರಸ್ವಾಮಿ ಸಹ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Apr 24, 2023, 3:29 pm IST

ಪ್ರಚಾರದ ವೇಳೆ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿದರು. ಯಡಿಯೂರಪ್ಪನವರು ಸ್ವಯಂ ಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರೆ ಯಾಕೆ ಕಣ್ಣಿರು ಹಾಕುತ್ತಿದ್ದರು. ನಂತರ ಆರ್‌ಎಸ್‌ಎಸ್‌ ಕೈಗೊಂಬೆ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಬೊಮ್ಮಾಯಿ ಸಾಕಷ್ಟು ಭ್ರಷ್ಟಾಚಾರ ಮಾಡಿದರು. ಇಂತವರು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ರಾಜ್ಯದ ಒಳಿತಿಗಾಗಿ ಈ ಬಾರಿ ಕಾಂಗ್ರೆಸ್‌ಗೆ ಆಶೀರ್ವದಿಸಿ ಎಂದು ಅವರು ಮತಯಾಚಿಸಿದರು.
Apr 24, 2023, 3:26 pm IST

2023 ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮಂಗಳವಾರದಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮೈಸೂರು ಜಿಲ್ಲೆ ಆಗಮಿಸಲಿದ್ದಾರೆ. ಟಿ. ನರಸೀಪುರ, ಹನೂರು ಮತ್ತು ಕೆಆರ್ ನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Apr 24, 2023, 3:25 pm IST

ಗೋಕಾಕ್: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಳಗಾವಿ ಜಿಲ್ಲೆ ಗೋಕಾಕ್ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿಪಕ್ಷ ನಾಯಕ ಸಿದ್ದರಾಮಯ್ಯ ಮತಯಾಚನೆ, ಪ್ರಚಾರದಲ್ಲಿ ಭಾಗಿ. ಗೋಕಾಕ್‌ ಕ್ಷೇತ್ರದಲ್ಲಿ ಪೊಲೀಸರು ಬಿಜೆಪಿಯವರು ಹೇಳಿದಂತೆ ಕೇಳುತ್ತಾರೆ. ನಾವು ಅಧಿಕಾರಕ್ಕೆ ಬಂದ ನಂತರ ಎಲ್ಲ ಪೊಲೀಸರನ್ನು ಬದಲಿಸುತ್ತೇವೆ. ಕ್ಷೇತ್ರದಲ್ಲಿ ಭಯದ ವಾತಾವರಣ ಇದೆ ಎಂದ ಸಿದ್ದರಾಮಯ್ಯ.
Apr 24, 2023, 3:23 pm IST

ಬಿಎಸ್‌ವೈ ಮನವೊಲಿಕೆಗೂ ಒಪ್ಪದ ಅರುಣ್ ಕುಮಾರ್ ಪುತ್ತಿಲ

ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಬಿಜೆಪಿ ಮುಖಂಡರ ಮನವೊಲಿಕೆಗೆ ಒಪ್ಪದ ಅರುಣ್ ಕುಮಾರ್ ಪುತ್ತಿಲ ಈ ಬಾರಿ ಸ್ಪರ್ಧಿಸಿಯೇ ಸಿದ್ಧ ಎಂದಿದ್ದಾರೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಕೂಡ ಅರುಣ್‌ ಕುಮಾರ್‌ ಪುತ್ತಿಲಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅರುಣ್‌ ಕುಮಾರ್‌ ಪುತ್ತಿಲ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಿರಿಯರು ಕೊನೆಯ ಕ್ಷಣದಲ್ಲಿ ಸಂಪರ್ಕ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ನಾನು ನಿರ್ಧಾರ ಮಾಡಲು ಆಗಲ್ಲ. ಕಾರ್ಯಕರ್ತರ, ಸಂಘದ ಹಿರಿಯರ ಸೂಚನೆ ಮೇರೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.
Apr 24, 2023, 3:21 pm IST

