7th pay commission; ಸಿಬ್ಬಂದಿಗಳ ನಿಯೋಜನೆ ಕುರಿತ ಆದೇಶ
ಬೆಂಗಳೂರು, ಜನವರಿ 01; 7ನೇ ರಾಜ್ಯ ವೇತನ ಆಯೋಗಕ್ಕೆ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಬ್ಬಂದಿ) ಗಾಯತ್ರಿ ಜಿ. ಎನ್. ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು, ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಒಳಗೊಂಡ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ.

7ನೇ ರಾಜ್ಯ ವೇತನ ಆಯೋಗಕ್ಕೆ 44 ಹುದ್ದೆಗಳನ್ನು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಜನೆ ಮಾಡಲಾಗಿದ್ದು, ಸದರಿ ಹುದ್ದೆಗಳನ್ನು ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಯಿಂದ ಅಥವಾ ಸರ್ಕಾರದ ಇನ್ನಿತರೆ ಇಲಾಖೆಗಳಿಂದ ನಿಯೋಜನೆ ಮೂಲಕ ಭರ್ತಿ ಮಾಡಲು ಆದೇಶಿಸಲಾಗಿರುತ್ತದೆ.
ಕಾರ್ಯದರ್ಶಿ 1 (ಐಎಎಸ್ ವೃಂದ), ಅಪರ / ಜಂಟಿ/ ಉಪ ಕಾರ್ಯದರ್ಶಿ/ ವಿಶೇಷಾಧಿಕಾರಿ 3, ಜಂಟಿ/ ಉಪ/ ಸಹಾಯಕ ನಿರ್ದೇಶಕರು (ಅಂಕಿಅಂಶ) 1, ಅಧೀನ ಕಾರ್ಯದರ್ಶಿ/ ಆಪ್ತ ಕಾರ್ಯದರ್ಶಿ 6, ಶಾಖಾಧಿಕಾರಿ 2, ಹಿರಿಯ ಸಹಾಯಕರು/ ಸಹಾಯಕರು/ ಶೀಘ್ರಲಿಪಿಗಾರರು/ ಕಿರಿಯ ಸಹಾಯಕರು/ ಬೆರಳಚ್ಚುಗಾರರು/ ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರ ಗ್ರೂಪ್ ಸಿ ವೃಂದದ ಹುದ್ದೆಗಳು 25, ದಲಾಯತ್ 6 ಸೇರಿ ಒಟ್ಟು 44 ಹುದ್ದೆಗಳು.
ಆಯೋಗದ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲು ನುರಿತ ಅಧಿಕಾರಿ/ ಸಿಬ್ಬಂದಿಗಳ ಅಗತ್ಯತೆ ಇರುವುದರಿಂದ ಕರ್ನಾಟಕ ಸರ್ಕಾರ ಸಚಿವಾಲಯದ ವಿವಿಧ ವೃಂದಗಳ ನುರಿತ ಹಾಗೂ ದಕ್ಷ ಅಧಿಕಾರಿ/ ನೌಕರರನ್ನು ನಿಯೋಜಿಸುವಂತೆ ಕೋರಲಾದ ಹಿನ್ನೆಲೆಯಲ್ಲಿ ಸದರಿ ಆಯೋಗಕ್ಕೆ ಕರ್ನಾಟಕ ಸರ್ಕಾರದ ಸಚಿವಾಲಯದ ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ 24 ಅಧಿಕಾರಿ/ ನೌಕರರುಗಳನ್ನು ನಿಯೋಜನೆ ಮೇರೆಗೆ ನಿಯೋಜಿಸಲಾಗಿದೆ.
ಈ 24 ಅಧಿಕಾರಿ/ ನೌಕರರುಗಳ ಪೈಕಿ ಈ ಕೆಳಕಂಡ 4 ನೌಕರರುಗಳ ನಿಯೋಜನಾ ಆದೇಶವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ರದ್ದುಗೊಳಿಸಿ, ಹಾಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯಲ್ಲಿಯೇ ಮುಂದುವರೆಸುವಂತೆ ಕೋರಲಾಗಿರುತ್ತದೆ. ಮೋಹನ್‌ಕುಮಾರ್ .ಎನ್. (ಹಿರಿಯ ಶೀಘ್ರಲಿಪಿಗಾರ), ಪೃಥ್ವಿರಾಜ್ (ಸಹಾಯಕ), ಬಾಷಾ ಸಾಹೇಬ್ ಗದಗ್‌ಕರ್ (ದತ್ತಾಂಶ ನಮೂದು ಸಹಾಯಕ), ಶ್ರೀನಾಥ್ . ಎನ್. (ಗ್ರೂಪ್-ಡಿ ಹೊರಗುತ್ತಿಗೆ ನೌಕರ) ಹಾಲಿ ಇಲಾಖೆಯಲ್ಲಿಯೇ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್-ಸಿ ವೃಂದದ ಮೋಹನ್‌ಕುಮಾರ್ .ಎನ್., ಪೃಥ್ವಿರಾಜ್, ಬಾಷಾ ಸಾಹೇಬ್ ಗದಗ್, ಶ್ರೀನಾಥ್ . ಎನ್., ಇವರುಗಳನ್ನು 7ನೇ ರಾಜ್ಯ ವೇತನ ಆಯೋಗದಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿರುವುದನ್ನು ಹಿಂಪಡೆದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಇಲಾಖೆಯಲ್ಲಿಯೇ ಮುಂದುವರೆಸಲಾಗಿದೆ.
ಇವರುಗಳ ಬದಲಿಗೆ ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್-ಸಿ ವೃಂದದ ಈ ಕೆಳಕಂಡ 4 ನೌಕರರುಗಳನ್ನು ನಿಯೋಜನೆ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ 7ನೇ ರಾಜ್ಯ ವೇತನ ಆಯೋಗಕ್ಕೆ ನಿಯೋಜಿಸಿದೆ.
ನಿಯೋಜನೆಗೊಂಡ ಅಧಿಕಾರಿಗಳು
* ಗಂಗಪ್ಪ ಹಾನಗಲ್ (ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ (ಎಸ್-3) ಹಿರಿಯ ಸಹಾಯಕ ಹುದ್ದೆ.
* ಕಿರಣ್ ಕೋಣಿ (ಸಿ. ಆ. ಸು. ಇ. (ರಜಾ ಮೀಸಲಾತಿ). ಶೀಘ್ರಲಿಪಿಗಾರ ಹುದ್ದೆ.
* ವಿನೋದ್ ಟಿ. ಎಂ. ನಗರಾಭಿವೃದ್ಧಿ ಇಲಾಖೆ (ಬೆಂಗಳೂರು-1). ದತ್ತಾಂಶ ನಮೂದು ಸಹಾಯಕರು
* ಸುರೇಂದ್ರ ಜಿ. ಲೋಕೋಪಯೋಗಿ ಇಲಾಖೆ. ಗ್ರೂಪ್-ಡಿ (ಹೊರಗುತ್ತಿಗೆ ನೌಕರ)












Click it and Unblock the Notifications