ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಿ

By Vanitha
|
Google Oneindia Kannada News

ಬೆಂಗಳೂರು, ನವೆಂಬರ್, 02: ನವೆಂಬರ್ ತಿಂಗಳು ಬಂತೆಂದರೆ ಸಾಕು ":ಎಲ್ಲಾದರೂ ಇರು, ಎಂತಾದರೂ ಇರು..ಎಂದೆಂದಿಗೂ ನೀ ಕನ್ನಡವಾಗಿರು", "ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು" ಎನ್ನುವ ಕನ್ನಡ ಅಭಿಮಾನಭರಿತ ವಾಕ್ಯಗಳು ನಾಡಿನಾದ್ಯಂತ ಮೊಳಗುತ್ತದೆ. ಕನ್ನಡ ನಾಡಿನ ಹೆಮ್ಮೆಯ ಕೈಕಂಕರ್ಯಗಳ ಸ್ಮರಣೆಗೆ ಮುಖ್ಯ ವೇದಿಕೆಯಾಗಿ ಭಾಷೇತರರನ್ನು ಕನ್ನಡದ ಕಂದಮ್ಮಗಳನ್ನಾಗಿ ಮಾಡುತ್ತದೆ ಈ ನವೆಂಬರ್ ತಿಂಗಳು.

ಹೌದು.ಶಾಸ್ತ್ರೀಯ ಸ್ಥಾನ ಪಡೆದಿರುವ ಕನ್ನಡ ಭಾಷೆ, ಕನ್ನಡ ನಾಡು, ಸಾಹಿತ್ಯ, ಕವಿಪುಂಗವರ ಕುರಿತಾಗಿ ಹೇಳುತ್ತಾ ಸಾಗಿದರೆ, ಕನ್ನಡದಲ್ಲಿರುವ ಪದಗಳೇ ಸಾಕಾಗುವುದಿಲ್ಲ. ಅಷ್ಟೊಂದು ಸೊಗಸು, ಸೌಂದರ್ಯ, ಸೊಗಡುಗಳ ಒಟ್ಟಂದದ ಮಹಾಸಾಗರವೇ ನಮ್ಮ ಈ ಕರುನಾಡು.

ಕನ್ನಡ ರಾಜ್ಯೋತ್ಸವ ಸಮಾರಂಭದ ಸಂತೋಷದಲ್ಲಿ ಮಿಂದೇಳಲು ಜಿಲ್ಲೆ, ತಾಲೂಕು ಅಷ್ಟೇ ಯಾಕೆ ಹಿರಿಯರು, ಕಿರಿಯರು ಎಂಬ ಭೇದವಿಲ್ಲ. ಹಳದಿ ಕೆಂಪು ಬಾವುಟ, ಕನ್ನಡ ಸಿನಿಮಾ ಗೀತೆಗಳಿಗೆ ಮಕ್ಕಳು ಹಾಕುವ ಹೆಜ್ಜೆಗಳು, ನಮ್ಮ ಕನ್ನಡ ಕವಿಗಳ ಕನ್ನಡಪರ ಚಿಂತನೆಗಳು, ಪ್ರತಿಯೊಂದು ಬಡಾವಣೆಯಲ್ಲೂ ಮೊಳಗುವ ಕನ್ನಡದ ಹಾಡುಗಳು, ಅಬ್ಬಬ್ಬಾ ಇಡೀ ನವೆಂಬರ್ ತಿಂಗಳು ಕನ್ನಡಮಯ.[ಕನ್ನಡ ನುಡಿ ನಮ್ಮೆಲ್ಲರ ಬದುಕಿನ ಮಾಧ್ಯಮವಾಗಲಿ: ಎಚ್. ಕೆ ಪಾಟೀಲ್]

ಬನ್ನಿ 60ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ವಿಶೇಷ, ಎಲ್ಲವನ್ನು ಒಂದು ಸುತ್ತು ನೋಡಿಕೊಂಡು ಬರೋಣ.

ಕನ್ನಡಾಂಬೆ ಶರಣೋ ಶರಣು

ಕನ್ನಡಾಂಬೆ ಶರಣೋ ಶರಣು

60ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೂವು, ಹಾರಗಳಿಂದ ಸಿಂಗಾರಗೊಂಡ ಕನ್ನಡತಾಯಿ ಕನ್ನಡಿಗರ ಭಾಷಾಭಿಮಾನ ಕಂಡು ಮೊಗದಲ್ಲಿ ಮಂದಹಾಸ ತಂದುಕೊಂಡಳು.

