AAP 2nd list: 60 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ, ಪಟ್ಟಿಯಲ್ಲಿ ಕಂಡಕ್ಟರ್, ರೈತರು, ಮಹಿಳೆಯರು
ಬೆಂಗಳೂರು, ಮಾರ್ಚ್ 31: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಆಮ್ ಆದ್ಮಿ ಪಕ್ಷವು ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ವಿವಿಧ ಕ್ಷೇತ್ರಗಳಿಂದ ಬಂದ ಜನಸಾಮಾನ್ಯರನ್ನು ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಡುಗಡೆ ಮಾಡಿದ ಚುನಾವಣಾ ಉಸ್ತುವಾರಿ ಗಳಾದ @dilipkpandey , ರಾಜ್ಯಾಧ್ಯಕ್ಷರಾದ @aapkaprithvi ಮತ್ತು ಮಾಧ್ಯಮ ಮತ್ತು ಸಂವಹನ ಉಸ್ತುವಾರಿ ಗಳಾದ @brijeshkalappa pic.twitter.com/MGIBXcSBHR
— AAP Karnataka (@AAPKarnataka) March 31, 2023
ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರ ಪೈಕಿ ತನ್ನ ಮೊದಲ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷವು (AAP) ಒಟ್ಟು 80 ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಒಟ್ಟು 60 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಪ್ರಮುಖ ರಾಷ್ಟ್ರೀಯ ಪಕ್ಷಗಳ ಪ್ರಭಾವಿ ನಾಯಕರು ಸ್ಫರ್ಧಿಸುವ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಯಾವ ಪ್ರಭಾವಿ ನಾಯಕರನ್ನು ಕಣಕ್ಕಿಳಿಸಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಇಲ್ಲಿ ತಿಳಿಯಬಹುದು.

ಬೆಂಗಳೂರಿನ ಎಎಪಿ ರಾಜ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, 60 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಈ ಪೈಕಿ ಕೋಲಾರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಯಿಂದ ಕ್ರಮವಾಗಿ ಸುಹೇಲ್ ದಿಲ್ ನವಾಜ್ ಮತ್ತು ರಾಜೇಶ್ ಜಿ.ಎಸ್. ಎಂಬುವವರು ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.
ಈ ಎರಡು ಕ್ಷೇತ್ರಗಳ ಪೈಕಿ ವರುಣಾದಿಂದ ಕಾಂಗ್ರೆಸ್‌ಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪರ್ಧೆ ಖಚಿತವಾಗಿದೆ. ವರುಣಾ ಕ್ಷೇತ್ರದಿಂದಲೂ ಅವರ ನಿಲ್ಲುವ ಸಾಧ್ಯತೆ ಇದ್ದು, ಆದರೆ ಸದ್ಯಕ್ಕೆ ಖಚಿತವಾಗಿಲ್ಲ. ಇನ್ನೂ ಬಿಜೆಪಿಯಿಂದ ಮತ್ತು ಜೆಡಿಎಸ್‌ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಬಹಿರಂಗವಾಗಬೇಕಿದೆ.
ಜನಸಾಮಾನ್ಯರು/ಕಾರ್ಯಕರ್ತರಿಗೂ ಟಿಕೆಟ್
ಆಮ್ ಆದ್ಮಿ ಪಕ್ಷವು ಹೊಸದಾಗಿ ಸೇರ್ಪಡೆಗೊಂಡವರಿಗೂ ಮಣೆ ಹಾಕಿದೆ. ಕೆಲವೆಡೆ ಪಕ್ಷ ಸಂಘಟನೆಗೆ ಕ್ಷೇತ್ರದಲ್ಲೆಲ್ಲ ಕ್ರಿಯಾಶೀಲ ಆಗಿಗುವವರು ಸೇರಿದಂತೆ ಜನಸಾಮಾನ್ಯರನ್ನು ಕಣಕ್ಕಿಳಿಸಿದೆ. ಎರಡನೇ ಪಟ್ಟಿಯಲ್ಲಿನ ಪ್ರಮುಖರನ್ನು ನೋಡುವುದಾದರ, ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದಿಂದ ಜಾನ್ಸ್ ಕುಮಾರ್ ಎಂ. ಕರೆಪ್ಪಗೋಳ ಕಣಕ್ಕಿಳಿದಿದ್ದಾರೆ. ಬೆಂಗಳೂರಿನ ಬಸವನಗುಡಿಯಿಂದ ಸತ್ಯಲಕ್ಷ್ಮೀ ರಾವ್ ಮತ್ತು ಮಹದೇವಪುರದಿಂದ ನಟರಾಜ್ ಸಿ.ಆರ್. ಅವರನ್ನು ಎಎಪಿ ಘೋಷಿಸಿದೆ.

