Kannadigas Jobs: ಬೆಂಗಳೂರಿನ IT-BTಯಲ್ಲಿ ಪ್ರಾರಂಭವಾಗಿದ್ದ ವಿಷಯ ಇದೀಗ ಕರ್ನಾಟಕದಾದ್ಯಂತ!, ಕರವೇ ಹೇಳಿದ್ದೇನು

ಬೆಂಗಳೂರು: ಬೆಂಗಳೂರಿನ ಐಟಿ - ಬಿಟಿಯಲ್ಲಿ ಕನ್ನಡ ಬಳಕೆ ಕಡಿಮೆಯಾಗಿದೆ ಹಾಗೂ ಕನ್ನಡಿಗರೊಂದಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎನ್ನುವುದನ್ನು ವಿರೋಧಿಸಿ ಪ್ರಾರಂಭವಾಗಿದ್ದ ಅಭಿಯಾನವು ಇದೀಗ ಕರ್ನಾಟಕದಾದ್ಯಂತ ವಿಸ್ತರಿಸಿದೆ.

ಐಟಿ ಬಿಟಿ ಸಂಸ್ಥೆಗಳೂ ಸೇರಿದಂತೆ ಕರ್ನಾಟಕದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ, ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ʻಆಗ್ರಹ ಅಭಿಯಾನʼವನ್ನು ಆರಂಭಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ಹೇಳಿದ್ದಾರೆ.

Kannadigas Jobs Moment That Began Bengaluru IT-BT Sector Spreads Across Karnataka What Does KRV Say

ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಇಂದು ಹಲವು ತಂಡಗಳಲ್ಲಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇರುವ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ರಹ ಪತ್ರವನ್ನು ಸಲ್ಲಿಸಿದರು. ಖಾಸಗಿ ಸಂಸ್ಥೆಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಮಾಹಿತಿ ಒದಗಿಸುವ ಮತ್ತು ಕನ್ನಡಿಗರಿಗೆ ಉದ್ಯೋಗ ಖಾತರಿಪಡಿಸುವ ಭರವಸೆಗಳು ದೊರಕಿವೆ.

ನಾನು ಹಿಂದೆಯೇ ಹೇಳಿದಂತೆ ಇದು ಅಭಿಯಾನ, ಪ್ರತಿಭಟನೆ ಅಲ್ಲ. ಗೊಂದಲ ಸೃಷ್ಟಿಸುವ ಅಥವಾ ನೈತಿಕ ಪೊಲೀಸ್‌ ಗಿರಿ ಮಾಡುವ ಚಟುವಟಿಕೆ ಅಲ್ಲ. ನಮ್ಮ ಮುಖಂಡರು ಎಲ್ಲ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು/ಪ್ರತಿನಿಧಿಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಉದ್ಯೋಗಾವಕಾಶಗಳ ಸಿಂಹಪಾಲನ್ನು ಕನ್ನಡಿಗರಿಗೇ ನೀಡಬೇಕು ಎಂಬುದು ನಮ್ಮ ಆಗ್ರಹ. ಈ ಸಂಸ್ಥೆಗಳ ನೈತಿಕ, ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಕರ್ನಾಟಕ ರಕ್ಷಣಾ ವೇದಿಕೆ ಐಟಿ-ಬಿಟಿ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳ ವಿರುದ್ಧವೂ ಪೂರ್ವಾಗ್ರಹ ಹೊಂದಿಲ್ಲ. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬ ನಮ್ಮ ನಿಲುವನ್ನು ತಾತ್ವಿಕವಾಗಿ ಅವರೂ ಒಪ್ಪುತ್ತಾರೆ ಎಂಬ ಭರವಸೆ ನಮಗಿದೆ. ಆದರೆ ಈ ಸಂಸ್ಥೆಗಳ ಪ್ರತಿನಿಧಿಗಳೆಂಬಂತೆ, ರಾಯಭಾರಿಗಳೆಂಬಂತೆ ಮಾತನಾಡುವ ಕೆಲವರು ಕನ್ನಡಿಗರ ಹಕ್ಕುಗಳ ವಿರುದ್ಧ ಮಾತನಾಡುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.

ಆಗ್ರಹ ಅಭಿಯಾನ ರಾಜ್ಯದ ಎಲ್ಲ ಭಾಗಗಳಲ್ಲೂ ಆರಂಭಗೊಂಡಿದೆ. ಈ ಅಭಿಯಾನ ನವೆಂಬರ್‌ ತಿಂಗಳಿನ ಉದ್ದಕ್ಕೂ ನಡೆಯಲಿದೆ. ಇದಾದ ಖಾಸಗಿ ಸಂಸ್ಥೆಗಳು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಒದಗಿಸಿದ ನಂತರ ರಾಜ್ಯ ಸರ್ಕಾರಕ್ಕೆ ಒಂದು ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದೂ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಟಿ.ಎ ಅವರು ತಿಳಿಸಿದ್ದಾರೆ.

ಕನ್ನಡಿಗರ ಉದ್ಯೋಗಾವಕಾಶ; ಸ್ವಾಭಿಮಾನ: ಪ್ರದೀಪ್ ಈಶ್ವರ್ ಹೇಳಿದ್ದೇನು ?

ಕನ್ನಡಿಗರ ಉದ್ಯೋಗಾವಕಾಶ ಮತ್ತು ಸ್ವಾಭಿಮಾನದ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿದ್ದಾರೆ. ಐಟಿ-ಬಿಟಿ (IT-BT) ವಲಯದಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳು ಮತ್ತು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತೆಗೆದುಕೊಂಡಿರುವ ದೃಢ ನಿಲುವನ್ನು ನಾನು ಬಲವಾಗಿ ಬೆಂಬಲಿಸುತ್ತೇನೆ. ನಮ್ಮ ಯುವಜನರ ಭವಿಷ್ಯ, ಉದ್ಯೋಗ ಮತ್ತು ಸ್ವಾಭಿಮಾನದ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+