Get Updates
Get notified of breaking news, exclusive insights, and must-see stories!

"ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಮುಗ್ಗಟ್ಟು; ಸಿದ್ದರಾಮಯ್ಯ ಕನ್ನಡ ದ್ರೋಹಿ"

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಅಭಿಮಾನಿಗಳು ಕನ್ನಡರಾಮಯ್ಯ ಎಂದು ಕರೆಯುವುದು ಸಹ ಇದೆ. ಆದರೆ ಇದೀಗ ಜೆಡಿಎಸ್ ಪಕ್ಷವು ಕನ್ನಡ ದ್ರೋಹಿ ಸಿದ್ದರಾಮಯ್ಯ ಅವರೇ ಎಂದು ಹೇಳಿದೆ. ಕನ್ನಡಿಗರ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ನಿತ್ಯ ಚಟುವಟಿಕೆಗಳಿಗೆ ಹಾಗೂ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರು ವೇತನಕ್ಕೂ ಪರದಾಡುವಂತಾಗಿದೆ.

ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುದಾನಗಳನ್ನು ನೀಡದೆ ಪರೋಕ್ಷವಾಗಿ ಕೊಲ್ಲುವ ಅಮಾನವೀಯವಾದ ಕೆಲಸವನ್ನು ಮಾಡುತ್ತಿರುವ ಕನ್ನಡ ದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಕನ್ನಡದ ಕೆಲಸಗಳಿಗೆ, ಕನ್ನಡದ ಜ್ಞಾನ ವಿಕಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವುದು ಅತ್ಯಂತ ನಾಚಿಕೆಗೇಡಿನ ವಿಚಾರ. 2020ರಲ್ಲಿ ವಿಪಕ್ಷ ನಾಯಕರಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅನುದಾನ ವಿಚಾರವಾಗಿ ಅಂದಿನ ಸರ್ಕಾರವನ್ನು ಟೀಕಿಸಿದ್ದು ಆ ನಿಮ್ಮ ಮಾತುಗಳು ನೆನಪಿದೆಯೇ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

Hampi

ರಾಶಿ ರಾಶಿಯಾಗಿ ಶಾಸಕರನ್ನು, ಸರಕಾರದ ಪಕ್ಷದ ಹಿಂಬಾಲಕರುಗಳನ್ನು ಈ ಕೆಟ್ಟ ಕಾಲದಲ್ಲಿ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಿ ಅವರುಗಳಿಗೆ ಸಚಿವ ಸಂಪುಟ ದರ್ಜೆ ಸ್ಥಾನ ಮಾನ ನೀಡಿ ನೂರಾರು ಕೋಟಿ ಹಣವನ್ನು ದುಂದು ಮಾಡಲಾಗುತ್ತಿದೆ. ಹಸಿದವನ ಹೊಟ್ಟೆಗೆ ಅನ್ನ, ಬಟ್ಟೆ ಮತ್ತು ಭಾಷೆಯ ಕೆಲಸಗಳಿಗೆ ಹಣ ನೀಡದ ಸರಕಾರ ನಾಡ ದ್ರೋಹಿ ಸರ್ಕಾರವೆನ್ನಿಸಿಕೊಳ್ಳುತ್ತದೆ. ರೈತರ, ಕಾರ್ಮಿಕರ ಮತ್ತು ನಾಡ ಭಾಷಿಕರ ಸಿಟ್ಟಿಗೆ ಗುರಿಯಾದ ಸರ್ಕಾರಗಳು ಹಿಂದೆಲ್ಲಾ ಧೂಳೀಪಟವಾಗಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಕನ್ನಡ ವಿಶ್ವ ವಿದ್ಯಾಲಯವೂ ಸೇರಿದಂತೆ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದೀರಿ.

ಈಗ ನಿಮ್ಮ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದು, ಕನ್ನಡ ದ್ರೋಹಿ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ನಾಡಿನ ಏಕೈಕ ಭಾಷಾ ಸಂಶೋಧನಾ ವಿಶ್ವ ವಿದ್ಯಾಲಯ ಎಂಬ ಹೆಗ್ಗಳಿಕೆಯೊಂದಿಗೆ ಸ್ಥಾಪನೆಯಾಗಿರುವ ಹಂಪಿ ವಿವಿಯಲ್ಲಿ ವರ್ಷಗಳಿಂದ ಅನುದಾನದ ಕೊರತೆಯಿಂದ ಉಪನ್ಯಾಸಕರು, ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಗೆ ಸಂಬಳವಾಗಿಲ್ಲ. ಹಣಕಾಸಿನ ಸಮಸ್ಯೆಯಿಂದ ವಿವಿಯಲ್ಲಿ ನಿತ್ಯ ಚಟುವಟಿಕೆಗಳು ಸೇರಿದಂತೆ ಸಂಶೋಧನಾ ಕೆಲಸಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಫೆಬ್ರವರಿ 25ರಂದು 34ನೇ ನುಡಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಕನ್ನಡದ ಬಗ್ಗೆ ಕಾಳಜಿ ಇದ್ದರೇ ರಾಜ್ಯ ಸರ್ಕಾರ ಎಚ್ಚೆತ್ತು ಅಗತ್ಯವಿರುವಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಜೆಡಿಎಸ್ ಪಕ್ಷವು ಒತ್ತಾಯಿಸುತ್ತದೆ ಎಂದು ಟ್ವೀಟ್ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+