Get Updates
Get notified of breaking news, exclusive insights, and must-see stories!

ವಿಡಿಯೊ ಮಾಡಿಸಿಕೊಂಡ ಸಾಹುಕಾರನಿಗೆ ಟಿಕೆಟ್‌, ವಿಡಿಯೊ ನೋಡಿದ ಸಾಹುಕಾರನಿಗಿಲ್ಲ: ಇದು ಭಾರತೀಯ ಜೋಕರ್ಸ್‌ ಪಾರ್ಟಿ ಎಂದ ಅನುಪಮ ಶೆಣೈ

ಬೆಂಗಳೂರು, ಏಪ್ರಿಲ್‌ 14: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಇವೆ. ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಮಾಜಿ ಡಿಸಿಎಂ ಹಾಗೂ ಬಿಜೆಪಿ ಎಂಎಲ್‌ಸಿ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಅವರು ಕಾಂಗ್ರೆಸ್‌ ಕಡೆಗೆ ಮುಖ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ರಮೇಶ್‌ ಜಾರಕಿಹೊಳಿ ಹಾಗೂ ಅವರ ನಿಷ್ಠಾವಂತರಿಗೆ ಬಿಜೆಪಿ ಮಣೆ ಹಾಕಿದೆ. ಅಥಣಿಯಿಂದ ಮಹೇಶ್‌ ಕುಮಠಳ್ಳಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಮಹೇಶ್‌ ಕುಮಠಳ್ಳಿ ಅವರು ರಮೇಶ್‌ ಜಾರಕಿಹೊಳಿ ಅವರ ನಿಷ್ಠಾವಂತರು. ರಮೇಶ್‌ ಜಾರಕಿಹೊಳಿ ಅವರು ಗೋಕಾಕದಿಂದ ಟಿಕೆಟ್‌ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

Karnatak Elections: IPS officer trolls BJP for not giving ticket to laxman Savadi

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಮಾಜಿ ಐಪಿಎಸ್‌ ಅಧಿಕಾರಿ ಅನುಪಮ ಶೆಣೈ ಅವರು, 'Full HDಯಲ್ಲಿ ವಿಡಿಯೋ ಮಾಡಿಸಿಕೊಂಡ ಸಾಹುಕಾರನಿಗೆ ಟಿಕೆಟ್ ಉಂಟು. ವಿಡಿಯೋ ನೋಡಿದ ಸವದಿಗೆ ಟಿಕೆಟ್ ಇಲ್ಲ! ಜನರಿಗೆ ಯಾರು ಹೆಚ್ಚು ಮನರಂಜನೆ ನೀಡಿದ್ದಾರೆ ಎಂಬ ಆಧಾರದ ಮೇಲೆ ಟಿಕೆಟ್ ನೀಡಿರಬಹುದು' ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿಗೆ 'ಭಾರತೀಯ ಜೋಕರ್ಸ್‌ ಪಾರ್ಟಿ' ಎಂದೂ ಅವರು ಮೂದಲಿಸಿದ್ದಾರೆ.

ಇದನ್ನು ರಿಟ್ವೀಟ್‌ ಮಾಡಿಕೊಂಡಿರುವ ಟ್ವಿಟಿಗರೊಬ್ಬರು ಎಂಬುವವರು, 'ಕರ್ಮ ಕಾಂಡ ಬಿಜೆಪಿ ದು...ಅವರಾ ಪ್ರಕಾರ ಪ್ರಾಕ್ಟಿಕಲ್‌ಗೆ ಮಾನ್ಯತೆ ಜಾಸ್ತಿ ಥಿಯರಿಗಿಂತ' ಎಂದು ಟ್ರೋಲ್‌ ಮಾಡಿದ್ದಾರೆ.

ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‌ಬೈ

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ದೊರೆಯದಿದ್ದಕ್ಕಾಗಿ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಕೇಸರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬುಧವಾರ ಘೋಷಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಬಿಜೆಪಿಯಿಂದ ಟಿಕೆಟ್ ದೊರೆತಿದೆ. ಲಕ್ಷ್ಮಣ ಸವದಿ ಅವರು ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದರು.

ಈ ವಿಚಾರವಾಗಿ ಅಥಣಿಯಲ್ಲಿ ಮಾತನಾಡಿರುವ ಅವರು, 'ನಾನು ಖಂಡಿತವಾಗಿಯೂ ನಿರ್ಧಾರ ತೆಗೆದುಕೊಂಡಿದ್ದೇನೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ' ಎಂದು ಸವದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅವರು ಕಾಂಗ್ರೆಸ್‌ ಪಕ್ಷವನ್ನು ಸೇರುವುದು ಬಹುತೇಕ ಖಚಿವಾಗಿದೆ. ಗುರುವಾರ ಸಂಜೆ ಅಥಣಿಯಲ್ಲಿ ಬೆಂಬಲಿಗರ ಸಭೆ ನಡೆಸಿರುವ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ

ಕಳೆದ 20 ವರ್ಷಗಳಿಂದ ತಮಗೆ ಸಹಕಾರ ನೀಡಿದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಅವರ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

ಬಿಜೆಪಿಯಿಂದ ತಮಗೆ ಆಗಿರುವ ಅನ್ಯಾಯ ಸ್ವೀಕಾರಾರ್ಹವಲ್ಲ ಎಂದು ಹೇಳಿದ ಸವದಿ, ಅಥಣಿಯಿಂದ ಪಕ್ಷದ ಅಭ್ಯರ್ಥಿಯಾಗುವುದಿಲ್ಲ ಎಂದು ಪಕ್ಷದ ವರಿಷ್ಠರು ಐದಾರು ತಿಂಗಳ ಹಿಂದೆಯೇ ಹೇಳಬಹುದಿತ್ತು ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ಗೆ ಹೋಗುತ್ತಿದ್ದಾಗ ಅವರನ್ನು ಬಿಜೆಪಿಗೆ ಕರೆತಂದದ್ದು ನಾನು ಮತ್ತು ಸಿ ಸಿ ಪಾಟೀಲರು ಎಂದು ಹೇಳಿದರು. ನಾವು ಬೊಮ್ಮಾಯಿ ಅವರನ್ನು ಯಡಿಯೂರಪ್ಪ ಅವರ ನಿವಾಸಕ್ಕೆ ಕರೆದೊಯ್ದು, ಅವರಿಗೆ ಅಸೆಂಬ್ಲಿ ಸ್ಥಾನಕ್ಕೆ ಉಮೇದುವಾರಿಕೆ ನೀಡಿದ್ದೆವು. ಅವರು ಮಂತ್ರಿಯಾದರು ಮತ್ತು ನಂತರ ಮುಖ್ಯಮಂತ್ರಿಯಾದರು ಎಂದು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+