ನವೆಂಬರ್ 15ರಂದು ರಾಜ್ಯೋತ್ಸವ ಪ್ರಶಸ್ತಿ, ಈ ಬಾರಿ 63 ಜನಕ್ಕೆ ಮಾತ್ರ
ಬೆಂಗಳೂರು, ನವೆಂಬರ್ 09: ಉಪಚುನಾವಣೆ ನೀತಿ ಸಂಹಿತೆ ಚಾಲ್ತಿಯಲ್ಲಿದ್ದ ಕಾರಣ ಮುಂದಕ್ಕೆ ಹೋಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 15 ರಂದು ವಿತರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.
63ನೇ ಕನ್ನಡ ರಾಜ್ಯೋತ್ಸವ ಇದಾಗಿರುವ ಕಾರಣ 63 ಜನರಿಗೆ ಮಾತ್ರವೇ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಈ ನಿಯಮವನ್ನು ಶಿಸ್ತಾಗಿ ಅಳವಡಿಸಲಾಗಿದೆ ಎಂದು ಜಯಮಾಲಾ ಹೇಳಿದ್ದಾರೆ.
ಸಾಹಿತ್ಯ, ಸಿನಿಮಾ, ಕ್ರೀಡೆ, ಸಾಮಾಜಿಕ ಸೇವೆ, ಪತ್ರಿಕೋದ್ಯಮ ಸೇರಿದಂತೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಉತ್ತಮಸ ಸಾಧನೆ ಮಾಡಿದ ಕನ್ನಡಿಗರಿಗೆ ಈ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

ರಾಜ್ಯೋತ್ಸವ ಪ್ರಶಸ್ತಿಯು ಭುವನೇಶ್ವರಿ ತಾಯಿಯ ಪ್ರತಿಮೆ, ನಗದು, ಫಲಕ, ಪ್ರಮಾಣ ಪತ್ರ, ಶಾಲು ಗಳನ್ನು ಒಳಗೊಂಡಿರುತ್ತದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಕಾರ್ಯಕ್ರಮವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಬಹುದಾದವರ ಪಟ್ಟಿಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ಸಮಿತಿಯು ತಯಾರಿಸುತ್ತದೆ. ಸಮಿತಿಯು ನೀಡಿದ ಪಟ್ಟಿಯಲ್ಲಿರುವವರಿಗೆ ಪ್ರಶಸ್ತಿ ನೀಡಲಾಗುತ್ತದೆ.












Click it and Unblock the Notifications