ಕರ್ನಾಟಕದ 07 ಜಿಲ್ಲೆಗಳಲ್ಲಿ 40 ಡಿ.ಸೆ ಅಧಿಕ ತಾಪಮಾನ: ಬೆಂಗಳೂರಿನಲ್ಲಿ ಎಷ್ಟಿದೇ ದಾಖಲೆಯ ಗರಿಷ್ಠ ಬಿಸಿ? ತಿಳಿಯಿರಿ
ಬೆಂಗಳೂರು, ಏಪ್ರಿಲ್ 07: ಕರ್ನಾಟಕ ರಾಜ್ಯದಾದ್ಯಂತ ಉರಿ ಬಿಸಿಲು ದಾಖಲಾತಿ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಕೋಪ ಸದ್ಯಕ್ಕೆ ಕಡಿಮೆ ಆಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಶನಿವಾರ ಕಲಬುರಗಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 43.1 ಡಿಗ್ರಿ ಸೆಲ್ಸಿಯಸ್, ಇಂದು ಭಾನುವಾರ ಮತ್ತೆ 43.3 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಆಗಿದೆ.
ಇದೇ ರೀತಿ ಕರ್ನಾಟಕದ ಸುಮಾರು 07 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉಳಿದ ಜಿಲ್ಲೆಗಳಲ್ಲೂ ಸಹ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದ್ದು, ಎಲ್ಲೆಲ್ಲು ಶಾಖದ ಅಲೆ ಕಂಡು ಬರುತ್ತಿದೆ.

ಹಾಗಾದರೆ, ಈ ಗರಿಷ್ಠ ತಾಪಮಾನ ಯಾವಾಗ ಕಡಿಮೆ ಆಗಲಿದೆ?, ಮಳೆ ಯಾವಾಗ ಬರಲಿದೆ, ಪರಿಸ್ಥಿತಿಯ ಕುರಿತು ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಗಳು ಏನು? ಎಂಬ ಮಾಹಿತಿ ಇಲ್ಲಿದೆ.
ಕಲಬುರಗಿ ಜೊತೆ ಇಲ್ಲೂ ಅಧಿಕ ತಾಪಮಾನ
ಕಲಬುರಗಿ ಜೊತೆಗೆ ಬಾಗಲಕೋಟೆಯಲ್ಲಿ ಬರೋಬ್ಬರಿ 42.1 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 41.1, ರಾಯಚೂರು 41.4, ವಿಜಯಪುರ 41.0, ಜಿಲ್ಲೆಗಳಲ್ಲಿ 41 ಡಿಗ್ರಿ ಸೆಲ್ಸಿಯಸ್, ಚಿಕ್ಕನಹಳ್ಳಿ 40.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಮೊನ್ನೆಯಷ್ಟೇ ಈ ಜಿಲ್ಲೆಗಳಿಗೆ ಹೀಟ್ ವೇವ್ ಯೆಲ್ಲೋ ಅಲರ್ಟ್ ನೀಡಲಾಗಿತ್ತು. ಈ ಭಾಗದಲ್ಲಿ ಮಳೆಯ ಸುದ್ದಿಯೇ ಇಲ್ಲ. ಜನರು ಬಿಸಿಗೆ ತತ್ತರಿಸುತ್ತಿದ್ದಾರೆ.
ಇನ್ನೂ ಬೀದರ್, ಹಾವೇರಿ, ದಾವಣಗೆರೆಯಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದರೆ, ಶಿವಮೊಗ್ಗ, ಮಂಡ್ಯ, ಚಿಂತಾಮಣಿ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಕೆಐಎಎಲ್, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಂಗಳೂರಲ್ಲಿ ಗರಿಷ್ಠ 37.8 ಡಿಸೆ ತಾಪಮಾನ
ರಾಜಧಾನಿ ಬೆಂಗಳೂರಿನಲ್ಲಿ ಕೆಳೆದ ಕೆಲವು ದಿನಗಳಲ್ಲಿ ದಾಖಲೆ ಮಟ್ಟದ ತಾಪಮಾನ ದಾಖಲಾಗುತ್ತಿದೆ. ಕಳೆದ 12 ವರ್ಷಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ನಾಲ್ಕೈ ದು ಬಾರಿ ದಾಖಲಾಗಿತ್ತು. ಆದರೆ ಈ ವರ್ಷ 2024ರ ಏಪ್ರಿಲ್ ತಿಂಗಳ ಮೊದಲ ವಾರವೇ ಕೆಲವು ಬಾರಿ ದಾಖಲೆಯ 37.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.
ಕೂಲ್ ಕೂಲ್ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ಇದೀಗ ತೀವ್ರ ಶಾಖದ ಅಲೆಗೆ ಕಾರಣವಾಗಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಅನಿವಾರ್ಯವಾಗಿ ಇನ್ನೂ ಒಂದೆರಡು ವಾರದ ಇದೇ ರೀತಿಯ ವಾತವರಣಕ್ಕೆ ಹೊಂದಿಕೊಳ್ಳಲೇ ಬೇಕಿದೆ.
ಒಂದೆರಡು ಜಿಲ್ಲೆಗಳಲ್ಲಿ ಮಳೆ ಅಲರ್ಟ್
ಮುಂದಿನ ಒಂದೆರಡು ದಿನಗಳಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಬರುವ ಲಕ್ಷಣಗಳು ಇವೆ. ಇದರ ಹೊರತಾಗಿ ತಾಪಮಾನ ಸದ್ಯಕ್ಕೆ ಇಳಿಕೆ ಆಗುವ ಲಕ್ಷಣಗಳು ಇಲ್ಲ. ಹೀಗೆ ಶಾಖದ ಅಲೆ ಮುಂದುವರೆಯು ಲಕ್ಷಣಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.












Click it and Unblock the Notifications