Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ನಾಳೆ ಕನ್ನಡ-ತಮಿಳು ಭಾಷಿಕರ ಐಕ್ಯತಾ ಸಮಾವೇಶ, ಏನಿದರ ಉದ್ದೇಶ?

ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಸಾಮರಸ್ಯವನ್ನು ಬೆಳೆಸುವ ಗುರಿಯೊಂದಿಗೆ ಅಕ್ಟೋಬರ್ 20ರಂದು (ನಾಳೆ) ಬೆಂಗಳೂರಿನಲ್ಲಿ ಕರ್ನಾಟಕ ಕನ್ನಡ-ತಮಿಳು ಐಕ್ಯತಾ ಮತ್ತು ಸಾಂಸ್ಕೃತಿಕ ಸಮ್ಮೇಳನ ನಡೆಯಲಿದೆ.

ಈ ಕಾರ್ಯಕ್ರಮವು ಎರಡೂ ಭಾಷಿಕರ ನಡುವಿನ ಸಾಂಸ್ಕೃತಿಕ ಅಂತರವನ್ನು ನಿವಾರಿಸುವುದು ಹಾಗು ಐಕ್ಯತೆಯನ್ನು ಸಾರುವ ಉದ್ದೇಶವನ್ನು ಹೊಂದಿದೆ ಎಂದು ಮದರ್‌ ಟಂಗ್‌ ಫೆಡರೇಷನ್‌ನ ಸಂಘಟಕರು ಹಾಗೂ ಮುಖ್ಯ ಸಂಯೋಜಕರಾದ ಎಸ್‌.ಡಿ.ಕುಮಾರ್‌ ಅವರು ಹೇಳಿದ್ದಾರೆ.

Kannada-Tamil Unity Conference Will Be Held In Bengaluru Tomorrow

ಕರ್ನಾಟಕದಲ್ಲಿ ವಾಸಿಸುವ ತಮಿಳು ಭಾಷಿಕರು ಇಲ್ಲಿನ ಸಂಸ್ಕೃತಿಯನ್ನು ಅನುಸರಿಸುತ್ತಾರೆ ಹಾಗೂ ಇಲ್ಲಿನ ಭಾಷೆಯನ್ನೂ ಕಲಿತಿದ್ದಾರೆ. ಆದರೆ, ಕೆಲವರು ತಮಿಳು ಜನರನ್ನು ವೈರಿಗಳಂತೆ ನೋಡುತ್ತಿದ್ದಾರೆ. ಈ ವಾತಾವರಣವನ್ನು ಬದಲಿಸಬೇಕೆಂಬ ಉದ್ದೇಶದೊಂದಿಗೆ ಈ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.

ಕಾವೇರಿ ನೀರಿನ ಸಮಸ್ಯೆ ಸೇರಿದಂತೆ ಯಾವುದೇ ವಿಷಯದಲ್ಲಿ, ತಮಿಳು ಮಂದಿ ಕರ್ನಾಟಕದ ವಿರುದ್ಧವಾಗಿ ನಡೆದುಕೊಂಡಿಲ್ಲ. ಬೇರೆ ದೇಶಗಳಲ್ಲಿರುವವರೂ ಕೂಡ ಅಲ್ಲಿನ ಸಂಸ್ಕೃತಿಯನ್ನು ಅನುಸರಿಸುತ್ತಾರೆ ಹಾಗೂ ಇದನ್ನೇ ಬಯಸುತ್ತಾರೆ. ಕರ್ನಾಟಕದಲ್ಲೂ ಇದೇ ವಾತಾವರಣ ಸೃಷಿಸಬೇಕು ಎಂದು ಈ ಐಕ್ಯತಾ ಸಮಾವೇಶವನ್ನು ಎಲ್ಲ ಕನ್ನಡ ಪ್ರೇಮಿಗಳಿಗೆ ತಿಳಿಸಲು ನಡೆಸುತ್ತಿದ್ದೇವೆ ಎಂದಿದ್ದಾರೆ.