ಬೆಂಗಳೂರಿನ ಬ್ಯಾಟರಾಯನಪುರ ಉಮೇಶ್ ಬಾಬು, ಗೋವಿಂದ ರಾಜನಗರ, ಅಂಜನಗೌಡ, ಯಶವಂತಪುರ ಶಶಿಧರ್ ಸಿ ಆರಾಧ್ಯ, ಬೆಂಗಳೂರು ದಕ್ಷಿಣಕ್ಕೆ ಅಶೋಕ ಮೃತ್ಯುಂಜಯ, ಕೆ.ಆರ್.ಪೇಟೆಯಿಂದ ಶಿವಣ್ಣ, ಚಿಕ್ಕೋಡಿ ಸದಲಗಾ ಕ್ಷೇತ್ರದಿಂದ ಶ್ರೀಕಾಂತ ಪಾಟೀಲ್, ಕುಂದಗೋಳದಿಂದ ನಿರಂಜನಯ್ಯ ಮನಕಟ್ಟಿಮಠ, ಜೇವರ್ಗಿಯಿಂದ ವಿಶ್ವನಾಥ್ ರೆಡ್ಡಿ, ತುಮಕೂರು ಗ್ರಾಮಾಂತರ ದಿನೇಶ್ ಕುಮಾರ್ ಬಿ.ಎಂಬುವವರು ಎಎಪಿಯಿಂದ ಕಣಕ್ಕಿಳಿದಿದ್ದಾರೆ.
ಪ್ರಮುಖ ಎಎಪಿ ಅಭ್ಯರ್ಥಿಗಳ ಪಟ್ಟಿ
| ಕ್ಷೇತ್ರ | ಅಭ್ಯರ್ಥಿಗಳು |
| ಚಾಮರಾಜನಗರ | ಡಾ.ಗುರುಪ್ರಸಾದ್ |
| ಕೊಳ್ಳೇಗಾಲ | ಕೆಂಪರಾಜು |
| ಚಾಮುಂಡೇಶ್ವರಿ | ಕಿರಣ್ ನಾಗೇಶ್ ಕಲ್ಯಾಣಿ |
| ಪುತ್ತೂರು | ಡಾ.ಬಿ.ಕೆ.ವಿಶುಕುಮಾರ್ |
| ನಂಜನಗೂಡು | ಹನುಮಯ್ಯ |
| ಮಂಗಳೂರು ನಗರ ಉತ್ತರ | ಸಂದೀಪ ಶೆಟ್ಟಿ |
| ಹಡಗಲಿ | ಶ್ರೀಧರ್ ನಾಯ್ಕ್ |
| ಹಗರಿಬೊಮ್ಮನಹಳ್ಳಿ | ಡಾ.ಹನುಮಂತಪ್ಪ |
| ಹಿರಿಯೂರು | ಕೆ.ಟಿ.ತಿಪ್ಪೇಸ್ವಾಮಿ |
ಉಡುಪಿ- ಪ್ರಜಾಕರ್ ಪೂಜಾರಿ ಸೇರಿದಂತೆ ಇನ್ನೂ ಹಲವು ಎಎಪಿಯಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. ಇದು ಪ್ರಮುಖ ರಾಜಕೀಯ ಪಕ್ಷಗಳ ಮತಗಳಿಗೆ ಒಂದಷ್ಟು ಧಕ್ಕೆ ಆಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, "ಬೇರೆಲ್ಲ ಪಕ್ಷಗಳಿಗಿಂತ ಮೊದಲೇ ನಾವು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದೆವು. ನಂತರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೆವು. ಈಗ 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದೇವೆ. ಬೇರೆಲ್ಲ ಪಕ್ಷಗಳಿಗಿಂತ ನಾವು ಮುಂದಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ. ಆಮ್ ಆದ್ಮಿ ಪಾರ್ಟಿಯು ಜನಸಾಮಾನ್ಯರಿಗೆ ಅವಕಾಶ ನೀಡುತ್ತಿದೆ. ಮೊದಲಪಟ್ಟಿಯಂತೆ ಎರಡನೇ ಪಟ್ಟಿಯಲ್ಲಿ ಕೂಡ ಅಭ್ಯರ್ಥಿಗಳ ಸರಾಸರಿ ವಯಸ್ಸು 45 ದಾಟಿಲ್ಲ. ಎರಡು ಪಟ್ಟಿಯಲ್ಲಿ ಒಟ್ಟು 14 ರೈತರಿಗೆ, 11 ಮಹಿಳೆಯರಿಗೆ, 18 ವಕೀಲರು, 6 ವೈದ್ಯರು, 23 ಇಂಜಿನಿಯರ್‌ಗಳು ಹಾಗೂ 4 ಐಟಿ ವೃತ್ತಿಪರರು ಹಾಗೂ ಐದು ಮಂದಿ ಡಾಕ್ಟರೇಟ್ ಪಡೆದವರು ಇದ್ದಾರೆ. 29 ಜನರ ಸ್ನಾತಕೋತ್ತರ ಪದವೀಧರರು, 68 ಪದವೀಧರರು, 6 ಎಂಬಿಎ ಪದವೀಧರರನ್ನು ಈ ಎರಡು ಪಟ್ಟಿಗಳು ಒಳಗೊಂಡಿವೆ" ಎಂದು ಹೇಳಿದರು.












Click it and Unblock the Notifications