ನಾಲೆಗಳ ಆಧುನೀಕರಣಕ್ಕೆ ಆಂಧ್ರ-ಕರ್ನಾಟಕ ಸಹಮತ

ಬೆಂಗಳೂರು, ನ.10 : ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ತುಂಗಭದ್ರಾ ಬಲದಂಡೆಯ ಮೇಲ್ಮಟ್ಟ ಹಾಗೂ ಕೆಳ ಮಟ್ಟದ ನಾಲೆಗಳ ಆಧುನೀಕರಣಕ್ಕೆ ಸಹಮತ ವ್ಯಕ್ತಪಡಿಸಿವೆ. ಕರ್ನಾಟಕ ವ್ಯಾಪ್ತಿಯ 105 ಕಿ.ಮೀ. ಹಾಗೂ ನಂತರದ ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಹರಿವು ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಹಿತ ಕಾಯ್ದು ಕೊಳ್ಳಲು ನಾಲೆಗಳ ಆಧುನೀಕರಣ ಅಗತ್ಯವಾಗಿದೆ ಎಂದು ಉಭಯ ರಾಜ್ಯಗಳು ಒಪ್ಪಿಕೊಂಡಿವೆ.

ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು ಮತ್ತು ಕರ್ನಾಟಕ ಸಿಎಂ ಸಿದ್ದರಾಮಯ್ಯ ನಡುವೆ ಇಂದು ತುಂಗಭದ್ರಾ ನದಿ ನೀರು ಹಂಚಿಕೆ ಕುರಿತು ಸಭೆಯ ನಡೆಯಿತು. ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಸಭೆಯ ನಿರ್ಧಾರವನ್ನು ತಿಳಿಸಿದರು.

ನಾಲೆಗಳ ಆಧುನೀಕರಣ ಕುರಿತಂತೆ ಆಂಧ್ರಪ್ರದೇಶ ಸರ್ಕಾರದ ಪ್ರಸ್ತಾವವನ್ನು ಕರ್ನಾಟಕ ನೀರಾವರಿ ನಿಗಮ ಪರಿಗಣಿಸಿದ ನಂತರ, ಜಲಸಂಪನ್ಮೂಲ ಇಲಾಖೆಯ ತಾಂತ್ರಿಕ ಉಪ ಸಮಿತಿಯು ಸುದೀರ್ಘವಾಗಿ ಚರ್ಚಿಸಿ ಹಾಗೂ ಸಮಗ್ರವಾಗಿ ಪರಿಶೀಲಿಸಿ, ತುಂಗಭದ್ರಾ ಮಂಡಳಿಗೆ ವರದಿ ಸಲ್ಲಿಸಲಿದೆ. [ತುಂಗಭದ್ರೆ ಉಸಿರುಗಟ್ಟಿಸುತ್ತಿರುವ ಗಟಾರದ ನೀರು]

ಭಾರತ ಸರ್ಕಾರದ ಜಲ ಸಂಪನ್ಮೂಲ ಮಂತ್ರಾಲಯದ ಪ್ರತಿನಿಧಿ ಅಧ್ಯಕ್ಷರಾಗಿರುವ ತುಂಗಭದ್ರಾ ಮಂಡಳಿಯಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ನಾಮ ನಿರ್ದೇಶಿತ ಪ್ರತಿನಿಧಿಗಳು ಮಾತ್ರವಲ್ಲದೆ, ತೆಲಂಗಾಣ ರಾಜ್ಯದ ಪ್ರತಿನಿಧಿಗಳೂ ಇರುತ್ತಾರೆ. ಮಂಡಳಿಯು ಹಸಿರು ನಿಶಾನೆ ತೋರಿದ ನಂತರ ಈ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದರು.

ಎರಡೂ ಸರ್ಕಾರಗಳ ಈ ಪ್ರಸ್ತಾವಕ್ಕೆ ತುಂಗಭದ್ರಾ ಮಂಡಳಿಯ ಸಮ್ಮತಿ ದೊರೆತ ನಂತರವೇ ಆರ್ಥಿಕ ಸಂಪನ್ಮೂಲದ ಅವಶ್ಯಕತೆ ಹಾಗೂ ಕ್ರೋಢೀಕರಣ ಕುರಿತು ಯೋಜಿಸಲಾಗುವುದು. ನಾಲೆಯಲ್ಲಿ ಪ್ರತಿ ವರ್ಷವೂ ಶೇಕಡಾ 0.45 ರಷ್ಟು ಹೂಳು ಸೇರುತ್ತಿದೆ. ಹೂಳು ಸೇರುವುದರಿಂದ ಸುಮಾರು 32 ಟಿಎಂಸಿ ನೀರು ನಷ್ಟವಾಗುತ್ತಿದೆ ಎಂದರು. [ತುಂಗಭದ್ರಾ ಸೇತುವೆ ಲೋಕಾರ್ಪಣೆ]

ಆಂಧ್ರ ಸಿಎಂ ಹೇಳಿದ್ದೇನು : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು ಕರ್ನಾಟಕ ವ್ಯಾಪ್ತಿಯ 105 ಕಿ ಮೀ ವರೆಗೆ ಹಾಗೂ ನಂತರದ ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಹರಿವು ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಹಿತ ಕಾಯ್ದು ಕೊಳ್ಳಲು ನಾಲೆಗಳ ಆಧುನೀಕರಣ ಅವಶ್ಯಕವಾಗಿದೆ ಎಂದರು.

Andhra Pradesh

ಕರ್ನಾಟಕ ಸರ್ಕಾರದ ಪರವಾಗಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಆಂಧ್ರ ಪ್ರದೇಶದ ಸರ್ಕಾರದ ಪರವಾಗಿ ನೀರಾವರಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಹಾಗೂ ಜಲಸಂಪನ್ಮೂಲ ನಿರ್ವಹಣಾ ಸಚಿವ ದೇವಿನೇನಿ ಉಮಾಮಹೇಶ್ವರ ರಾವ್, ಆಹಾರ, ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವೆ ಪರಿಟಾಲ ಸುನೀತಮ್ಮ, ನೀರಾವರಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎ. ಎನ್. ದಾಸ್ ಮುಂತಾದವು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+