Kannada-Tamil Unity Conference Will Be Held In Bengaluru Tomorrow

ಈ ಬಾರಿ ಇದಕ್ಕೆ ಪೂರಕವಾಗಿ ಎಲ್ಲವೂ ಒಳ್ಳೆಯದೇ ನಡೆಯುತ್ತಿದೆ. ಕನ್ನಡ ಹೋರಾಟಗಾರರಾದ ನಾರಾಯಣಗೌಡ, ಪ್ರವೀಣ್ ಶೆಟ್ಟಿ ಅವರ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಇದೊಂದು ಹೊಸ ಅಧ್ಯಾಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಅರಮನೆ ಮೈದಾನದಲ್ಲಿ ನಾಳೆ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಈ ಐಕ್ಯತಾ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬರುವವರು ರಾಜಕುಮಾರಿ ದೇಗುಲದ ಗೇಟ್ ಸಂಖ್ಯೆ 9ರ ಮೂಲಕ ಪ್ರವೇಶ ಪಡೆಯಬಹುದು. ಇಲ್ಲಿ ಸಮಾವೇಶದ ಜೊತೆಗೆ ಆಹಾರೋತ್ಸವ ಕೂಡ ನಡೆಯಲಿದೆ ಎಂದು ವಿವರ ನೀಡಿದ್ದಾರೆ.

ಸಿಟಿ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್ ರೈಲು ನಿಲ್ದಾಣ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬೆಳಿಗ್ಗೆ 8ರಿಂದ 10ರ ನಡುವೆ ಇತರ ಸ್ಥಳಗಳಿಂದ ಈ ಸಮಾವೇಶಕ್ಕೆ ಬರುವವರಿಗೆ ಸಾರಿಗೆ ವ್ಯವಸ್ಥೆ ಕೂಡ ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಾಕ್ಷಿಯಾಗಿರುವ ಈ ಅಪರೂಪದ ಕಾರ್ಯಕ್ರಮಕ್ಕೆ ತಮಿಳುನಾಡಿನ ರಾಜಕೀಯ ನಾಯಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ತಮಿಳುನಾಡು ಸೇರಿದಂತೆ ಐಕ್ಯತೆಯನ್ನು ಬಯಸುವ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದಿದ್ದಾರೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಭಾಷಣದೊಂದಿಗೆ ಈ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಪರಮೇಶ್ವರ್‌ ವಿಶೇಷ ಭಾಷಣ ಮಾಡಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್ ಇರಲಿದ್ದಾರೆ. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮದ ವಿಶೇಷ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ.

ಈ ಸಮ್ಮೇಳನವು ಯಾವುದೇ ರಾಜಕೀಯ ಅಥವಾ ಜಾತಿಗೆ ಸಂಬಂಧಸಿದ್ದಲ್ಲ. ತಮಿಳರು ಮತ್ತು ಕನ್ನಡಿಗರನ್ನು ಒಗ್ಗೂಡಿಸುವುದೇ ಇದರ ಉದ್ದೇಶ. ಇದಕ್ಕಾಗಿ ಡಾ.ಎಸ್.ಡಿ.ಕುಮಾರ್ ಅವರು ಕರ್ನಾಟಕದಾದ್ಯಂತ ಪ್ರವಾಸ ಮಾಡಿ ರಾಜ್ಯಾದ್ಯಂತ ತಮಿಳು ಸಂಘಟನೆಗಳಿಂದ ಈ ಸಮಾವೇಶಕ್ಕೆ ಬೆಂಬಲ ಕೂಡ ಪಡೆದಿದ್ದಾರೆ.

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ತಮಿಳರು ಒಂದೇ ವೇದಿಕೆಯಲ್ಲಿ ಒಗ್ಗೂಡುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳಲ್ಲಿ ಪ್ರಾತಿನಿಧ್ಯವನ್ನು ಹೊಂದಿದ್ದರೂ, ತಮಿಳರು ಇಲ್ಲಿಯವರೆಗೆ ಒಗ್ಗಟ್ಟಿನ ಕೊರತೆಯಿಂದಾಗಿ ಸಂಸದರು ಅಥವಾ ಶಾಸಕರ ಸ್ಥಾನ ಅಲಂಕರಿಸಿಲ್ಲ. ಒಟ್ಟಾರೆ ಈ ಸಮಾವೇಶವು ಕರ್ನಾಟಕದ ಎಲ್ಲ ತಮಿಳರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ ಎಂದು ಎಸ್.ಡಿ.ಕುಮಾರ್ ವಿವರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+