Karnataka 2nd PUC Result 2025: SMS ಮೂಲಕ ದ್ವಿತೀಯ ಪಿಯುಸಿ ರಿಸಲ್ಟ್ ನೋಡುವುದು ಹೇಗೆ ?
Karnataka 2nd PUC Result 2025: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶವು ಏಪ್ರಿಲ್ 8ರಂದು (ಮಂಗಳವಾರ) ಪ್ರಕಟವಾಗುತ್ತಿದೆ. ಇಂದು ಮಧ್ಯಾಹ್ನ 12.30ರ ನಂತರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್ karnatakaresult.nic.in 2025ನಲ್ಲಿ ಲಭ್ಯವಿರಲಿದೆ. ಆದರೆ ಏಕಕಾಲಕ್ಕೆ ಲಕ್ಷಾಂತರ ಜನ ಪಿಯು ಫಲಿತಾಂಶವನ್ನು ಚೆಕ್ ಮಾಡುವುದರಿಂದ ವೆಬ್‌ಸೈಟ್ ಸ್ಲೋ ಆಗುವ ಸಾಧ್ಯತೆ ಇರುತ್ತದೆ. ಇಲ್ಲವೇ ಹೆಚ್ಚು ಒತ್ತಡದಿಂದ ತುಸು ವಿಳಂಬವೂ ಆಗಬಹುದು. ಇದಕ್ಕಾಗಿ ನೀವು ಕೇವಲ ಒಂದು ಎಸ್‌ಎಂಎಸ್‌ನ ಮೂಲಕವೂ ರಿಸಲ್ಟ್ ನೋಡಬಹುದಾಗಿದೆ. ಅದರ ವಿವರ ಇಲ್ಲಿದೆ.
ಕರ್ನಾಟಕದ ಶಾಲಾ ಶಿಕ್ಷಣ ಸಚಿವರು ಇಂದು ಮಧ್ಯಾಹ್ನ 12:30ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದು. ದ್ವಿತೀಯ ಪಿಯುಸಿಯ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಯಾವ ಜಿಲ್ಲೆಯ ರ್ಯಾಂಕ್ ಏನಿದೆ ಹಾಗೂ ಒಟ್ಟಾರೆ ಫಲಿತಾಂಶ ಯಾವ ರೀತಿ ಇರಲಿದೆ ಎನ್ನುವುದನ್ನು ವಿವರಿಸಲಿದ್ದಾರೆ. ವಿದ್ಯಾರ್ಥಿಗಳು ಪಿಯುಸಿ 2025 ಪ್ರವೇಶ ಪತ್ರಗಳಲ್ಲಿ ಕೊಡಲಾಗಿರುವ ಅಥವಾ ನಮೂದಿಸಲಾಗಿರುವ ರಿಜಿಸ್ಟ್ರೇಷನ್ ಸಂಖ್ಯೆಯ ಮೂಲಕ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ.

ಪಿಯುಸಿ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಷನ್ ಸಂಖ್ಯೆಯ ಮೂಲಕ ಪಿಯುಸಿ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದಾಗಿದೆ. ಒಂದೊಮ್ಮೆ ಭಾರೀ ಸೈಟ್ ಟ್ರಾಫಿಕ್ ಜಾಮ್ ಎದುರಾದರೆ, ನೀವು ಕೇವಲ ಎಸ್‌ಎಂಎಸ್‌ನ ಮೂಲಕವೂ ದ್ವಿತೀಯ ಪಿಯುಸಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಅದು ಹೇಗೆ ಎನ್ನುವ ಸಂಪೂರ್ಣ ವಿವರ ನೋಡೋಣ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ಫಲಿತಾಂಶವನ್ನು karresults.nic.in ಹಾಗೂ kseeb.kar.nic.in ವೆಬ್‌ಸೈಟ್‌ಗಳಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಒಂದೊಮ್ಮೆ ಈ ವೆಬ್‌ಸೈಟ್‌ಗಳು ಬ್ಯುಸಿಯಾಗಿದ್ದು. ವಿಳಂಬವಾದರೆ ಇಲ್ಲವೇ ನಾವು ಸುಲಭವಾಗಿ ದ್ವಿತೀಯ ಪಿಯುಸಿ ಫಲಿತಾಂಶ ಚೆಕ್ ಮಾಡಬೇಕು ಎಂದಾದರೆ, ವಿದ್ಯಾರ್ಥಿಗಳು ಮೊಬೈಲ್ ಫೋನ್‌ನಿಂದಲೇ ರಿಸಲ್ಟ್ ನೋಡುವುದಕ್ಕೆ ಅವಕಾಶ ಇದೆ. ಅದು ಹೇಗೆ ಎನ್ನುವ ಸರಳ ಮಾಹಿತಿ ಇಲ್ಲಿದೆ.
ಎಸ್‌ಎಂಎಸ್ ಮೂಲಕ 2nd Puc Result
ಇನ್ನು ನೀವು Karnataka 2nd PUC Result 2025 ಅನ್ನು ಎಸ್‌ಎಂಎಸ್‌ನ ಮೂಲಕವೂ ನೋಡುವುದಕ್ಕೆ ಅವಕಾಶ ಇದೆ. ಎಸ್‌ಎಂಎಸ್‌ನ ಮೂಲಕ ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ.
* ನಿಮ್ಮ ಮೊಬೈಲ್‌ನಲ್ಲಿ ಎಸ್‌ಎಂಎಸ್ ಅಪ್ಲಿಕೇಶನ್ ಓಪನ್ ಮಾಡಿ.
* 'KAR12' ಎಂದು ಟೈಪ್ ಮಾಡಿಕೊಳ್ಳಿ ನಂತರ ಒಂದು ಸ್ಪೇಸ್ ಕೊಡಿ, ನಿಮ್ಮ ಪಿಯು ರಿಜಿಸ್ಟ್ರರ್ ಸಂಖ್ಯೆಯನ್ನು ಟೈಪ್ ಮಾಡಿ.
* ಈ ಸಂದೇಶವನ್ನು 56263 ಸಂಖ್ಯೆಗೆ ಕಳುಹಿಸಿ.
* ಈ ರೀತಿ ಮಾಡಿದ ಮೇಲೆ ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶವು SMSಗೆ ಬರಲಿದೆ.
ಇನ್ನು ಈ ಬಾರಿ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಈ ಬಾರಿಯ ಫಲಿತಾಂಶಗಳು ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಶಿಕ್ಷಣ ತಜ್ಞರಲ್ಲೂ ಇದೆ.












Click it and Unblock the Notifications