Karnataka Weather Report: ಉತ್ತರದಲ್ಲಿ ಮಳೆ ಮುನ್ಸೂಚನೆ, ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ
ಬೆಂಗಳೂರು, ಫೆಬ್ರವರಿ.16: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ವಾತಾವರಣ ಕಡಿಮೆಯಾಗುತ್ತಿದ್ದು, ಹಬೆ ಹೆಚ್ಚಾಗುತ್ತಿದೆ. ಒಣಹವೆ ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ. ಕೆಲವು ಭಾಗಗಳಲ್ಲಿ ಬೆಳಗಿನ ಜಾವ ಅಲ್ಪ ಮಟ್ಟಿನ ಚಳಿ ಕಾಣಿಸಿಕೊಳ್ಳುತ್ತಿದ್ದು, ಕರಾವಳಿ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿದೆ.
ಬೆಂಗಳೂರು, ಮೈಸೂರು ಸೇರಿ ಬಯಲು ಸೀಮೆ ಪ್ರದೇಶಗಳಲ್ಲಿ ಬಿಸಿಲಿನ ಝಳ ಜೋರಾಗಿಯೇ ಇದೆ. 10, 11 ಗಂಟೆಯ ನಂತರ ಸುಡು ಬಿಸಿಲು ಆರಂಭವಾಗುತ್ತಿದೆ. ಆದರೆ, ಫೆಬ್ರವರಿ.16ರ ಮುಂಜಾನೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಮುಂಜಾನೆ ಚಳಿ ವರದಿಯಾಗಿದೆ.

ಬೆಂಗಳೂರು ಸಮೀಪದ ಚಿಕ್ಕನಹಳ್ಳಿಯಲ್ಲಿ ತ್ಯಂತ ಕನಿಷ್ಠ ಉಷ್ಣಾಂಶ ಅಂದರೆ 11.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್ಎಎಲ್ನಲ್ಲಿ 30.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31.2 ಮತ್ತು ಕನಿಷ್ಠ ತಾಪಮಾನ 17.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಭಾರತದ ಹವಾಮಾನ ವರದಿ
ಫೆಬ್ರವರಿ 17 ರಿಂದ 20 ರವರೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮತ್ತು ಫೆಬ್ರವರಿ 19 ರಿಂದ 21 ರವರೆಗೆ ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ತೀವ್ರವಾದ ಮಳೆ/ಹಿಮಪಾತದ ಚಟುವಟಿಕೆಯ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಉಲ್ಲೇಖಿಸಿದೆ.
ಫೆಬ್ರವರಿ 18 ರಿಂದ 20 ರವರೆಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶ ಮತ್ತು ಫೆಬ್ರವರಿ 19 ಮತ್ತು 20 ರಂದು ಉತ್ತರಾಖಂಡದಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕವಾದ ಮಳೆ/ಹಿಮ ಬೀಳುವ ಸಾಧ್ಯತೆಯಿದೆ. ಫೆಬ್ರವರಿ 18 ರಿಂದ 20 ಸಮಯದಲ್ಲಿ ಪಂಜಾಬ್‌ನಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಸಾಕಷ್ಟು ವ್ಯಾಪಕವಾದ ಮಳೆಯಾಗುವ ಸಾಧ್ಯತೆಯಿದೆ. ಫೆಬ್ರವರಿ 19 ರಿಂದ 21 ರ ಅವಧಿಯಲ್ಲಿ ಹರಿಯಾಣ, ಚಂಡೀಗಢ ಮತ್ತು ಪಶ್ಚಿಮ ಉತ್ತರ ಪ್ರದೇಶ ಮತ್ತು ಫೆಬ್ರವರಿ 19 ರಂದು ರಾಜಸ್ಥಾನದಲ್ಲಿ ಮಳೆಯಾಗಲಿದೆ.
ಹೆಚ್ಚುವರಿಯಾಗಿ, ಉತ್ತರ ಬಂಗಾಳ ಕೊಲ್ಲಿಯ ಮೇಲಿನ ಆಂಟಿಸೈಕ್ಲೋನ್ ಕಾರಣದಿಂದಾಗಿ ವಿದರ್ಭ, ಉತ್ತರ ಛತ್ತೀಸ್‌ಗಢ, ಗಂಗಾನದಿ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಜಾರ್ಖಂಡ್‌ನಲ್ಲಿ ಲಘುವಾಗ ಮಳೆಯಾಗುತ್ತದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಕ್ರಮವಾಗಿ 9 ಮತ್ತು 26 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ.












Click it and Unblock the Notifications