ಇದು ಹಾಲಕ್ಕಿ ಸುಗ್ಗಿ ಕುಣಿತದ ಝಲಕ್

ಇದು ಹಾಲಕ್ಕಿ ಸುಗ್ಗಿ ಕುಣಿತದ ಝಲಕ್

ನಮ್ಮ ಕನ್ನಡ ನಾಡಿನ ಜಾನಪದ ನೃತ್ಯಗಳಲ್ಲಿ ಹಾಲಕ್ಕಿ ಸುಗ್ಗಿ ಕುಣಿತ ಬಹಳ ವಿಶೇಷ ವಿಭಿನ್ನ. ಪೈರು ಸಂಗ್ರಹಿಸಿದ ಖುಷಿಯಲ್ಲಿ ಮಿಂದೇಳುವ ಬುಡಕಟ್ಟು ಜನಾಂಗವೂ ತಮ್ಮದೇ ಆದ ವೇಷಭೂಷಣ ಧರಿಸಿ, ತಮ್ಮದೇ ಹಾಡಿನೊಂದಿಗೆ ಹೆಜ್ಜೆಹಾಕಿ ಸುಗ್ಗಿಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.

ಕನ್ನಡಾಭಿಮಾನ ಬಿಂಬಿಸಿದ ಶಾಲಾ ಬಾಲಕಿಯರು

ಕನ್ನಡಾಭಿಮಾನ ಬಿಂಬಿಸಿದ ಶಾಲಾ ಬಾಲಕಿಯರು

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಬಾವುಟ ಬಿಂಬಿಸುವ ಹಳದಿ ಕೆಂಪು ಬಣ್ಣದ ವಸ್ತ್ರ ತೊಟ್ಟ ಮಕ್ಕಳು ಕನ್ನಡದ ಹಾಡಿಗೆ ಬಹಳ ಸಂಭ್ರಮದಿಂದ ಹೆಜ್ಜೆ ಹಾಕಿದ ಬಾಲಕಿಯರ ಪರಿ ಇದು

ಸಂಗೊಳ್ಳಿ ರಾಯಣ್ಣ ಕಥೆಸಾರಿದ ಮಕ್ಕಳು

ಸಂಗೊಳ್ಳಿ ರಾಯಣ್ಣ ಕಥೆಸಾರಿದ ಮಕ್ಕಳು

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳು ಕನ್ನಡ ನಾಡಿಹ=ಗಾಗಿ ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಜನರ ಮೆಚ್ಚುಗೆಗೆ ಪಾತ್ರವಾದರು. ಅದರಲ್ಲಿ ಸಂಗೊಳ್ಳಿ ರಾಯಣ್ಣನ ಕಥೆ ಸಾರಿದ ಮಕ್ಕಳು ಎಲ್ಲರ ಗಮನ ಸೆಳೆದರು

ಕನ್ನಡನಾಡು ಹಸಿರುಮಯವಾಗಲಿ, ಅನ್ನದಾತ ಸುಖಿಭವ

ಕನ್ನಡನಾಡು ಹಸಿರುಮಯವಾಗಲಿ, ಅನ್ನದಾತ ಸುಖಿಭವ

ಕನ್ನಡನಾಡಿನಲ್ಲಿ ಮಯತುಂಬಿರುವ ಹಸಿರು ಇನ್ನಷ್ಟು ಸಮೃದ್ಧಗೊಳ್ಳಲಿ, ಕನ್ನಡಮ್ಮನ ಜೊತೆಗೆ ಭೂ ತಾಯಿಯೂ ಕಳೆಗಟ್ಟಲಿ, ತಾರಸಿ ಕೈತೊಟಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಿ ಎಂದು ಸಾರುತ್ತಾ ತೋಟಗಾರಿಕೆ ಇಲಾಖೆ ತನ್ನ ಉದ್ದೇಶವನ್ನು ಇರಿಸಿಕೊಂಡು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ನಾಡಿನ ಜೊತೆಗೆ ನನ್ನ

English summary
All over Karnataka has celebrated Kannada Rajyotsava on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X