ಕೊಲ್ಲೂರಲ್ಲಿ ಡಿಕೆಶಿ ಸಿಎಂ ಪ್ರಾರ್ಥನೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಲು ಸಾಲು ಟೆಂಪಲ್ ರನ್. ಭಾನುವಾರ ಶೃಂಗೇರಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಂದು ಸೋಮವಾರ ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ, ಚಂಡಿಕಾಯಾಗ ನೆರವೇರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.ಸಿಎಂ ಹುದ್ದೆ ಪ್ರಾಪ್ತಿಯಾಗಲಿದೆ ಎಂದು ಡಿಕೆ ಶಿವಕುಮಾರ್ ಯಾಗ ಮಾಡಿದರಾ? ಎಂಬ ಪ್ರಶ್ನೆ ಮೂಡಿದೆ. ಸಿಎಂ ಹುದ್ದೆ ಪ್ರಾಪ್ತಿಯಾಗಲಿ, ನ್ಯಾಯಾಲಯ ತೊಂದರೆ ಕೊನೆಯಾಗಲಿ ಎಂದು ಅರ್ಚಕರು ಮಂತ್ರ ಪಠಣ ಮಾಡಿದ್ದಾರೆ.
Apr 24, 2023, 2:37 pm IST

ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ: ಯಡಿಯೂರಪ್ಪ

ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ: ಯಡಿಯೂರಪ್ಪ
ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯಗೆ ಶೋಭೆ ತರಲ್ಲ. ಸಿದ್ದರಾಮಯ್ಯಗೆ ಈಗಾಗಲೇ ಸೋಲು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ಕೊಡುತ್ತಿದ್ದಾರೆ. ಸಿದ್ಧರಾಮಯ್ಯ ಹೇಳಿಕೆ ಖಂಡಿಸುತ್ತೇನೆ. ಇನ್ನೂ ಸಿದ್ದರಾಮಯ್ಯ ಜವಾಬ್ದಾರಿಯಿಂದ ಮಾತನಾಡಬೇಕು. ಚುನಾವಣೆ ಬರುತ್ತೆ ಹೋಗುತ್ತೆ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.
Apr 24, 2023, 2:31 pm IST

ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ಗಾಗಿ ನಾಮಪತ್ರ ಸಲ್ಲಿಸಿದ್ದ ಎಸ್‌ಎಸ್‌ಎಫ್‌ ಮುಖಂಡ ಅಲ್ತಾಫ್‌ ಕುಂಪಲ ಅವರು ಪಕ್ಷದ ಮುಖಂಡರಿಗೆ ಮಾಹಿತಿ ನೀಡದೆ ಏಪ್ರಿಲ್‌ 21ರಂದು ನಾಮಪತ್ರ ಹಿಂಪಡೆದಿದ್ದಾರೆ. ಅಲ್ಲದೆ ಜೆಡಿಎಸ್‌ ಮುಖಂಡರ ಆರೋಪದ ಮೇರೆಗೆ ಕುಂಪಲ ಅವರು ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Apr 24, 2023, 2:29 pm IST

ಕುಮಟಾ ಕಾಂಗ್ರೆಸ್ ಬಂಡಾಯ ಶಮನ: ನಾಮಪತ್ರ ಹಿಂಪಡೆದ ಶಾರದಾ ಶೆಟ್ಟಿ

ಕುಮಟಾ ಕಾಂಗ್ರೆಸ್ ಬಂಡಾಯ ಶಮನ: ನಾಮಪತ್ರ ಹಿಂಪಡೆದ ಶಾರದಾ ಶೆಟ್ಟಿ
ಕಾಂಗ್ರೆಸ್‌ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ಕೊನೆಗೂ ನಾಮಪತ್ರ ಹಿಂಪಡೆಯುವುದರ ಜೊತೆಗೆ ರಾಜಕೀಯದಿಂದಲೇ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಕುಮಟಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾರದಾ ಶೆಟ್ಟಿ ಅವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಮಾಡಿದ್ದಾರೆ ಎನ್ನಲಾಗಿದೆ.
Apr 24, 2023, 2:28 pm IST

ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಸೋಮವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಬಿಜೆಪಿ ವರಿಷ್ಠರ ಮನೊವೊಲಿಕೆ ಪ್ರಯತ್ನ ನೀಡಿದ್ದು, ನಾಮಪತ್ರ ವಾಪಸ್ ಪಡೆದಿರುವ ಅವರು ಬಿಜೆಪಿ ಅಭ್ಯರ್ಥಿ ಚಿಕ್ಕ ರೇವಣ್ಣ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
Apr 24, 2023, 2:11 pm IST

ಚಿಕ್ಕಪೇಟೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್ ಗಂಗಾಂಬಿಕೆ ಬದಲು ಆರ್.ವಿ. ದೇವರಾಜ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು.
Apr 24, 2023, 2:03 pm IST

ಹಳೆ ಪ್ಲೇಯರ್ ರಿಟೈರ್ಡ್ ಆಗಿ ಅಂದ್ರೆ ಶೆಟ್ಟರ್ ಬೇರೆ ಟೀಮ್‌ಗೆ ಹೋದ್ರು-ಜೋಶಿ

ಹಳೆ ಪ್ಲೇಯರ್ ರಿಟೈರ್ಡ್ ಆಗಿ ಅಂದ್ರೆ ಶೆಟ್ಟರ್ ಬೇರೆ ಟೀಮ್‌ಗೆ ಹೋದ್ರು-ಜೋಶಿ
ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿಸರುವ ಜಗದೀಶ್‌ ಶೆಟ್ಟರ್‌ ಬಗ್ಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್‌ ಹೋಗಿರುವುದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಹಳೆ ಪ್ಲೇಯರ್ ರಿಟೈರ್ಡ್ ಆಗಿ ಅಂದಿದ್ದೇವು. ಆದರೆ ಅವರು ಮತ್ತೊಂದು ಟೀಟ್‌ನಲ್ಲಿ ಆಡೋಕೆ ಹೋಗಿದ್ದಾರೆ. ಆದರೂ ಈ ಸಲ ಕಪ್ ನಮ್ದೇ ಎಂದು ಜಗದೀಶ್‌ ಶೆಟ್ಟರ್ ವಿರುದ್ಧ ವ್ಯಂಗ್ಯವಾಡಿದರು.
Apr 24, 2023, 2:03 pm IST

ಸಿದ್ದರಾಮಯ್ಯ ಹೇಳಿಕೆ ವಿಡಿಯೋದಲ್ಲಿದೆ, ಯಾರೂ ತಿರುಚಿಲ್ಲ-ಸಿಎಂ ಬೊಮ್ಮಾಯಿ

ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಆಡಿರುವ ಮಾತು ವಿಡಿಯೋದಲ್ಲಿದೆ. ಅದನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಈ ಹಿಂದೆ ಪತ್ರಿಕೆಯಲ್ಲಿ ಬರೆದಾಗ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಪರಿಸ್ಥಿತಿ ಆ ರೀತಿ ಇಲ್ಲ. ಮೊದಲು ಹೇಳಿದ್ದೇ ಬೇರೆ, ಆಮೇಲೆ ಸಿದ್ದರಾಮಯ್ಯ ಹೇಳಿದ್ದೇ ಬೇರೆ. ಅವರ ಹೇಳಿಕೆಗಳನ್ನು ಬದಲಿಸಿದ್ದಾರೆ ಅಷ್ಟೇ. ಯಾರೂ ತಿರುಚಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಾತನಾಡಿರುವುದು ಸ್ಟಷ್ಟವಾಗಿದೆ. ಜನರೇನೂ ದಡ್ಡರಲ್ಲ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಸಭೆ ಮಾಡುತ್ತಿದ್ದಾರೆ ಎಂದರು.
Apr 24, 2023, 2:02 pm IST

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತಮ್ಮ ಚುನಾವಣಾ ಭರವಸೆಗಳನ್ನು ಪುನರುಚ್ಚರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಸರ್ಕಾರ ರಚನೆಯ ನಂತರ ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಅನ್ನ ಭಾಗ್ಯ, ಯುವ ನಿಧಿ ಯೋಜನೆಗಳನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ಘೋಷಿಸಿದೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+