ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಈಶಾನ್ಯ ರಾಜ್ಯದ ಕಾರ್ಮಿಕರು

Posted By:
Subscribe to Oneindia Kannada

ರಾಯಚೂರು, ಡಿಸೆಂಬರ್ 1: ರಾಯಚೂರಿನಲ್ಲಿ ಶುಕ್ರವಾರದಿಂದ ನಡೆಯಲಿರುವ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಈಶಾನ್ಯ ರಾಜ್ಯದ ನೌಕರರನ್ನು ಕರೆ ತರಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಮ್ಮೇಳನದ ಪ್ರಧಾನ ವೇದಿಕೆ. ಸಭಾಂಗಣ, ಮಳಿಗೆ ಮತ್ತು ಭೋಜನ ಶಾಲೆಯ ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ ರಾಜ್ಯದಲ್ಲಿ ಲಭ್ಯವಿದ್ದರೂ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮತ್ತು ಪಶ್ಚಿಮ ಬಂಗಾಳ ಆಂಧ್ರ ಪ್ರದೇಶ, ತಮಿಳು ನಾಡಿನ ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ಸ್ಥಳೀಯ ಕಾರ್ಮಿಕರು ತಿಳಿಸಿದರು.[ರಾಯಚೂರು ಜಿಲ್ಲಾ ಸರ್ಕಾರಿ ನೌಕರರ 1 ದಿನದ ವೇತನಕ್ಕೆ ಕತ್ತರಿ]

kannada sahithya sammela Forum build North-east of the state workers

ಸಾಹಿತ್ಯ ಸಮ್ಮೇಳನದ ವೇದಿಕೆ ಮತ್ತು ಸಭಾಂಗಣ ನಿರ್ಮಾಣದ ಗುತ್ತಿಗೆಯನ್ನು ರಾಜ ಎಂಟರ್ ಪ್ರೈಸಸ್ ಗೆ ನೀಡಲಾಗಿದೆ. ಈ ಸಂಸ್ಥೆಯಲ್ಲಿ 150 ಸ್ಥಳೀಯ ಕಾರ್ಮಿಕರು ಸೇರಿದಂತೆ 150 ಈಶಾನ್ಯ ರಾಜ್ಯದ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ ಎಂದು ಸಭಾ ಮಂಟಪ ನಿರ್ಮಾಣ ಹೊಣೆ ವಹಿಸಿಕೊಂಡಿರುವ ಸಂಸ್ಥೆಯ ಅಧಿಕಾರಿ ಆರ್. ಅನಿಲಕುಮಾರ್ ತಿಳಿಸಿದರು.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

ಈಗಾಗಲೆ ವೇದಿಕೆ ನಿರ್ಮಾಣ ಕಾರ್ಯಗಳೆಲ್ಲವೂ ಪೂರ್ಣಗೊಂಡಿದ್ದು ಕನ್ನಡಿಗರಿಗೂ ಅವಕಾಶ ನೀಡಿರುವುದರಿಂದ ಮುಂದಿನ ಸಮ್ಮೇಳನದಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡಿಗರಿಗೇ ಅವಕಾಶ ಕಲ್ಪಿಸಿಕೊಡುತ್ತಾರಾ ನೋಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Raichur 82nd kannada sahithya sammelana on December 2. The sammela Forum build North-east of the state workers are worked there. It is the issue of Local workers said
Please Wait while comments are loading...