ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಫಲಿತಾಂಶ 2015: ಹೈಲೈಟ್ಸ್

|
Google Oneindia Kannada News

ಬೆಂಗಳೂರು, ಮೇ 18 : ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿದ್ಯಾರ್ಥಿಗಳು ಮುಂದಿನ ಭವಿಷ್ಯದತ್ತ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ. ದಕ್ಷಿಣ ಕನ್ನಡ ಮೊದಲ ಸ್ಥಾನ ಗಳಿಸಿಕೊಂಡಿದ್ದರೆ ರಾಜ್ಯದಲ್ಲಿ ಶೇ. 60 ಸಾಧನೆಯಾಗಿದೆ. ಕಳೆದ 10 ವರ್ಷದಲ್ಲೇ ಇದು ಅತ್ಯುತ್ತಮ ಸಾಧನೆಯಾಗಿದೆ.

ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೇ ಉತ್ತಮವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 6,10,323 ಅಭ್ಯರ್ಥಿಗಳಲ್ಲಿ 3,69,474 ಅಭ್ಯರ್ಥಿಗಳು ಪಾಸಾಗಿದ್ದಾರೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾಗಿದ್ದ 3,00,063 ಬಾಲಕಿಯರಲ್ಲಿ 2,04,743 ಮಂದಿ ಪಾಸಾಗಿದ್ದು, ಶೇ.68.24 ಫಲಿತಾಂಶ ಲಭಿಸಿದೆ.[ಪಿಯು ಟಾಪರ್ ಕುಡ್ಲದ ರಶ್ಮಿತಾ ಜೊತೆ ಚಿಟ್ ಚಾಟ್]

puc

ವಿದ್ಯಾರ್ಥಿನಿಯರೇ ಮೇಲುಗೈ: ಉತ್ತೀರ್ಣರಾದ ವಿದ್ಯಾರ್ಥಿನಿಯರ ಸಂಖ್ಯೆ ಶೇಕಡ 68.24 ರಷ್ಟಾದರೆ, ವಿದ್ಯಾರ್ಥಿಗಳ ಸಂಖ್ಯೆ ಶೇ. 53.09. ಅತ್ಯುನ್ನತ - 38,363 ವಿದ್ಯಾರ್ಥಿಗಳು, ಪ್ರಥಮ ದರ್ಜೆ - 1,91,629 ವಿದ್ಯಾರ್ಥಿಗಳು. ಕಲಾ ವಿಭಾಗದಲ್ಲಿ 1,17,394 ( ಶೇ.51.12), ವಾಣಿಜ್ಯ ವಿಭಾಗ 1,39,932, (ಶೇ. 67.06) ವಿಜ್ಞಾನ ವಿಭಾಗದಲ್ಲಿ 1,12.148 (ಶೇ.65.19) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪೂರಕ ಪರೀಕ್ಷೆಗೆ ಅವಕಾಶ
ಉತ್ತರ ಪತ್ರಿಕೆಯ ಛಾಯಾ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 25 ಕೊನೆ ದಿನ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30. ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30. ಜೂನ್‌ 25ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 27.[ಪಿಯು ಜಿಲ್ಲಾವಾರು ರಿಸಲ್ಟ್: ದಕ್ಷಿಣ ಕನ್ನಡ 1, ಗದಗ 31]

47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
55 ಕಾಲೇಜುಗಳು ನೂರು ಸಾಧನೆ ಮಾಡಿವೆ. ಆದರೆ 47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೂನ್ಯ ಸಂಪಾದನೆ ಪ್ರಮಾಣ ಹೆಚ್ಚಾಗಿದೆ. 1 ಸರ್ಕಾರಿ ಕಾಲೇಜು, 44 ಅನುದಾನ ರಹಿತ ಕಾಲೇಜುಗಳು, 2 ವಿಘಭಜಿತ ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

ಕಾಲೇಜುವಾರು ಫಲಿತಾಂಶ
ಕಾಲೇಜುವಾರು ಫಲಿತಾಂಶದಲ್ಲಿ ಅನುದಾನ ರಹಿತ ಕಾಲೇಜುಗಳೇ ಮುಂದಿವೆ. ಅನುದಾನ ರಹಿತ ಕಾಲೇಜುಗಳು ಶೇ, 73.23, ಸರ್ಕಾರಿ ಪದವಿ ಕಾಲೇಜುಗಳು ಶೇ. 63, ಅನುದಾನಿತ ಕಾಲೇಜುಗಳು ಶೇ. 66, ಕಾರ್ಪೋರೇಶನ್ ಕಾಲೇಜು ಶೇ. 63 ಮತ್ತು ವಿಭಜಿತ ಕಾಲೇಜುಗಳು ಶೇ. 72 ಸಾಧನೆ ಮಾಡಿವೆ.

ಅಂಗವಿಕಲರ ಸಾಧನೆ
ಅಂಧರು, ಕಿವುಡರು, ಮೂಗರು ಸೇರಿದಂತೆ ಅಂಗವಿಕಲರು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. 269 ಅಂಧರು ಸೇರಿದಂತೆ ಒಟ್ಟು 972 ಜನ ಅಂಗವಿಕಲರು ಪಾಸಾಗಿದ್ದಾರೆ.[2015ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ]

ಮಾಧ್ಯಮವಾರು ಸಾಧನೆ
ಕನ್ನಡ ಮಾಧ್ಯಮದಲ್ಲಿ ಶೇ. 53 ಸಾಧನೆಯಾಗಿದ್ದರೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಶೇ. 66 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ವಿಭಾಗದಲ್ಲಿ ಮನಗರ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ.

English summary
Karnataka 2nd PU results 2015 announced by Department of Pre-University Education (UAE) on 18th May 2015. Totally 60.54 percent students pass out. Here are the highlights of 2nd PUC result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X